ಮಿಶ್ರ ಪ್ರತಿಕ್ರಿಯೆ ಮಧ್ಯೆಯೂ ಭರ್ಜರಿ ಗಳಿಕೆ; ‘ಗೇಮ್ ಚೇಂಜರ್’ ಮೊದಲ ದಿನದ ಕಲೆಕ್ಷನ್ ಇಷ್ಟೊಂದಾ?

ಶಂಕರ್ ಅವರು ‘ಗೇಮ್ ಚೇಂಜರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್, ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರ ಮಾಡಿದರೆ, ಎಸ್ಜೆ ಸೂರ್ಯ ವಿಲನ್ ಪಾತ್ರ ಮಾಡಿದ್ದಾರೆ. 450 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಕುತೂಹಲ ಮೂಡಿದೆ.

ಮಿಶ್ರ ಪ್ರತಿಕ್ರಿಯೆ ಮಧ್ಯೆಯೂ ಭರ್ಜರಿ ಗಳಿಕೆ; ‘ಗೇಮ್ ಚೇಂಜರ್’ ಮೊದಲ ದಿನದ ಕಲೆಕ್ಷನ್ ಇಷ್ಟೊಂದಾ?
ಗೇಮ್ ಚೇಂಜರ್
Follow us
ರಾಜೇಶ್ ದುಗ್ಗುಮನೆ
|

Updated on: Jan 11, 2025 | 7:21 AM

ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾ ಜನವರಿ 10ರಂದು ವಿಶ್ವಾದ್ಯಂತ ರಿಲೀಸ್ ಆಗಿದೆ. ಸಂಕ್ರಾಂತಿಗೆ ನಾಲ್ಕು ದಿನ ಇರುವಾಗಲೇ ಚಿತ್ರ ಬಿಡುಗಡೆ ಕಂಡಿದೆ. ಈ ಚಿತ್ರದ ಮೊದಲ ದಿನದ ಗಳಿಕೆ ಎಷ್ಟಾಗಲಿದೆ ಎಂಬ ಕುತೂಹಲ ಮೂಡಿತ್ತು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕ ಹೊರತಾಗಿಯೂ ಚಿತ್ರ ಉತ್ತಮ ಗಳಿಕೆ ಮಾಡಿದೆ. ಹಾಗಾದರೆ ಈ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ಶಂಕರ್ ಅವರು ‘ಗೇಮ್​ ಚೇಂಜರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಇಂಡಿಯನ್ 2’ ಸೋಲಿಗೆ ಅವರು ಕಾರಣರಾಗಿದ್ದರಿಂದ ‘ಗೇಮ್ ಚೇಂಜರ್’ ಬಗ್ಗೆ ನಿರೀಕ್ಷೆ ಇರಲಿಲ್ಲ. ಈ ಸಿನಿಮಾ ಸೂಪರ್ ಎನಿಸಿಕೊಳ್ಳದಿದ್ದರೂ ಸಾಧಾರಣ ಎನಿಸಿಕೊಂಡಿದೆ. 450 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಚಿತ್ರ ಮೊದಲ ದಿನ 51 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಸಿನಿಮಾ ಬಜೆಟ್​ಗೆ ಹೋಲಿಕೆ ಮಾಡಿದರೆ ‘ಗೇಮ್ ಚೇಂಜರ್’ ಚಿತ್ರದ ಮೊದಲ ದಿನದ ಗಳಿಕೆ ಏನಂದರೆ ಏನೂ ಅಲ್ಲ. ಆದರೆ, ಸಿನಿಮಾಗೆ ಸಿಕ್ಕ ಮಿಶ್ರ ಪ್ರತಿಕ್ರಿಯೆ ಮಧ್ಯೆಯೂ ಚಿತ್ರ ಇಷ್ಟು ಉತ್ತಮ ಗಳಿಕೆ ಮಾಡಿರುವುದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಸಿನಿಮಾ ಲಾಭ ಕಾಣಬೇಕು ಎಂದರೆ ಇನ್ನೂ ದೊಡ್ಡ ಮಟ್ಟದ ಕಲೆಕ್ಷನ್ ಮಾಡಲೇಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ: Game Changer Review: ಪ್ರೇಕ್ಷಕರಿಗೆ ಪಾಠ ಮಾಡಿ, ರಾಜಕೀಯಕ್ಕೆ ಚಾಟಿ ಬೀಸಿದ ಗೇಮ್ ಚೇಂಜರ್​

‘ಗೇಮ್ ಚೇಂಜರ್’ ಸಿನಿಮಾ ಮೊದಲ ದಿನ ತೆಲುಗು ವರ್ಷನ್​ನಲ್ಲಿ 42 ಕೋಟಿ ರೂಪಾಯಿ, ತಮಿಳಿನಿಂದ 2.1 ಕೋಟಿ ರೂಪಾಯಿ, ಹಿಂದಿಯಿಂದ 7 ಕೋಟಿ ರೂಪಾಯಿ, ಕನ್ನಡ ವರ್ಷನ್​ನಿಂದ 10 ಲಕ್ಷ ರೂಪಾಯಿ ಹಾಗೂ ಮಲಯಾಳಂನಿಂದ 5 ಲಕ್ಷ ರೂಪಾಯಿ ಚಿತ್ರಕ್ಕೆ ಸಿಕ್ಕಿದೆ. ಈ ಮೂಲಕ ಒಟ್ಟೂ ಗಳಿಕೆ 51.25 ಹಿಂದಿಯಲ್ಲಿ ಸಿನಿಮಾ ಇಷ್ಟೊಂದು ಕಲೆಕ್ಷನ್ ಮಾಡಲು ‘ಆರ್​ಆರ್​ಆರ್’ ಸಿನಿಮಾ ಕಾರಣ ಎಂದು ಹೇಳಲಾಗುತ್ತಿದೆ. ‘ಆರ್​ಆರ್​ಆರ್’ ಚಿತ್ರದಲ್ಲಿ ರಾಮ್ ಚರಣ್ ನಟಿಸಿದ್ದರು. ಅವರ ನಟನೆ ಗಮನ ಸೆಳೆದಿತ್ತು. ಈ ಕಾರಣಕ್ಕೆ ಅನೇಕರು ಈ ಚಿತ್ರವನ್ನು ಹಿಂದಿಯಲ್ಲಿ ವೀಕ್ಷಿಸಿದ್ದಾರೆ. ಈ ಚಿತ್ರದಲ್ಲಿ ರಾಮ್ ಚರಣ್, ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರ ಮಾಡಿದರೆ, ಎಸ್​ಜೆ ಸೂರ್ಯ ವಿಲನ್ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ