ರಾಮ್ ಚರಣ್ ವರ್ಷದ ಆದಾಯದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು

ರಾಮ್ ಚರಣ್ ಅವರ ಜನ್ಮದಿನದ ವಿಶೇಷವಾಗಿ ಅವರ ಆದಾಯ ಮತ್ತು ಐಷಾರಾಮಿ ಜೀವನ ಶೈಲಿಯ ಬಗ್ಗೆ ಮಾಹಿತಿ. ಅವರ ಮಾಸಿಕ ಗಳಿಕೆ 3 ಕೋಟಿ ರೂಪಾಯಿ, ಒಟ್ಟು ಆಸ್ತಿ 1400 ಕೋಟಿ ರೂಪಾಯಿ. ‘ಆರ್​ಆರ್​ಆರ್’ ಚಿತ್ರಕ್ಕಾಗಿ 45 ಕೋಟಿ ಚಾರ್ಜ್ ಮಾಡಿದ್ದ ರಾಮ್ ಚರಣ್, 34ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ರಾಯಭಾರಿ.

ರಾಮ್ ಚರಣ್ ವರ್ಷದ ಆದಾಯದಲ್ಲಿ ಬಿಗ್ ಬಜೆಟ್ ಸಿನಿಮಾ ಮಾಡಬಹುದು
ರಾಮ್ ಚರಣ್
Edited By:

Updated on: Mar 27, 2026 | 8:05 AM

ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಜನ್ಮದಿನ. ಅವರು ಪೆದ್ದಿ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕಡೆಯಿಂದ ಇಂದು ಏನಾದರೂ ಅಪ್​​​ಡೇಟ್ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಅವರ ಬರ್ತ್​​ಡೇ ಸಂದರ್ಭದಲ್ಲಿ ಅವರ ಸಂಭಾವನೆ ಹಾಗೂ ಅವರ ಐಷಾರಾಮಿ ಜೀವನದ ಬಗ್ಗೆ ಚರ್ಚೆಗಳು ನಡೆದಿವೆ. ಆ ಬಗ್ಗೆ ಇಲ್ಲಿದೆ ವಿವರ.

ರಾಮ್ ಚರಣ್ ಅವರ ಪ್ರತಿ ತಿಂಗಳ ಗಳಿಕೆ 3 ಕೋಟಿ ರೂಪಾಯಿ. ವಿವಿಧ ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅವರ ಆಸ್ತಿ 1400 ಕೋಟಿ ರೂಪಾಯಿ. ‘ಆರ್​ಆರ್​ಆರ್’ ಚಿತ್ರಕ್ಕಾಗಿ ಅವರು ಬರೋಬ್ಬರಿ 45 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದರು ಎನ್ನಲಾಗಿದೆ. ರಾಮ್ ಚರಣ್ ಅವರು ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಾರೆ. ಅವರು ಒಂದಲ್ಲ ಎರಡಲ್ಲ 34 ಬ್ರ್ಯಾಂಡ್​ಗಳಿಗೆ ಪ್ರಚಾರ ರಾಯಭಾರಿ ಆಗಿದ್ದಾರೆ ಎಂದರೆ ನಂಬಲೇಬೇಕು. ಪೆಪ್ಸಿ, ಅಪೊಲೋ ಜಿಯಾ, ಫ್ರೂಟಿ ಮೊದಲಾದ ಬ್ರ್ಯಾಂಡ್​ಗಳನ್ನು ಅವರು ಪ್ರಮೋಟ್​ ಮಾಡುತ್ತಾರೆ.

ಅವರ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಜುಬ್ಲಿ ಹಿಲ್ಸ್​ನಲ್ಲಿ 25 ಸಾವಿರ ಚದರ ಅಡಿಯ ಜಾಗ ಹೊಂದಿದ್ದು, ಐಷಾರಾಮಿ ಮನೆ ಇದೆ. ಇದರ ಬೆಲೆ 38 ಕೋಟಿ ರೂಪಾಯಿ ಎನ್ನಲಾಗಿದೆ. ಮುಂಬೈನಲ್ಲಿ ಮನೆ ಹೊಂದಿರುವ ಕೆಲವೇ ಕೆಲವು ದಕ್ಷಿಣದ ಸ್ಟಾರ್​ಗಳಲ್ಲಿ ರಾಮ್​ ಚರಣ್ ಹೆಸರೂ ಇದೆ. ಅವರು ಮುಂಬೈನಲ್ಲಿ ದುಬಾರಿ ಪೆಂಟ್​ಹೌಸ್ ಹೊಂದಿದ್ದಾರೆ. ಮುಂಬೈ ಹೋದಾಗ ಇಲ್ಲಿ ವಾಸಿಸುತ್ತಾರೆ.

ರಾಮ್ ಚರಣ್ ಬಳಿ ದುಬಾರಿ ಕಾರು ಹಾಗೂ ಜೆಟ್​ಗಳಿವೆ. TRUJet ಹೆಸರಿನ ಏರ್​ಲೈನ್ಸ್​ನ ರಾಮ್ ಚರಣ್ ಹೊಂದಿದ್ದರು. ಇವರ ಬಳಿ ಪ್ರೈವೆಟ್ ಜೆಟ್ ಕೂಡ ಇದೆ. ಇದರ ಜೊತೆಗೆ ಮರ್ಸಿಡೀಸ್​ಬೆಂಜ್ ಮೇಬ್ಯಾಷ್ ಜಿಎಲ್​ಎಸ್​ 600 ಇದೆ. ಇದರ ಬೆಲೆ 4 ಕೋಟಿ ರೂಪಾಯಿಗೂ ಅಧಿಕವಾಗಿದೆ. ಆಡಿ, ರೋಲ್ಸ್ ರಾಯ್ಸ್ ಪ್ಯಾಂಟಂ, ರೇಂಜ್ ರೋವರ್ ಆಟೋಬಯೋಗ್ರಫಿ, ಆಸ್ಟನ್ ಮಾರ್ಟಿನ್, ಫೆರಾರಿ ಕಾರುಗಳ ಒಡೆಯ ಅವರಾಗಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಒಟ್ಟೂ ಆಸ್ತಿ ಎಷ್ಟು? ಗಳಿಕೆ ಹೇಗೆಲ್ಲ ಆಗುತ್ತೆ?

ರಾಮ್ ಚರಣ್ ಅವರು ಪತ್ನಿ ಉಪಾಸನಾ ಜೊತೆ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಕ್ಲಿನ್​ಕಾರಾ ಹೆಸರಿನ ಮಗಳು ಕೂಡ ಇದ್ದಾಳೆ. ಈಗ ಅವಳಿ ಮಕ್ಕಳು ಜನಿಸಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ರಾಮ್ ಚರಣ್ ಸದ್ಯ ‘ಗೇಮ್ ಚೇಂಜರ್’ ಸಿನಿಮಾ ಸೋಲಿನ ಬೇಸರದಲ್ಲಿದ್ದಾರೆ. ಪೆದ್ದಿ ಚಿತ್ರದಲ್ಲಿ ಅವರು ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Follow Us