AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಚಾಮುಂಡೇಶ್ವರಿ ದೇವಾಲಯದ ಮುಂದೆ ಸ್ಕ್ರಿಪ್ಟ್ ಹಿಡಿದು ನಿಂತ ರಾಮ್ ಚರಣ್ ಸಿನಿಮಾ ನಿರ್ದೇಶಕ

Ram Charan: ರಾಮ್ ಚರಣ್ ನಟನೆಯ ಹೊಸ ಸಿನಿಮಾ ನಿರ್ದೇಶಿಸುತ್ತಿರುವ ನಿರ್ದೇಶಕ ಬುಚ್ಚಿಬಾಬು ಸನಾ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಮುಂದೆ ಚಿತ್ರಕತೆ ಹಿಡಿದು ನಿಂತಿದ್ದಾರೆ. ಹೊಸ ಸಿನಿಮಾಕ್ಕೆ ದೇವಿಯ ಆಶೀರ್ವಾದ ಪಡೆದಿದ್ದಾರೆ.

ಮೈಸೂರು ಚಾಮುಂಡೇಶ್ವರಿ ದೇವಾಲಯದ ಮುಂದೆ ಸ್ಕ್ರಿಪ್ಟ್ ಹಿಡಿದು ನಿಂತ ರಾಮ್ ಚರಣ್ ಸಿನಿಮಾ ನಿರ್ದೇಶಕ
ಮಂಜುನಾಥ ಸಿ.
|

Updated on: Nov 22, 2024 | 1:32 PM

Share

ತಮಿಳಿನ ಸ್ಟಾರ್ ನಿರ್ದೇಶಕ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾ ಚಿತ್ರೀಕರಣವನ್ನು ಇತ್ತೀಚೆಗಷ್ಟೆ ಮುಗಿಸಿದ್ದಾರೆ ರಾಮ್ ಚರಣ್. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಜಾರಿಯಲ್ಲಿದೆ. ಸಿನಿಮಾ ಜನವರಿಯಲ್ಲಿ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗಲಿದೆ. ಇದರ ನಡುವೆ ತಡ ಮಾಡದೆ ರಾಮ್ ಚರಣ್ ಹೊಸ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ರಾಮ್ ಚರಣ್​ರ ಹೊಸ ಸಿನಿಮಾಕ್ಕೆ ಕರ್ನಾಟಕ ನಾಡ ದೇವತೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದವನ್ನೂ ಪಡೆಯಲಾಗಿದೆ.

ರಾಮ್ ಚರಣ್ ಹೊಸ ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ, ಸಿನಿಮಾದ ಚಿತ್ರಕತೆಯನ್ನು ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಪೂಜೆ ಮಾಡಿಸಿದ್ದಾರೆ. ಅಲ್ಲದೆ ಚಿತ್ರಕತೆ ಹಿಡಿದು, ಚಾಮುಂಡೇಶ್ವರಿ ದೇವಸ್ಥಾನದ ಮುಂದೆ ಚಿತ್ರತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಇದು ಬಹಳ ಮಹತ್ವದ ದಿನ. ನಿರೀಕ್ಷೆಯಿಂದ ಕಾಯುತ್ತಿದ ದಿನವಿದು, ಮೈಸೂರಿನ, ತಾಯಿ ಚಾಮುಂಡೇಶ್ವರಿಯ ಆಶೀರ್ವಾದದೊಂದಿಗೆ ದಿನ ಪ್ರಾರಂಭಿಸಿದ್ದೇನೆ. ನಿಮ್ಮ ಆಶೀರ್ವಾದದ ಅವಶ್ಯಕತೆ ಇದೆ’ ಎಂದಿದ್ದಾರೆ.

ಬುಚ್ಚಿಬಾಬು ಸನಾ ಅವರ ಫೋಟೊಕ್ಕೆ, ಬಾಲಿವುಡ್ ನಟಿ ಜಾನ್ಹವಿ ಕಪೂರ್ ಪ್ರತಿಕ್ರಿಯೆ ನೀಡಿದ್ದಾರೆ. ಮೆಗಾ ಕುಟುಂಬದ ನಟ ಪವನ್ ತೇಜ್ ಕಮೆಂಟ್ ಮಾಡಿ, ‘ಈ ಸಿನಿಮಾಕ್ಕಾಗಿ ಎದುರು ನೋಡುತ್ತಿದ್ದೇವೆ, ಬೊಂಬಾಟ್ ಆಗಿ ಮಾಡು ಬುಚ್ಚಿ ಮಾಮ’ ಎಂದಿದ್ದಾರೆ. ನಟರಾದ ದೇವಗಿಲ್, ಭಾರ್ಗವ್ ಅವರುಗಳು ಸಹ ಬುಚ್ಚಿಬಾಬು ಸನಾ ಅವರ ಪೋಸ್ಟ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬುಚ್ಚಿಬಾಬು ಸನಾ ಅವರಿಗೆ ಇದು ಎರಡನೇ ಸಿನಿಮಾ ಆಗಿದೆ. ಈ ಮೊದಲು ಅವರು ತೆಲುಗಿನ ‘ಉಪ್ಪೆನ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಕೋವಿಡ್ ಸಮಯದಲ್ಲಿ ಬಿಡುಗಡೆ ಆಗಿದ್ದರೂ ಸಹ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಆ ಸಿನಿಮಾ ಮೂಲಕ ನಟಿ ಕೃತಿ ಶೆಟ್ಟಿ ಮತ್ತು ನಾಯಕರಾಗಿ ಪವನ್ ತೇಜ್ ಪರಿಚಿತಗೊಂಡಿದ್ದರು.

ಇದನ್ನೂ ಓದಿ:ಪತಿಯ ಟೀಕಿಸಿದವರಿಗೆ ಪಾಠ ಮಾಡಿದ ರಾಮ್ ಚರಣ್ ಪತ್ನಿ ಉಪಾಸನಾ

ರಾಮ್ ಚರಣ್ ಅವರ ಹೊಸ ಸಿನಿಮಾವನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ಆರಂಭಗೊಂಡಿದ್ದು, ಸುಮಾರು ಎರಡು ವಾರಗಳ ಕಾಲ ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇದು ರಾಮ್ ಚರಣ್ ಅವರ 16ನೇ ಸಿನಿಮಾ ಆಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ವೃದ್ಧಿ ಸಿನಿಮಾ ಪ್ರೊಡಕ್ಷನ್ ಹೌಸ್​ ವತಿಯಿಂದ ಸಿನಿಮಾದ ನಿರ್ಮಾಣ ಆಗಲಿದೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಆರ್ ರೆಹಮಾನ್ ಸಂಗೀತ ನೀಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ