ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಜನವರಿ 10ರಂದು ಅದ್ಧೂರಿಯಾಗಿ ತೆರೆ ಕಂಡಿದೆ. ಶಂಕರ್ ನಿರ್ದೇಶನದ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇರಿಸಲಾಗಿತ್ತು. ‘ಆರ್ಆರ್ಆರ್’ ಸಿನಿಮಾದ ಬಳಿಕ ರಾಮ್ ಚರಣ್ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿರುವ ಸಿನಿಮಾ ಸಹ ಇದಾಗಿರುವ ಕಾರಣ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಸಿನಿಮಾ ಬಿಡುಗಡೆ ಆದ ಮೊದಲ ದಿನ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಹಾಗಿದ್ದರೂ ಸಹ ಬಾಕ್ಸ್ ಆಫೀಸ್ನಲ್ಲಿ ಬಹಳ ಒಳ್ಳೆಯ ಕಲೆಕ್ಷನ್ ಅನ್ನೇ ಮಾಡಿತು. ಇದೀಗ ಎರಡನೇ ದಿನ ಆ ಕಲೆಕ್ಷನ್ ಉಳಿದುಕೊಂಡಿದೆಯೇ? ಮೊದಲ ದಿನ ಏನೂ ಗೊತ್ತಿಲ್ಲದೆ ಪ್ರೇಕ್ಷಕ ಚಿತ್ರಮಂದಿರಕ್ಕೆ ಹೋಗಿರುತ್ತಾನೆ. ಹಾಗಾಗಿ ಎರಡನೇ ದಿನದ ಕಲೆಕ್ಷನ್ ಸಿನಿಮಾದ ನಿಜವಾದ ಸಾಮರ್ಥ್ಯವನ್ನು ತೋರಿಸುತ್ತದೆ. ಸಿನಿಮಾ ಹಿಟ್ ಅಥವಾ ಫ್ಲಾಪ್ ಎಂಬುದನ್ನು ಹೇಳುತ್ತದೆ. ಅಂದಹಾಗೆ ‘ಗೇಮ್ ಚೇಂಜರ್’ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟಾಗಿದೆ?
ಜನವರಿ 10 ರಂದು ಬಿಡುಗಡೆ ಆಗಿದ್ದ ‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ 51 ಕೋಟಿ ರೂಪಾಯಿ ಹಣ ಗಳಿಸಿದೆ. ಅಸಲಿಗೆ ಇದು ಬಹಳ ಉತ್ತಮ ಮೊತ್ತ. ಇಷ್ಟು ದೊಡ್ಡ ಮೊತ್ತವನ್ನು ‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ದೊಡ್ಡ ಮೊತ್ತವನ್ನೇ ‘ಗೇಮ್ ಚೇಂಜರ್’ ಗಳಿಸಿತ್ತು. ಎರಡನೇ ದಿನ ಸಿನಿಮಾದ ಕಲೆಕ್ಷನ್ 50% ಗಿಂತಲೂ ಹೆಚ್ಚು ಕುಸಿದಿದೆ. ಆ ಮೂಲಕ ಸಿನಿಮಾಕ್ಕೆ ನೆಗೆಟಿವ್ ಹೊಡೆತ ಬಿದ್ದಾಗಿದೆ.
ಇದನ್ನೂ ಓದಿ:ಮಿಶ್ರ ಪ್ರತಿಕ್ರಿಯೆ ಮಧ್ಯೆಯೂ ಭರ್ಜರಿ ಗಳಿಕೆ; ‘ಗೇಮ್ ಚೇಂಜರ್’ ಮೊದಲ ದಿನದ ಕಲೆಕ್ಷನ್ ಇಷ್ಟೊಂದಾ?
‘ಗೇಮ್ ಚೇಂಜರ್’ ಸಿನಿಮಾ ಎರಡನೇ ದಿನ ಬಾಕ್ಸ್ ಆಫೀಸ್ನಲ್ಲಿ ಕೇವಲ 21.50 ಕೋಟಿ ರೂಪಾಯಿ ಹಣವನ್ನು ಮಾತ್ರವೇ ಗಳಿಸಿದೆ. ಮೊದಲ ದಿನಕ್ಕೆ ಹೋಲಿಸಿದರೆ ಈ ಮೊತ್ತ ಬಹಳ ಕಡಿಮೆ. ಮೊದಲ ಸಿನಿಮಾ ಸಿನಿಮಾ ನೋಡಿದ ಮಂದಿ ನೀರಸ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ ಅದರ ಪರಿಣಾಮ ಎರಡನೇ ದಿನದ ಮೇಲಾಗಿದೆ. ಮೊದಲ ದಿನ ನಿರೀಕ್ಷೆಯಿಂದ ಚಿತ್ರಮಂದಿರಕ್ಕೆ ಜನ ಬಂದಿದ್ದರು. ಆದರೆ ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳು ಹಬ್ಬಿದ ಕಾರಣ ಎರಡನೇ ದಿನಕ್ಕೆ ಸಿನಿಮಾದ ಕಲೆಕ್ಷನ್ ಕುಸಿದಿದೆ.
ಮೂರನೇ ದಿನದ ಕಲೆಕ್ಷನ್ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಏಕೆಂದರೆ ಜನವರಿ 12 ರಂದು ನಂದಮೂರಿ ಬಾಲಕೃಷ್ಣ ನಟನೆಯ ‘ಡಾಕೂ ಮಹಾರಾಜ್’ ಸಿನಿಮಾ ಬಿಡುಗಡೆ ಆಗುತ್ತಿದೆ. ಆ ಸಿನಿಮಾದ ಬಗ್ಗೆ ಒಳ್ಳೆಯ ಟಾಕ್ ಇದ್ದು, ಈ ಸಿನಿಮಾ, ‘ಗೇಮ್ ಚೇಂಜರ್’ ಸಿನಿಮಾದ ಅರ್ಧಕ್ಕಿಂತಲೂ ಹೆಚ್ಚಿನ ಕಲೆಕ್ಷನ್ ಅನ್ನು ನುಂಗಿ ಹಾಕಲಾಗಿದೆ. ಆದರೆ ವೀಕೆಂಡ್ ಮತ್ತು ಆ ನಂತರ ಸಂಕ್ರಾಂತಿ ರಜೆ ಸಾಲು ಸಾಲಾಗಿ ಇರುವ ಕಾರಣ ಸಿನಿಮಾದ ಕಲೆಕ್ಷನ್ ಕುಸಿಯದೆ ಸ್ಥಿರವಾಗಿ ನಿಲ್ಲುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ