Rashmika Mandanna: ರಶ್ಮಿಕಾ ಬಳಿ ಸೆಲ್ಫಿ ಕೇಳಿದ ಅಭಿಮಾನಿಯನ್ನು ಎಳೆದೊಯ್ದ ಬಾಡಿಗಾರ್ಡ್​; ನಟಿಯ ರಿಯಾಕ್ಷನ್ ಹೇಗಿತ್ತು?

ರಶ್ಮಿಕಾ ಸೆಲ್ಫಿಗೆ ಪೋಸ್ ಕೊಡೋಕೆ ರೆಡಿ ಆದರು. ಆದರೆ, ಅಭಿಮಾನಿಯನ್ನು ಎಳೆದು ಪಕ್ಕಕ್ಕೆ ತಳ್ಳುವ ಕೆಲಸ ಅಂಗರಕ್ಷಕನಿಂದ ಆಗಿದೆ.

Rashmika Mandanna: ರಶ್ಮಿಕಾ ಬಳಿ ಸೆಲ್ಫಿ ಕೇಳಿದ ಅಭಿಮಾನಿಯನ್ನು ಎಳೆದೊಯ್ದ ಬಾಡಿಗಾರ್ಡ್​; ನಟಿಯ ರಿಯಾಕ್ಷನ್ ಹೇಗಿತ್ತು?
ರಶ್ಮಿಕಾ (PC: Manav Manglani )

Updated on: May 17, 2023 | 7:01 AM

ರಶ್ಮಿಕಾ ಮಂದಣ್ಣ ಅವರ ಜನಪ್ರಿಯತೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಲೇ ಇದೆ. ರಶ್ಮಿಕಾಗೆ (Rashmika Mandanna) ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 3.8 ಕೋಟಿ ಹಿಂಬಾಲಕರಿದ್ದಾರೆ. ಇದು ಅವರ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಹೇಳುತ್ತದೆ. ಇನ್​ಸ್ಟಾಗ್ರಾಮ್​ನಲ್ಲಿ ರಶ್ಮಿಕಾ ಮಂದಣ್ಣ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸ್ವತಃ ಜಾನ್ವಿ ಕಪೂರ್ ಅಚ್ಚರಿ ಹೊರಹಾಕಿದ್ದರು. ರಶ್ಮಿಕಾ ಅಭಿಮಾನಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಸೆಲ್ಫಿ ಕೇಳಿದರೆ ಬೇಸರ ಇಲ್ಲದೆ ಪೋಸ್ ಕೊಡುತ್ತಾರೆ. ಇತ್ತೀಚೆಗೆ ರಶ್ಮಿಕಾ ಬಳಿ ಅಭಿಮಾನಿಯೋರ್ವ ಸೆಲ್ಫಿ ಕೇಳಲು ಬಂದಿದ್ದ. ಈ ವೇಳೆ ​​ ಅಭಿಮಾನಿಯನ್ನು ರಶ್ಮಿಕಾ ಬಾಡಿಗಾರ್ಡ್ ಪಕ್ಕಕ್ಕೆ ತಳ್ಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ರಶ್ಮಿಕಾ ಮಂದಣ್ಣ ಅವರು ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಇತ್ತೀಚೆಗೂ ಹಾಗೆಯೇ ಆಗಿದೆ. ರಶ್ಮಿಕಾ ಮಂದಣ್ಣ ಅವರು ಇವೆಂಟ್ ಒಂದಕ್ಕೆ ತೆರಳಿದ್ದರು. ಮರಳಿ ಬರುವಾಗ ಅಲ್ಲಿದ್ದ ಅಭಿಮಾನಿಯೋರ್ವ ಸೆಲ್ಫಿ ಕೇಳಿದ್ದಾನೆ. ರಶ್ಮಿಕಾ ಸೆಲ್ಫಿಗೆ ಪೋಸ್ ಕೊಡೋಕೆ ರೆಡಿ ಆದರು. ಆದರೆ, ಅಭಿಮಾನಿಯನ್ನು ಎಳೆದು ಪಕ್ಕಕ್ಕೆ ತಳ್ಳುವ ಕೆಲಸ ಅಂಗರಕ್ಷಕನಿಂದ ಆಗಿದೆ.

ಇದನ್ನೂ ಓದಿ: ರಶ್ಮಿಕಾ ಬೆಳವಣಿಗೆ ನೋಡಿ ಹೊಟ್ಟೆ ಉರಿದುಕೊಳ್ಳೋದು ಪಕ್ಕಾ; ಮತ್ತೋರ್ವ ಸ್ಟಾರ್ ಹೀರೋಗೆ ನಾಯಕಿ

ಬಾಡಿಗಾರ್ಡ್ ವರ್ತನೆ ನೋಡಿ ರಶ್ಮಿಕಾ ಮಂದಣ್ಣಗೆ ಶಾಕ್ ಆಗಿದೆ. ಮುಂದಕ್ಕೆ ನಡೆಯುತ್ತಾ ಅವರು ಹಿಂದಕ್ಕೆ ತಿರುಗಿ ನೋಡಿದ್ದಾರೆ. ಆದರೆ, ಆ ವ್ಯಕ್ತಿ ಕಾಣಿಸಿಲ್ಲ. ಬಳಿಕ ಬಂದ ಯುವತಿಗೆ ರಶ್ಮಿಕಾ ಸೆಲ್ಫಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಾಡಿಗಾರ್ಡ್ ಈ ರೀತಿ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ಅನೇಕರಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: ‘ಶ್ರೀವಲ್ಲಿ ಪಾತ್ರವನ್ನು ರಶ್ಮಿಕಾಗಿಂತ ನಾನೇ ಉತ್ತಮವಾಗಿ ಮಾಡುತ್ತಿದ್ದೆ’; ಕೊಂಕು ತೆಗೆದ ತಮಿಳು ನಟಿ

ರಶ್ಮಿಕಾ ಮಂದಣ್ಣ ಚಿತ್ರರಂಗದಲ್ಲಿ ಸಾಕಷ್ಟು ಬ್ಯುಸಿ ಇದ್ದಾರೆ. ಸದ್ಯ ‘ಪುಷ್ಪ 2’, ‘ಅನಿಮಲ್’ ಹಾಗೂ ‘ರೇನ್​ಬೋ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದಲ್ಲದೆ, ಇನ್ನೂ ಶೀರ್ಷಿಕೆ ಇಡದ ನಿತಿನ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಅವರು ವಿಕ್ಕಿ ಕೌಶಲ್ ಜೊತೆ ಹಾಗೂ ಶಾಹಿದ್ ಕಪೂರ್ ಜೊತೆ ತಲಾ ಒಂದು ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:59 am, Wed, 17 May 23