‘ಸಂಜು ವೆಡ್ಸ್ ಗೀತ 2’ ಬಿಡುಗಡೆಗೆ ಇದ್ದ ತೊಡಕು ನಿವಾರಣೆ: ವಿವರ ನೀಡಿದ ನಾಗಶೇಖರ್

Sanju Weds Geetha 2: ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಜನವರಿ 10ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆ ವಿರುದ್ಧ ಹೈದರಾಬಾದ್ ನ್ಯಾಯಾಲಯ ತಡೆ ನೀಡಿತ್ತು. ಇದೀಗ ಪತ್ರಿಕಾಗೋಷ್ಠಿ ನಡೆಸಿರುವ ನಾಗಶೇಖರ್, ಸಿನಿಮಾದ ವಿರುದ್ಧ ಹೇರಲಾಗಿದ್ದ ತಡೆಯಾಜ್ಞೆ ತೆರವಾಗಿದೆ ಎಂದು ಹೇಳಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಶೀಘ್ರವೇ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ತಡೆ ಆಜ್ಞೆ ನೀಡಲು ಕಾರಣ ಏನಾಗಿತ್ತು ಎಂಬುದನ್ನು ವಿವರಿಸಿದ್ದಾರೆ.

‘ಸಂಜು ವೆಡ್ಸ್ ಗೀತ 2’ ಬಿಡುಗಡೆಗೆ ಇದ್ದ ತೊಡಕು ನಿವಾರಣೆ: ವಿವರ ನೀಡಿದ ನಾಗಶೇಖರ್
Sanju Weds Geetha 2
Follow us
ಮಂಜುನಾಥ ಸಿ.
|

Updated on: Jan 12, 2025 | 7:36 AM

ಶ್ರೀನಗರ ಕಿಟ್ಟಿ, ರಚಿತಾ ರಾಮ್ ನಟಿಸಿ ನಾಗಶೇಖರ್ ನಿರ್ದೇಶನ ಮಾಡಿರುವ ‘ಸಂಜು ವೆಡ್ಸ್ ಗೀತ 2’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಬಿಡುಗಡೆಗೆ ಹೈದರಾಬಾದ್ ಸಿಟಿ ಸಿವಿಲ್ ನ್ಯಾಯಾಲಯ ತಡೆ ಆದೇಶ ನೀಡಿತ್ತು. ನಾಗಶೇಖರ್ ನಿರ್ದೇಶನ ಮಾಡಿದ್ದ ತೆಲುಗಿನ ಸಿನಿಮಾ ಒಂದರ ಫೈನ್ಯಾನ್ಶಿಯರ್ ಒಬ್ಬರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಿಡುಗಡೆ ಆಗದಂತೆ ತಡೆ ಆಜ್ಞೆ ತಂದಿದ್ದರು. ಆದರೆ ಈಗ ತಡೆ ಆಜ್ಞೆ ತೆರವಾಗಿದೆ. ಈ ವಿಷಯವನ್ನು ಚಿತ್ರತಂಡ, ಮಾಧ್ಯಮಗಳ ಬಳಿ ಹಂಚಿಕೊಂಡಿದೆ.

ಜನವರಿ 10ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು, ಆದರೆ ತಡೆಯಾಜ್ಞೆ ತಂದಿದ್ದ ಕಾರಣಕ್ಕೆ ಸಿನಿಮಾ ಬಿಡುಗಡೆ ಆಗಲಿಲ್ಲ. ಸಿನಿಮಾದ ಮೇಲೆ ತಡೆಯಾಜ್ಞೆ ಬೀಳಲು ಕಾರಣ ಏನೆಂದು ವಿವರಿಸಿದ ನಾಗಶೇಖರ್, ‘ಗೆಳೆಯ ಭಾವನಾ ರವಿ ಜೊತೆ ಸೇರಿ ತೆಲುಗಿನಲ್ಲಿ ‘ಗುರ್ತುಂದಾ ಸೀತಾಕಾಲಂ’ ಹೆಸರಿನ ಸಿನಿಮಾ ಮಾಡಿದ್ದೆ. ಆ ಸಿನಿಮಾದ ಫೈನ್ಯಾನ್ಶಿಯರ್ ಈ ಕೇಸು ಹಾಕಿದ್ದರು. ‘ಸಂಜು ವೆಡ್ಸ್ ಗೀತಾ 2’ ನನ್ನದೇ ಬ್ಯಾನರ್ ಸಿನಿಮಾ ಎಂದುಕೊಂಡು ಅವರು ಕೇಸು ಹಾಕಿದ್ದರು. ಹಳೆಯ ವಿಡಿಯೋ ನೋಡಿ, ಅವರು ಇದು ನನ್ನ ಸಿನಿಮಾ ಅಂದುಕೊಂಡಿದ್ದರು ಹಾಗಾಗಿ ಸ್ಟೇ ತಂದಿದ್ದರು’ ಎಂದಿದ್ದಾರೆ.

ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ಬೀಳುತ್ತಿದ್ದಂತೆ ಕೆಲವರು ಕೆಲವು ರೀತಿ ಮಾತನಾಡುತ್ತಿದ್ದಾರೆ ಎಂದ ನಾಗಶೇಖರ್, ‘ನಿರ್ಮಾಪಕರು ಆರು ಕೋಟಿ ಬ್ಯಾಲೆನ್ಸ್ ಉಳಿಸಿಕೊಂಡಿದ್ದಾರೆ ಎಂದೆಲ್ಲ ಕೆಲವರು ಹೇಳುತ್ತಿದ್ದಾರೆ. ಆದರೆ ನಾವು ನ್ಯಾಯಾಲಯದಲ್ಲಿ ನಾಲ್ಕು ಕೋಟಿ ಶೂರಿಟಿ ಕೊಟ್ಟು ಸಿನಿಮಾದ ತಡೆ ಆಜ್ಞೆ ತೆರವು ಮಾಡಿಸಿದ್ದೀವಿ. ನಾಲ್ಕು ಕೋಟಿ ಕೊಟ್ಟವರಿಗೆ ಆರು ಕೋಟಿ ಹೆಚ್ಚಿನದಲ್ಲ. ಈ ಸಿನಿಮಾಕ್ಕೆ 15 ಕೋಟಿ ಬಂಡವಾಳ ಹಾಕಲಾಗಿದೆ. ಹಾಗಿರುವಾಗ ಇದೆಲ್ಲ ಬಹಳ ದೊಡ್ಡ ಮೊತ್ತ ಅಲ್ಲ. ಇಲ್ಲ ಸಲ್ಲದ ವಿಷಯಗಳನ್ನು ಸಿನಿಮಾದ ಬಗ್ಗೆ ಹಬ್ಬಿಸಬೇಡಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಕೊನೇ ಕ್ಷಣದಲ್ಲಿ ‘ಸಂಜು ವೆಡ್ಸ್ ಗೀತಾ 2’ ಬಿಡುಗಡೆ ಕ್ಯಾನ್ಸಲ್; ಏನಿದು ಕಿರಿಕ್?

‘ಒಂದು ಮದ್ವೆ ಮಾಡಬೇಕಾದಾಗ ಎಷ್ಟು ವಿಘ್ನ ಬರುತ್ತೆ ಅಂತಾ ಗೊತ್ತಿದ್ದರೂ ಈ ಟೈಟಲ್ ಇಟ್ಟು ಸಿನಿಮಾ ಮಾಡಿದ್ದೀನಿ, ಸಿನಿಮಾ ಮಾಡುವಾಗ ಬೀದಿಲಿ ನಿಂತಿದ್ದೀನಿ. ಕಷ್ಟ ಪಟ್ಟಿದ್ದೀನಿ. ಆದರೆ ಸಂಜು ವೆಡ್ಸ್ ಗೀತಾ ಸಿನಿಮಾ ಕೊಟ್ಟ ಸಕ್ಸಸ್ ನಾ ಮರೆಯೊಲ್ಲ. ಈ ಸಿನಿಮಾ ಸಹ ಅದೇ ಯಶಸ್ಸು ಕೊಡುವ ನಿರೀಕ್ಷೆ ಇದೆ’ ಎಂದರು. ನಟ ಶ್ರೀನಗರ ಕಿಟ್ಟಿ ಮಾತನಾಡಿ, ‘ಸಂಜು ವೆಡ್ಸ್ ಗೀತಾ 2’ ಸಿನಿಮಾಕ್ಕೆ ತಡೆಯಾಜ್ಞೆ ದೊರೆಯುತ್ತಿದ್ದಂತೆ, ಕೆಲವರು ಕೆಲವು ರೀತಿ ಮಾತನಾಡಿ, ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಲು ಪ್ರಾರಂಭ ಮಾಡಿದ್ದಾರೆ. ದಯವಿಟ್ಟು ಹಾಗೆ ಮಾಡುವುದು ಬೇಡ ಎಂದು ಮನವಿ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Daily Horoscope: ರವಿವಾರದಂದು ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ