AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್ ಒಟ್ಟೂ ಆಸ್ತಿ ಎಷ್ಟು? ಗಳಿಕೆ ಹೇಗೆಲ್ಲ ಆಗುತ್ತೆ?

Ram Charan Birthday: ನಟ ರಾಮ್ ಚರಣ್ ಜನ್ಮದಿನದಂದು, ಅವರ ಯಶಸ್ವಿ ವೃತ್ತಿಜೀವನ ಮತ್ತು 1,400 ಕೋಟಿ ರೂ.ಗಳ ಬೃಹತ್ ಆಸ್ತಿಯನ್ನು ಪರಿಶೀಲಿಸಲಾಗುತ್ತಿದೆ. ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ಮಾಣ ಸಂಸ್ಥೆ, ಪೋಲೋ ಕ್ಲಬ್ ಮತ್ತು ಅಪೊಲೋ ಆಸ್ಪತ್ರೆಗಳಲ್ಲಿ ಹೂಡಿಕೆಯ ಮೂಲಕ ರಾಮ್ ಚರಣ್ ಯಶಸ್ವಿ ಉದ್ಯಮಿಯಾಗಿದ್ದಾರೆ. ಅವರ ಸಿನಿಮಾ ಪಯಣ, ಯಶಸ್ವಿ ಚಿತ್ರಗಳು ಮತ್ತು ಉದ್ಯಮಶೀಲತೆಯ ಕುರಿತು ಇಲ್ಲಿ ವಿವರವಿದೆ.

ರಾಮ್ ಚರಣ್ ಒಟ್ಟೂ ಆಸ್ತಿ ಎಷ್ಟು? ಗಳಿಕೆ ಹೇಗೆಲ್ಲ ಆಗುತ್ತೆ?
ರಾಮ್ ಚರಣ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 27, 2026 | 7:48 AM

Share

ರಾಮ್ ಚರಣ್ ಅವರಿಗೆ (Ram Charan) ಇಂದು (ಮಾರ್ಚ್​ 27) ಜನ್ಮದಿನ. ಈ ಬಾರಿ ಅವರಿಗೆ ಖುಷಿ ಹಾಗೂ ದುಃಖ ಎರಡೂ ಇದೆ. ಅವರ ಬಾಳಲ್ಲಿ ಅವಳಿ ಮಕ್ಕಳ ಆಗಮನ ಆಗಿದೆ. ಇದೇ ವೇಳೆ ಶೂಟಿಂಗ್ ವೇಳೆ ಅವರಿಗೆ ಗಾಯ ಆಗಿದೆ. ರಾಮ್ ಚರಣ್ ಅವರ ಆಸ್ತಿ ವರ್ಷ ಕಳೆದಂತೆ ಹೆಚ್ಚುತ್ತಲೇ ಇದೆ. ಅವರ ಒಟ್ಟೂ ಆಸ್ತಿ ಬರೋಬ್ಬರಿ 1,400 ಕೋಟಿ ರೂಪಾಯಿ ಅಷ್ಟಿದೆ. ಇದಕ್ಕೆ ಕಾರಣಾಗಿದ್ದು ಉದ್ಯಮ. ಹೌದು, ರಾಮ್ ಚರಣ್ ಕೇವಲ ಹೀರೋ ಮಾತ್ರವಲ್ಲ, ಅವರು ಯಶಸ್ವಿ ಉದ್ಯಮಿ ಕೂಡ ಹೌದು. ಆ ಬಗ್ಗೆ ಇಲ್ಲಿದೆ ವಿವರ.

ರಾಮಚರಣ್ ಸಿನಿಮಾಗೆ ಕಾಲಿಟ್ಟಿದ್ದು ‘ಚಿರುತಾ’ ಸಿನಿಮಾ ಮೂಲಕ. ಈ ಚಿತ್ರ 2007ರಲ್ಲಿ ತೆರೆಗೆ ಬಂತು. ರಾಮ್ ಚರಣ್ ತಂದೆ ಚಿರಂಜೀವಿ ಸ್ಟಾರ್ ಹೀರೋ. ಹೀಗಾಗಿ, ಚಿತ್ರದಲ್ಲಿ ನಟಿಸಲು ಸುಲಭದಲ್ಲಿ ಅವಕಾಶ ಸಿಕ್ಕಿತು. 19 ವರ್ಷಗಳಲ್ಲಿ ರಾಮ್ ಚರಣ್ ಮಾಡಿದ್ದು ಕೇವಲ 15 ಸಿನಿಮಾ ಮಾತ್ರ.

ರಾಮ್ ಚರಣ್ ಬಣ್ಣ ಹಚ್ಚಿದ ಸಿನಿಮಾಗಳ ಪೈಕಿ ದೊಡ್ಡ ಗೆಲುವು ಕಂಡಿದ್ದು ಕಡಿಮೆ. ‘ಮಗಧೀರ’, ‘ರಂಗಸ್ಥಳಂ’, ‘ಆರ್​ಆರ್​ಆರ್’ ಚಿತ್ರಗಳು ಸೂಪರ್ ಡೂಪರ್ ಹಿಟ್ ಆದವು. ‘ಬ್ರೂಸ್​ಲಿ’ ಚಿತ್ರವು ಸಾಧಾರಣ ಗೆಲುವು ಕಂಡಿತು. ಉಳಿದ ಸಿನಿಮಾಗಳು ಅಂದುಕೊಂಡಂತೆ ಯಶಸ್ಸು ಕಂಡಿಲ್ಲ ಎಂದರೂ ತಪ್ಪಾಗಲಾರದು. ರಾಮ್ ಚರಣ್ ಅವರು ಉದ್ಯಮದಿಂದ ಹೆಚ್ಚು ಹಣ ಮಾಡುತ್ತಾ ಇದ್ದಾರೆ.

ರಾಮ್ ಚರಣ್ ಅವರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೈದರಾಬಾದ್ ಪೋಲೋ ರೈಡಿಂಗ್ ಕ್ಲಬ್ ಅವರ ಹೆಸರಲ್ಲಿ ಇದೆ. ರಾಮ್ ಚರಣ್ ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ‘ಖಿಲಾಡಿ ನಂಬರ್ 150’ (2017), ‘ಸೈರಾ ನರಸಿಂಹ ರೆಡ್ಡಿ’ (2019), ‘ಆಚಾರ್ಯ’ (2022) ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್​​ಗೆ ಗಂಭೀರ ಗಾಯ: ‘ಪೆದ್ದಿ’ ಬಿಡುಗಡೆ ಇನ್ನಷ್ಟು ಮುಂದಕ್ಕೆ

ರಾಮ್ ಚರಣ್ ಅವರು ಏರ್​ಲೈನ್ಸ್ ಹೊಂದಿದ್ದರು. ಇದಕ್ಕೆ ಟ್ರ್ಯೂಜೆಟ್ ಎನ್ನುವ ಹೆಸರನ್ನು ಕೂಡ ಇಡಲಾಗಿತ್ತು. ಆದರೆ, ಇತ್ತೀಚೆಗೆ ಇದು ಆಪರೇಷನ್ ನಿಲ್ಲಿಸಿದೆ. ರಾಮ್ ಚರಣ್ ಅವರು ಅಪೊಲೋ ಆಸ್ಪತ್ರೆಯಲ್ಲಿ ಹೂಡಿಕೆ ಮಾಡಿದ್ದಾರೆ. ಇದನ್ನು ಅವರ ಪತ್ನಿ ಉಪಾಸನಾ ತಾತ ಪ್ರತಾಪ್ ಚಂದ್ರ ರೆಡ್ಡಿ ಆರಂಭಿಸಿದ್ದರು. ಇದರ ಜೊತೆ ಸಿನಿಮಾಗಳಿಗೆ ರಾಮ್ ಚರಣ್ ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ತುಂಗಭದ್ರ ನದಿಯಲ್ಲಿ ಕಾಣಿಸಿಕೊಳ್ತು ಬೃಹದಾಕಾರದ ಮೊಸಳೆ!
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ