ರಾಮನ ಪಾತ್ರಧಾರಿ, ಬಿಜೆಪಿ ಅಭ್ಯರ್ಥಿ ಅರುಣ್​ ಗೋವಿಲ್​ ಜಯಭೇರಿ; ಸಿಕ್ಕ ಮತ ಎಷ್ಟು?

|

Updated on: Jun 04, 2024 | 10:58 PM

‘ರಾಮಾಯಣ’ ಸೀರಿಯಲ್​ನಲ್ಲಿ ಅರುಣ್​ ಗೋವಿಲ್​ ಅವರು ರಾಮನ ಪಾತ್ರ ನಿಭಾಯಿಸುವ ಮೂಲಕ ಮನೆಮಾತಾಗಿದ್ದರು. 2021ರಲ್ಲಿ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಈ ಬಾರಿ ಅವರಿಗೆ ಮೊದಲ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಮೀರತ್​ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಅವರು ಗೆಲುವು ಪಡೆದಿದ್ದಾರೆ.

ರಾಮನ ಪಾತ್ರಧಾರಿ, ಬಿಜೆಪಿ ಅಭ್ಯರ್ಥಿ ಅರುಣ್​ ಗೋವಿಲ್​ ಜಯಭೇರಿ; ಸಿಕ್ಕ ಮತ ಎಷ್ಟು?
ಅರುಣ್​ ಗೋವಿಲ್​
Follow us on

ಎಂದಿನಂತೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಹಲವು ಸೆಲೆಬ್ರಿಟಿಗಳು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ಆ ಪೈಕಿ ಕಂಗನಾ ರಣಾವತ್​, ಅರುಣ್​ ಗೋವಿಲ್​, ಹೇಮಾ ಮಾಲಿನಿ ಮುಂತಾದವರಿಗೆ ಜಯ ಸಿಕ್ಕಿದೆ. ಉತ್ತರ ಪ್ರದೇಶದ ಮೀರತ್​ ಕ್ಷೇತ್ರದಿಂದ ಜನಪ್ರಿಯ ನಟ ಅರುಣ್​ ಗೋವಿಲ್​ ಅವರು ಬಿಜೆಪಿ (BJP) ಅಭ್ಯರ್ಥಿಯಾಗಿ ಚುನಾವಣೆಯ ಕಣಕ್ಕೆ ಇಳಿದಿದ್ದರು. ಇದು ಅವರ ಮೊದಲ ಚುನಾವಣೆ. ಚೊಚ್ಚಲ ಪ್ರಯತ್ನದಲ್ಲೇ ಅರುಣ್​ ಗೋವಿಲ್​ (Arun Govil) ಅವರು ಜಯಭೇರಿ ಬಾರಿಸಿದ್ದಾರೆ. 10,585 ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದಾರೆ.

1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ‘ರಾಮಾಯಣ’ ಧಾರಾವಾಹಿಯಲ್ಲಿ ಅರುಣ್​ ಗೋವಿಲ್​ ಅವರು ರಾಮನ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದರು. 2021ರಲ್ಲಿ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದರು. ಈ ಬಾರಿ ಅವರಿಗೆ ಮೊದಲ ಸಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಒಟ್ಟು 5,46,469 ಮತಗಳನ್ನು ಪಡೆಯುವ ಮೂಲಕ ಅವರು ಗೆದ್ದಿದ್ದಾರೆ.

ಇದನ್ನೂ ಓದಿ: ‘ಆತನ ಅಹಂಕಾರ ಮುರಿದಿದ್ದಕ್ಕೆ ಧನ್ಯವಾದ’: ಚಾರ್ ಸೌ ಪಾರ್ ಬಗ್ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ

ಅರುಣ್​ ಗೋವಿಲ್​ ವಿರುದ್ಧ ಸಮಾಜವಾದಿ ಪಾರ್ಟಿಯ ಸುನೀತಾ ವರ್ಮಾ ಅವರು 5,35,884 ಮತಗಳನ್ನು ಪಡೆದಿದ್ದಾರೆ. ಅವರಿಗಿಂತಲೂ 10,585 ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅರುಣ್​ ಗೋವಿಲ್​ ಅವರು ಗೆಲುವು ಕಂಡಿದ್ದಾರೆ. ಈಗ ಅವರಿಗೆ 66 ವರ್ಷ ವಯಸ್ಸು. ಸಂಸದನಾಗಿರುವ ಅವರಿಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಸಿನಿಮಾದಲ್ಲಿ ಮೋದಿ ಪಾತ್ರ:

ಅರುಣ್​ ಗೋವಿಲ್​ ಅವರು ‘ರಾಮಾಯಣ’ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿ ಜನರ ಮನ ಗೆದ್ದಿದ್ದರು. ಕೊವಿಡ್​ ಲಾಕ್​ಡೌನ್​ ಸಮಯದಲ್ಲಿ ಈ ಸೀರಿಯಲ್​ ಮರುಪ್ರಸಾರ ಕಂಡಿತ್ತು. ಆಗಲೂ ಅದನ್ನು ಜನರು ಅಷ್ಟೇ ಆಸಕ್ತಿಯಿಂದ ವೀಕ್ಷಿಸಿದ್ದರು. ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ‘ಆರ್ಟಿಕಲ್​ 370’ ಸಿನಿಮಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವನ್ನು ಅರುಣ್​ ಗೋವಿಲ್​ ನಿಭಾಯಿಸಿದ್ದರು. ಆ ಸಿನಿಮಾ ಯಶಸ್ಸು ಕಂಡ ಬೆನ್ನಲ್ಲೇ ಅವರಿಗೆ ಮೀರತ್​ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್​ ಸಿಕ್ಕಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.