ಅಭಿಮಾನಿಯ ಪತ್ರಕ್ಕೆ ಉತ್ತರಿಸಿದ ‘ಪೆದ್ದಿ’: ಯಾತ್ರೆ ಶುರು, ಬೆಂಗಳೂರಿಗೆ ಯಾವಾಗ?

Peddi movie: ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಕಳೆದ ಕೆಲ ತಿಂಗಳುಗಳಿಂದಲೂ ಶೂಟಿಂಗ್, ಬಿಡುಗಡೆ ದಿನಾಂಕ, ಪ್ರಚಾರ ಇನ್ನಿತರೆ ವಿಷಯಗಳ ಬಗ್ಗೆ ಗೊಂದಲದಲ್ಲೇ ಇದೆ. ಸಿನಿಮಾದ ಪ್ರಚಾರವನ್ನು ಇನ್ನೂ ಪ್ರಾರಂಭಿಸಿಲ್ಲ. ಇತ್ತೀಚೆಗೆ ರಾಮ್ ಚರಣ್ ಅಭಿಮಾನಿಯೊಬ್ಬ, ಈ ಕುರಿತಂತೆ ಚಿತ್ರತಂಡಕ್ಕೆ ಪತ್ರವೊಂದನ್ನು ಬರೆದು, ಶೀಘ್ರವೇ ಪ್ರಚಾರ ಪ್ರಾರಂಭಿಸಿ ಎಂದಿದ್ದ. ಇದೀಗ ಅಭಿಮಾನಿ ಬರೆದಿದ್ದ ಪತ್ರಕ್ಕೆ ಅದೇ ರೀತಿಯ ಪತ್ರದ ಮೂಲಕವೇ ಉತ್ತರಿಸಿರುವ ‘ಪೆದ್ದಿ’ ಚಿತ್ರತಂಡ ಪ್ರಚಾರ ಯಾತ್ರೆಯ ಶೆಡ್ಯೂಲ್ ಬಿಡುಗಡೆ ಮಾಡಿದೆ.

ಅಭಿಮಾನಿಯ ಪತ್ರಕ್ಕೆ ಉತ್ತರಿಸಿದ ‘ಪೆದ್ದಿ’: ಯಾತ್ರೆ ಶುರು, ಬೆಂಗಳೂರಿಗೆ ಯಾವಾಗ?
Peddi Movie
Edited By:

Updated on: May 14, 2026 | 9:32 PM

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಕಳೆದ ಕೆಲ ತಿಂಗಳುಗಳಿಂದಲೂ ಶೂಟಿಂಗ್, ಬಿಡುಗಡೆ ದಿನಾಂಕ, ಪ್ರಚಾರ ಇನ್ನಿತರೆ ವಿಷಯಗಳ ಬಗ್ಗೆ ಗೊಂದಲದಲ್ಲೇ ಇದೆ. ಬಿಡುಗಡೆ ದಿನಾಂಕ ಪದೇ ಪದೇ ಬದಲಾಗಿದ್ದು, ಚಿತ್ರೀಕರಣ ಸಹ ಪದೇ ಪದೇ ಮಾಡಿದ್ದು ಹೀಗೆ ಹಲವು ಗೊಂದಲಗಳ ಬಳಿಕ ಇದೀಗ ಜೂನ್ 4ರ ಬಿಡುಗಡೆ ದಿನಾಂಕ ಘೋಷಿಸಲಾಗಿದ್ದು, ಸಿನಿಮಾದ ಪ್ರಚಾರವನ್ನು ಇನ್ನೂ ಪ್ರಾರಂಭಿಸಿಲ್ಲ. ಇತ್ತೀಚೆಗೆ ರಾಮ್ ಚರಣ್ ಅಭಿಮಾನಿಯೊಬ್ಬ, ಈ ಕುರಿತಂತೆ ಚಿತ್ರತಂಡಕ್ಕೆ ಪತ್ರವೊಂದನ್ನು ಬರೆದು, ಶೀಘ್ರವೇ ಪ್ರಚಾರ ಪ್ರಾರಂಭಿಸಿ ಎಂದಿದ್ದ. ಇದೀಗ ಅಭಿಮಾನಿ ಬರೆದಿದ್ದ ಪತ್ರಕ್ಕೆ ಅದೇ ರೀತಿಯ ಪತ್ರದ ಮೂಲಕವೇ ಉತ್ತರಿಸಿರುವ ‘ಪೆದ್ದಿ’ ಚಿತ್ರತಂಡ ಪ್ರಚಾರ ಯಾತ್ರೆಯ ಶೆಡ್ಯೂಲ್ ಬಿಡುಗಡೆ ಮಾಡಿದೆ.

‘ಪೆದ್ದಿ’ ಚಿತ್ರತಂಡವು ಸಿನಿಮಾದ ಪ್ರಚಾರದ ಯೋಜನೆಯನ್ನು ದಿನಾಂಕ ಸಹ ಪ್ರಕಟಿಸಿದ್ದು, ಇದೇ ತಿಂಗಳ 18ರಿಂದ ಪ್ರಚಾರ ಆರಂಭವಾಗಲಿದೆ. 18ರಂದು ಮುಂಬೈ, 22ರಂದು ರಾಜೀವ್ ಗಾಂಧಿ ಸ್ಟೇಡಿಯಂ, 23ಕ್ಕೆ ಭೂಪಾಲ್, 24ಕ್ಕೆ ಬೆಂಗಳೂರು, 28ಕ್ಕೆ ದೆಹಲಿ, 30ಕ್ಕೆ ಚೆನ್ನೈ, ಜೂನ್ 1ಕ್ಕೆ ವೈಜಾಗ್ ಮತ್ತು 2ಕ್ಕೆ ಹೈದರಾಬಾದ್​​ನಲ್ಲಿ ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಚಿತ್ರತಂಡ ಮಾಡಲಿದೆ. 18ರಂದು ಮುಂಬೈನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ. ಐಪಿಎಲ್ ಪಂದ್ಯಗಳಿಗೂ ತೆರಳಿ ಚಿತ್ರತಂಡ ಪ್ರಚಾರ ಮಾಡಲಿದೆ. ಈ ಪ್ರಚಾರ ಪ್ರವಾಸವನ್ನು ‘ಪೆದ್ದಿ’ ತಂಡ ‘ಪವರ್​​ಪ್ಲೇ ಟೂರ್’ ಎಂದು ಕರೆದಿದೆ.

‘ಇದು ಕೇವಲ ಆರಂಭ ಮಾತ್ರವೇ ಮುಂದೆ ಇನ್ನೂ ಹತ್ತು ಹಲವು ಸರ್ಪ್ರೈಸ್​​ಗಳು ಅಭಿಮಾನಿಗಳಿಗಾಗಿ ಕಾದಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ‘ಪೆದ್ದಿ’ ಸಿನಿಮಾವು ಗ್ರಾಮೀಣ ಭಾಗದ ಕತೆಯನ್ನು ಒಳಗೊಂಡಿದ್ದು, ಕ್ರಿಕೆಟ್ ಆಟಗಾರನೊಬ್ಬನ ಕತೆ ಇದಾಗಿದೆ. ಕ್ರಿಕೆಟ್ ಜೊತೆಗೆ ಸಿನಿಮಾನಲ್ಲಿ ಕುಸ್ತಿ ಪಂದ್ಯಗಳು ಸಹ ಇದ್ದು, ಎರಡರ ಕಾಂಬೊ ಅನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಅವರು ಕುಸ್ತಿ ಗುರುವಿನ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗುತ್ತಿದೆ.

‘ಪೆದ್ದಿ’ ಸಿನಿಮಾವನ್ನು ಸುಕುಮಾರ್ ಶಿಷ್ಯ ಬುಚ್ಚಿಬಾಬು ಸನಾ ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿ ಮೇಕರ್ಸ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾನಲ್ಲಿ ಜಾನ್ಹವಿ ಕಪೂರ್ ನಾಯಕಿ. ಹಳ್ಳಿಯ ಯುವ ರಾಜಕಾರಣಿಯಾಗಿ ಅವರು ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, ಸಿನಿಮಾದ ‘ಚಿಕಿರಿ-ಚಿಕಿರಿ’ ಹಾಡು ಈಗಾಗಲೇ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಸಿನಿಮಾನಲ್ಲಿ ಬಾಲಿವುಡ್ ನಟ ದಿವ್ಯೇಂದು, ಬೊಮನ್ ಇರಾನಿ ಜೊತೆಗೆ ಜಗಪತಿ ಬಾಬು, ಹಾಸ್ಯನಟ ಸತ್ಯ, ಪೋಸಾನಿ ಕೃಷ್ಣಮುರಳಿ ನಟಿಸಿದ್ದಾರೆ. ಐಟಂ ಹಾಡಿನಲ್ಲಿ ಶ್ರುತಿ ಹಾಸನ್ ಡ್ಯಾನ್ಸ್ ಮಾಡಿದ್ದಾರೆ. ಸಿನಿಮಾ ಜೂನ್ 4ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Thu, 14 May 26

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us