AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯೇ (ಫೆ 2) ವಿಜಯ್-ರಶ್ಮಿಕಾ ವಿವಾಹ? ವೈರಲ್ ವಿಡಿಯೋನಲ್ಲಿ ಏನೇನಿದೆ?

Rashmika Mandanna and Vijay Deverakonda: ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರು ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ, ತಮ್ಮ ಪ್ರೀತಿಯನ್ನು ಸಾಕಷ್ಟು ಗೌಪ್ಯವಾಗಿಯೇ ಇಟ್ಟಿದ್ದರು. ಇದೀಗ ಈ ಜೋಡಿ ವಿವಾಹ ಆಗುತ್ತಿದ್ದು, ವಿವಾಹವನ್ನೂ ಸಹ ಗುಟ್ಟಾಗಿಯೇ ಇರಿಸಿದ್ದಾರೆ. ಆದರೆ ಸುದ್ದಿ ಲೀಕ್ ಆಗಿದೆ. ವಿಜಯ್ ಮತ್ತು ರಶ್ಮಿಕಾ ಅವರು ನಾಳೆ (ಫೆಬ್ರವರಿ 2) ಮದುವೆ ಆಗುತ್ತಿದ್ದು, ಮದುವೆ ತಯಾರಿಯದ್ದು ಎನ್ನಲಾದ ವಿಡಿಯೋ ಸಹ ವೈರಲ್ ಆಗಿದೆ.

ನಾಳೆಯೇ (ಫೆ 2) ವಿಜಯ್-ರಶ್ಮಿಕಾ ವಿವಾಹ? ವೈರಲ್ ವಿಡಿಯೋನಲ್ಲಿ ಏನೇನಿದೆ?
ವಿಜಯ್-ರಶ್ಮಿಕಾ
ಮಂಜುನಾಥ ಸಿ.
|

Updated on: Feb 01, 2026 | 2:47 PM

Share

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಕಳೆದ ಕೆಲ ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿರುವ ವಿಚಾರ ಗುಟ್ಟೇನೂ ಅಲ್ಲ. ಈ ಇಬ್ಬರು ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ, ತಮ್ಮ ಪ್ರೀತಿಯನ್ನು ಸಾಕಷ್ಟು ಗೌಪ್ಯವಾಗಿಯೇ ಇಟ್ಟಿದ್ದರು. ಇದೀಗ ಈ ಜೋಡಿ ವಿವಾಹ ಆಗುತ್ತಿದ್ದು, ವಿವಾಹವನ್ನೂ ಸಹ ಗುಟ್ಟಾಗಿಯೇ ಇರಿಸಿದ್ದಾರೆ. ಆದರೆ ಸುದ್ದಿ ಲೀಕ್ ಆಗಿದೆ. ವಿಜಯ್ ಮತ್ತು ರಶ್ಮಿಕಾ ಅವರು ನಾಳೆ (ಫೆಬ್ರವರಿ 2) ಮದುವೆ ಆಗುತ್ತಿದ್ದು, ಮದುವೆ ತಯಾರಿಯದ್ದು ಎನ್ನಲಾದ ವಿಡಿಯೋ ಸಹ ವೈರಲ್ ಆಗಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಕೆಲ ತಿಂಗಳ ಹಿಂದಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸಖತ್ ಸುದ್ದಿ ಆಗಿತ್ತು. ಅದಾದ ಬಳಿಕ ರಶ್ಮಿಕಾ ಮಂದಣ್ಣ ಬ್ಯಾಚುಲರ್ ಪಾರ್ಟಿ ಸಹ ಮುಗಿಸಿಕೊಂಡು ಬಂದರು. ವಿಜಯ್ ಮತ್ತು ರಶ್ಮಿಕಾ ಜಂಟಿಯಾಗಿ ವಿದೇಶಕ್ಕೆ ಹೋಗಿ ಶಾಪಿಂಗ್ ಸಹ ಮಾಡಿಕೊಂಡು ಬಂದರು. ಇಬ್ಬರು ಫೆಬ್ರವರಿಯಲ್ಲಿ ವಿವಾಹ ಆಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲ ವಾರಗಳಿಂದಲೂ ಹರಿದಾಡುತ್ತಿತ್ತು, ಆದರೆ ಇವರ ಮದುವೆ ನಾಳೆ (ಫೆಬ್ರವರಿ 2) ನಡೆಯಲಿದೆ ಎನ್ನಲಾಗುತ್ತಿದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು, ವಿಡಿಯೋನಲ್ಲಿ ಇಬ್ಬರು ಯುವತಿಯರು ತಾವು ರಶ್ಮಿಕಾ ಮತ್ತು ವಿಜಯ್ ಅವರ ಮದುವೆ ನಡೆಯಲಿರುವ ಸ್ಥಳದಲ್ಲಿ ಇದ್ದು, ಅದ್ಧೂರಿಯಾಗಿ ವಿವಾಹದ ಸಿದ್ಧತೆಗಳು ನಡೆಯುತ್ತಿವೆ ಎಂದಿದ್ದಾರೆ ಅಲ್ಲದೆ ಸಿದ್ಧತೆಗಳು ನಡೆಯುತ್ತಿರುವ ವಿಡಿಯೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

View this post on Instagram

A post shared by Tanya ♡ (@tanyaa.yaaa)

ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ರಾಜಸ್ಥಾನದ ಅರಮನೆಗಳ ನಗರ ಉದಯಪುರದ ಸಿಟಿ ಪ್ಯಾಲೆಸ್​​ನಲ್ಲಿ ವಿವಾಹ ನಡೆಯಲಿದೆ ಎಂದು ವೈರಲ್ ವಿಡಿಯೋನಲ್ಲಿ ಯುವತಿಯರು ಹೇಳಿದ್ದಾರೆ. ಅವರು ಮಾಡಿರುವ ವಿಡಿಯೋನಲ್ಲಿ ವೇದಿಕೆಯನ್ನು ಬಲು ಅದ್ಧೂರಿಯಾಗಿ ಸಿಂಗರಿಸಲಾಗುತ್ತಿದೆ.

ಎರಡು ದಿನದ ಹಿಂದಷ್ಟೆ ನಟಿ ರಶ್ಮಿಕಾ ಮಂದಣ್ಣ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆಗ ಪಾಪರಾಟ್ಜಿಗಳು ‘ಮದುವೆಗೆ ಕರೆಯುವುದಿಲ್ಲವೇ?’ ಎಂದು ನೇರವಾಗಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಜಾಣತನದ ಉತ್ತರ ನೀಡಿ ಜಾರಿಕೊಂಡ ರಶ್ಮಿಕಾ, ‘ಯಾರ ಮದುವೆ?’ ಎಂದು ಕೇಳಿದ್ದಾರೆ. ಮತ್ತೆ ಮದುವೆಯ ಬಗ್ಗೆಯೇ ಪ್ರಶ್ನೆ ಕೇಳಿದಾಗ ತಕ್ಷಣವೇ ಜಾಣತನದಿಂದ ಮಾತನ್ನು ಸಿನಿಮಾದ ಕಡೆಗೆ ತಿರುಗಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ