AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಣಬಾಲಿ’ ಟೀಸರ್: ಬ್ರಿಟಿಷರ ವಿರುದ್ಧ ಗುಡುಗಿದ ನಟ ವಿಜಯ್ ದೇವರಕೊಂಡ

ನಟ ವಿಜಯ್ ದೇವರಕೊಂಡ ಅವರ ವೃತ್ತಿಜೀವನದಲ್ಲಿ ‘ರಣಬಾಲಿ’ ಸಿನಿಮಾ ಸಖತ್ ಡಿಫರೆಂಟ್ ಆಗಿರಲಿದೆ. ಈ ಸಿನಿಮಾದಲ್ಲಿ ಐತಿಹಾಸಿಕ ಕಥೆಯನ್ನು ಹೇಳಲಾಗುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಜೋಡಿಯಾಗಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗ ಬಿಡುಗಡೆ ಆಗಿರುವ ಟೀಸರ್ ಗಮನ ಸೆಳೆಯುತ್ತಿದೆ.

‘ರಣಬಾಲಿ’ ಟೀಸರ್: ಬ್ರಿಟಿಷರ ವಿರುದ್ಧ ಗುಡುಗಿದ ನಟ ವಿಜಯ್ ದೇವರಕೊಂಡ
Vijay Deverakonda
ಮದನ್​ ಕುಮಾರ್​
|

Updated on: Sep 09, 2026 | 7:50 PM

Share

ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಕಥಾಹಂದರದ ಆ್ಯಕ್ಷನ್-ಡ್ರಾಮಾ ‘ರಣಬಾಲಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಹುಲ್ ಸಾಂಕೃತ್ಯನ್ ನಿರ್ದೇಶನದ ಈ ಸಿನಿಮಾವನ್ನು ಅಕ್ಟೋಬರ್‌ನಲ್ಲಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದ್ದು, ಇದೀಗ ‘ದಿ ಸ್ಯಾವೇಜಸ್ ಓತ್’ ಎಂಬ ಶೀರ್ಷಿಕೆಯಡಿ ರಗಡ್ ಟೀಸರ್ ಹೊರತಂದಿದೆ. ಈ ಟೀಸರ್ ನೋಡಿದ ಅಭಿಮಾನಿಗಳಿಗೆ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

2 ನಿಮಿಷ 32 ಸೆಕೆಂಡುಗಳ ಈ ಟೀಸರ್ 1876-1878ರ ಅವಧಿಯಲ್ಲಿ ಸಂಭವಿಸಿದ ‘ಮದ್ರಾಸ್ ಕ್ಷಾಮ’ ಹಿನ್ನೆಲೆಯನ್ನು ಹೊಂದಿದೆ. ತೀವ್ರ ಬರಗಾಲ, ಬ್ರಿಟಿಷರ ಕ್ರೂರ ರಫ್ತು ನೀತಿ ಮತ್ತು ಕಳಪೆ ಪರಿಹಾರ ವ್ಯವಸ್ಥೆಯಿಂದಾಗಿ ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಪ್ರಾಣ ಕಳೆದುಕೊಂಡಿದ್ದರು. ಈ ಕರಾಳ ಅಧ್ಯಾಯದ ನಡುವೆ ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯ ಮತ್ತು ಅವರ ವಿರುದ್ಧ ಬಂಡೇಳುವ ನಾಯಕನ ಕಥೆಯನ್ನು ಟೀಸರ್‌ನಲ್ಲಿ ಕಟ್ಟಿಕೊಡಲಾಗಿದೆ.

ರಣಬಾಲಿ ಸಿನಿಮಾದ ಟೀಸರ್:

‘ದಿ ಮಮ್ಮಿ’ ಸಿನಿಮಾ ಖ್ಯಾತಿಯ ಹಾಲಿವುಡ್ ನಟ ಆರ್ನಾಲ್ಡ್ ವೋಸ್ಲೂ ಅವರು ‘ರಣಬಾಲಿ’ ಚಿತ್ರದಲ್ಲಿ ‘ಸರ್ ಥಿಯೋಡೋರ್ ಹೆಕ್ಟರ್’ ಎಂಬ ಕ್ರೂರ ಬ್ರಿಟಿಷ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಬ್ರಿಟಿಷರು ನಡೆಸಿದ ಅಮಾಯವೀಯ ಕೃತ್ಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ. ಅದರ ಝಲಕ್ ಈ ಟೀಸರ್​ನಲ್ಲಿ ಕಾಣಿಸಿದೆ.

ರಾಯಲಸೀಮೆಯ ಧೀರ ‘ರಣಬಾಲಿ’:

ರಾಯಲಸೀಮೆಯ ಮಣ್ಣಿನ ಮಗ ‘ರಣಬಾಲಿ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ವಿಜಯ್ ದೇವರಕೊಂಡ ಮಿಂಚಿದ್ದಾರೆ. ಉದ್ದವಾದ ಮೀಸೆ, ಹಾರಾಡುವ ಕೂದಲು ಮತ್ತು ಕುದುರೆ ಸವಾರಿಯ ಸಾಹಸ ದೃಶ್ಯಗಳಲ್ಲಿ ವಿಜಯ್ ಅತ್ಯಂತ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಹೆಂಡತಿ ಜಯಮ್ಮನಾಗಿ ಹಾಗೂ ಹೋರಾಟದ ಪಾಲುದಾರರಾಗಿ ರಶ್ಮಿಕಾ ಮಂದಣ್ಣ ಸಾಥ್ ನೀಡಿದ್ದಾರೆ.

ಇದನ್ನೂ ಓದಿ: ‘ರಣಬಾಲಿ’ ಸೆಟ್‌ನಲ್ಲಿ ವಿಜಯ್ ದೇವರಕೊಂಡ ಭಾರಿ ಬೇಡಿಕೆ ಇಟ್ಟರಾ? ವೈರಲ್ ಸ್ಕ್ರೀನ್‌ಶಾಟ್‌ಗೆ ಸಿಕ್ಕಿತು ಸ್ಪಷ್ಟನೆ

ರಣಬಾಲಿ ಸಿನಿಮಾದ ರಿಲೀಸ್ ದಿನಾಂಕ:

ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟದ ಕಥಾಹಂದರ ಹೊಂದಿರುವ ‘ರಣಬಾಲಿ’ ಟೀಸರ್‌ನ ಕೊನೆಯಲ್ಲಿ ದೈವಿಕ ಅಂಶಗಳ ಸುಳಿವನ್ನು ನೀಡಲಾಗಿದೆ. ಈ ಚಿತ್ರವನ್ನು ದಸರಾ ಹಬ್ಬದ ಶುಭಸಮಯದಲ್ಲಿ, ಅಂದರೆ ಅಕ್ಟೋಬರ್ 16ರಂದು ವಿಶ್ವದಾದ್ಯಂತ ತೆರೆಗೆ ತರಲು ಪ್ಲ್ಯಾನ್ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ
ನೆಲದ ಮೇಲೆ ಕುಳಿತು ಉಪಹಾರ ಸೇವಿಸಿದ ವಿಜಯೇಂದ್ರ