ವಿಶಾಲ್ ಸಿಂಹನಂತೆ ಮರಳಬೇಕು ಎಂದು ಆಶಿಸಿದ ಸ್ಟಾರ್ ಹೀರೋ  

ಕಾಲಿವುಡ್ ನಟ ವಿಶಾಲ್ ಅವರು ಇತ್ತೀಚೆಗೆ ವೇದಿಕೆ ಏರಿದಾಗ ಅವರ ಕೈ ನಡುಗುತ್ತಿತ್ತು. ಇದನ್ನು ಅನೇಕರು ಗಮನಿಸಿದ್ದಾರೆ. ಮಾತು ಕೂಡ ತೊದಲುತ್ತಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಿಶಾಲ್ ಅವರಿಗೆ ವೈರಲ್ ಫಿವರ್ ಇದೆ ಎಂದು ಹೇಳಲಾಗಿದೆ. ಈಗ ಅವರನ್ನು ಸ್ಟಾರ್ ಹೀರೋ ಬೆಂಬಲಿಸಿದ್ದಾರೆ.

ವಿಶಾಲ್ ಸಿಂಹನಂತೆ ಮರಳಬೇಕು ಎಂದು ಆಶಿಸಿದ ಸ್ಟಾರ್ ಹೀರೋ  
ವಿಶಾಲ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 11, 2025 | 7:53 AM

ಇತ್ತೀಚೆಗೆ ವಿಶಾಲ್ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ವೇದಿಕೆ ಏರಿದ್ದ ಅವರ ಕೈ ಸಾಕಷ್ಟು ನಡುಗುತ್ತಾ ಇತ್ತು. ಮೈಕ್ ಹಿಡಿಯಲು ಅವರು ಕಷ್ಟಪಟ್ಟಿದ್ದರು. ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಆತಂಕ ಮೂಡಿತ್ತು. ಆ ಬಳಿಕ ವಿಶಾಲ್ ಅವರಿಗೆ ಅತಿಯಾದ ಜ್ವರ ಇತ್ತು. ಈ ಕಾರಣದಿಂದಲೇ ಅವರ ಕೈ ನಡುಗುತ್ತಿತ್ತು ಎನ್ನಲಾಗಿದೆ. ಈಗ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಶಾಲ್ ಬಗ್ಗೆ ನಟ ಜಯಮ್ ರವಿ ಮಾತನಾಡಿದ್ದಾರೆ. ವಿಶಾಲ್ ಬೇಗ ಚೇತರಿಕೆ ಕಾಣಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಅವರು ಸಿಹಂದಂತೆ ಮರಳಲಿ ಎಂದು ಆಶಿಸಿದ್ದಾರೆ.

ಈಗ ಜಯಮ್ ರವಿ ಅವರು ತಮ್ಮ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ವಿಶಾಲ್ ಬಗ್ಗೆ ಮಾತನಾಡಿದ್ದಾರೆ. ‘ವಿಶಾಲ್​ಗಿಂತ ಧೈರ್ಯಶಾಲಿ ವ್ಯಕ್ತಿ ಇರಲಿಕ್ಕಿಲ್ಲ. ಅವರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಆದರೆ, ಅವರ ಧೈರ್ಯವೇ ಅವರನ್ನು ಕರೆದುಕೊಂಡು ಹೋಗುತ್ತಿದೆ. ಅವರು ಬೇಗ ಮರಳುತ್ತಾರೆ. ವಿಶಾಲ್ ಅವರ ಒಳ್ಳೆಯ ಗುಣ ಹಾಗೂ ಅವರ ಕುಟುಂಬ ನೀಡಿರುವ ಬೆಂಬಲದಿಂದ ಅವರು ಮತ್ತಷ್ಟು ಗಟ್ಟಿಯಾಗಿ ಮರಳುತ್ತಾರೆ, ಸಿಂಹದಂತೆ’ ಎಂದಿದ್ದಾರೆ ಜಯಮ್ ರವಿ.

‘ಕಾದಳಿಕ್ಕ ನರಮಿಲ್ಲೈ’ ಸಿನಿಮಾದಲ್ಲಿ ಜಯಂ ರವಿ ನಟಿಸಿದ್ದಾರೆ. ಕೃತಿಕಾ ಉದಯನಿಧಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜಯಂ ರವಿ ಹಾಗೂ ನಿತ್ಯಾ ಮೆನನ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಯೋಗಿ ಬಾಬು, ಲಕ್ಷ್ಮಿ ರಾಮಕೃಷ್ಣನ್ ಮೊದಲಾದವರು ಇಟ್ಟಾಗಿ ನಟಿಸಿದ್ದಾರೆ. ಎಆರ್ ರೆಹಮಾನ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: Vishal: ವಿಶಾಲ್​ ಮನೆ ಮೇಲೆ ಕಲ್ಲು ತೂರಾಟ; ಸಿಸಿಟಿವಿ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ 

ವಿಶಾಲ್ ಆರೋಗ್ಯದ ಬಗ್ಗೆ

ವಿಶಾಲ್​ ಅವರು ಇತ್ತೀಚೆಗೆ ವೇದಿಕೆ ಏರಿದಾಗ ನಡುಗುತ್ತಿದ್ದರು. ಇದನ್ನು ಅನೇಕರು ಗಮನಿಸಿದ್ದಾರೆ. ಅವರ ಬಾಯಿ ಕೂಡ ತೊದಲುತ್ತಿತ್ತು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ವಿಶಾಲ್ ಅವರಿಗೆ ವೈರಲ್ ಫಿವರ್ ಇದೆ ಎಂದು ಹೇಳಲಾಗಿದೆ. ಈ ಕಾರಣದಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಈಗ ಅವರು ಚೇತರಿಕೆ ಕಾಣುವ ಹಂತದಲ್ಲಿ ಇದ್ದಾರೆ. ಅವರು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಅವರ ಬಗ್ಗೆ ಕೆಲವರು ವದಂತಿ ಹರಡಿದಿದ್ದರು. ಈ ಬಗ್ಗೆ ವಿಶಾಲ್ ಆಪ್ತರು ಸಿಟ್ಟಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಮಕರ ಸಂಕ್ರಾಂತಿ ಮತ್ತು ಮಕರ ಜ್ಯೋತಿ ಮಹತ್ವ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಸೂರ್ಯನ ಪಥ ಬದಲಾಗುವ ಸಂಕ್ರಾಂತಿ ದಿನದ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ಹಸು ಕೆಚ್ಚಲು ಕೊಯ್ದ ಪ್ರಕರಣ: ಜಮೀರ್ ಅಹ್ಮದ್ ಹೇಳಿಕೆಗೆ ಚೈತ್ರಾ ತಿರುಗೇಟು
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ನರೈನಾ ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ; ಲೋಹ್ರಿ ಆಚರಿಸಿ, ಜನರೊಂದಿಗೆ ಸಂವಾದ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಸಚಿವ ಕಿಶನ್ ರೆಡ್ಡಿ ಮನೆಯ ಸಂಕ್ರಾಂತಿ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ತ್ಯಾಗ ಬಲಿದಾನಗಳಿಗಾಗಿ ನಮ್ಮಿಂದ ಪ್ರಾಮಾಣಿಕ ಪ್ರಯತ್ನ ನಡೆಯಬೇಕು: ಸಿಎಂ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಬಿಗ್ ಬಾಸ್ ಮನೆಯೊಳಗೆ ಸಿದ್ಧವಾಯ್ತು ‘ಬಾಯ್ಸ್ Vs ಗರ್ಲ್ಸ್​’ ಪ್ರೋಮೋ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹಣಮಂತು ಮತ್ತು ರಜತ್; ಜಗದೀಶ್-ರಂಜಿತ್​ಗೆ ಉತ್ತಮ ರಿಪ್ಲೇಸ್ಮೆಂಟ್: ಚೈತ್ರಾ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಹದಿನೈದನೇ ಹಣಕಾಸು ಆಯೋಗದ ಮೇಲೆ ಚರ್ಚೆಗೆ ಕುಮಾರಣ್ಣ ಬರಲಿ: ಶಿವಲಿಂಗೇಗೌಡ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮನೆಯಿಂದ ಹೊರಬಂದು ಮದುವೆ ಬಗ್ಗೆ ಮಾತಾಡಿದ ಚೈತ್ರಾ ಕುಂದಾಪುರ