‘ಮೈಸಾ’ ಚಿತ್ರಕ್ಕಾಗಿ ನೀರಿನಾಳದೊಳಗೆ ಇಳಿದು ಫೈಟ್ ಮಾಡಿದ ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ 'ಮೈಸಾ' ಚಿತ್ರದ ಮೂಲಕ ಮಹಿಳಾ ಪ್ರಧಾನ ಸಿನಿಮಾ ರಂಗಕ್ಕೆ ಅದ್ಧೂರಿಯಾಗಿ ಕಾಲಿಟ್ಟಿದ್ದಾರೆ. ಇದು ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ, ನಾಯಕಿಯೇ ಸ್ವತಃ ಬಾಡಿ ಡಬಲ್ ಇಲ್ಲದೆ ಅಂಡರ್ ವಾಟರ್ ಫೈಟಿಂಗ್ ಮಾಡಿರುವ ಆಕ್ಷನ್ ಥ್ರಿಲ್ಲರ್ ಆಗಿದೆ. ಈ ಕಠಿಣ ಸಾಹಸಕ್ಕಾಗಿ ಸತತ 20 ಗಂಟೆಗಳ ಕಾಲ ನೀರಿನಲ್ಲಿದ್ದ ರಶ್ಮಿಕಾ, ಇದು ತಮ್ಮ ವೃತ್ತಿಜೀವನದ ಅತ್ಯಂತ ದೊಡ್ಡ ಸವಾಲು ಎಂದಿದ್ದಾರೆ. ಇದು ಹೊಸ ದಾಖಲೆ ಬರೆಯುವುದು ಖಚಿತ.

ಮುಖ್ಯಾಂಶಗಳು
- 'ಮೈಸಾ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹೊಸ ಸಾಹಸ
- ಡೂಪ್ ಮತ್ತು ಬಾಡಿ ಡಬಲ್ ಇಲ್ಲದೆ ರಶ್ಮಿಕಾ ಸಾಹಸ
- ನೀರಿನಲ್ಲಿ 20 ಗಂಟೆಗಳ ಶೂಟಿಂಗ್
ನಟಿ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಸಿನಿ ಬದುಕಿನಲ್ಲಿ ಸಾಕಷ್ಟು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿದ್ದಾರೆ. ಆದರೆ, ಅವರಿಗೆ ಮಹಿಳಾ ಪ್ರಧಾನ ಸಿನಿಮಾ ಮಾಡುವ ಅವಕಾಶ ಸಿಕ್ಕಿರಲಿಲ್ಲ. ‘ಮೈಸಾ’ ಚಿತ್ರದ ಮೂಲಕ ಅವರು ಅತ್ಯಂತ ಕಠಿಣ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರು ಈ ಚಿತ್ರಕ್ಕಾಗಿ ಭರ್ಜರಿ ಫೈಟಿಂಗ್ ಮಾಡಿದ್ದಾರೆ. ಇದು ಮಹಿಳಾ ಪ್ರಧಾನ ಪ್ಯಾನ್-ಇಂಡಿಯಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
‘ಮೈಸಾ’ ಚಿತ್ರದಲ್ಲಿ ರಶ್ಮಿಕಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಪೋಸ್ಟರ್ಗಳು ಈಗಾಗಲೇ ಸಾಕ್ಷಿಯಾಗಿವೆ. ಇದೀಗ ಚಿತ್ರತಂಡ ಒಂದು ದೊಡ್ಡ ಅಪ್‌ಡೇಟ್ ನೀಡಿದೆ. ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾ ಒಂದರಲ್ಲಿ ‘ಅಂಡರ್ ವಾಟರ್’ ಫೈಟಿಂಗ್ ಸೀನ್ ಶೂಟಿಂಗ್ ಮುಗಿಸಲಾಗಿದೆ. ಇದನ್ನು ರಶ್ಮಿಕಾ ಯಶಸ್ವಿಯಾಗಿ ಪೂರೈಸಿದ್ದಾರೆ.
View this post on Instagram
ಸಾಮಾನ್ಯವಾಗಿ ಈ ರೀತಿಯ ದೃಶ್ಯ ಬಂದಾಗ ನಿರ್ದೇಶಕರು, ಸ್ಟಾರ್ಗಳು ಬಾಡಿ ಡಬಲ್ ಆಯ್ಕೆ ಮಾಡಿಕೊಳ್ಳುತ್ತಾರೆ. ಅಂದರೆ, ರಶ್ಮಿಕಾ ಅವರನ್ನೇ ಹೋಲುವ ಮತ್ತೊಬ್ಬರನ್ನು ಕರೆತಂದು ಜನರಿಗೆ ಗೊತ್ತಾಗದಂತೆ ಶೂಟ್ ಮಾಡಲಾಗುತ್ತದೆ. ಆದರೆ, ಈ ಸಾಹಸ ದೃಶ್ಯದಲ್ಲಿ ರಶ್ಮಿಕಾ ಅವರೇ ಖುದ್ದಾಗಿ ನಟಿಸಿದ್ದು, ಯಾವುದೇ ಡೂಪ್ ಅಥವಾ ಬಾಡಿ ಡಬಲ್ ಬಳಸಿಲ್ಲ ಎಂಬುದು ವಿಶೇಷ. ಶೂಟಿಂಗ್‌ಗಾಗಿ ರಶ್ಮಿಕಾ ಅವರು ಸತತ ಎರಡು ದಿನಗಳ ಕಾಲ ನೀರಿನಲ್ಲೇ ಇದ್ದರು. ಒಟ್ಟು ಸುಮಾರು 20 ಗಂಟೆಗಳ ಕಾಲ ನೀರಿನ ಅಡಿಯಲ್ಲಿ ಇದ್ದು ಶೂಟಿಂಗ್ ಮುಗಿಸಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬ ‘ಅರುಂಧತಿ’ ಆಗುವ ಹಾದಿಯಲ್ಲಿ ರಶ್ಮಿಕಾ ಮಂದಣ್ಣ: ಕೈ ಹಿಡಿಯುತ್ತಾ ‘ಮೈಸಾ’
ಚಿತ್ರತಂಡ ಈ ಶೂಟಿಂಗ್‌ನ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಲಿದೆ ಎಂದು ತಂಡ ಹೇಳಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ಸಿನಿಮಾ ಈ ವರ್ಷವೇ ತೆರೆಗೆ ಬರಲಿದೆ.
ಜೀವನದ ಅತ್ಯಂತ ಕಠಿಣ ಕೆಲಸ ಎಂದ ರಶ್ಮಿಕಾ
‘ನಾನು ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ ಇದೇ ಶೂಟಿಂಗ್. ನನ್ನ ಇಡೀ ಜೀವನದಲ್ಲಿ ನಾನು ಮಾಡಿದ ಅತ್ಯಂತ ಕಠಿಣ ಕೆಲಸ ಇದು. ನಾವೆಲ್ಲರೂ ಈ ದೃಶ್ಯಕ್ಕಾಗಿ ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡಿದ್ದೇವೆ. ಇದು ನನಗೆ ತುಂಬಾ ರೋಮಾಂಚನ ನೀಡಿದೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಏನಿದು ‘ಮೈಸಾ’ ಸಿನಿಮಾ?
‘ಮೈಸಾ’ ಒಂದು ಎಮೋಷನಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದೆ. ಇದರ ಕಥೆ ಬುಡಕಟ್ಟು ಜನಾಂಗದ ಹಿನ್ನೆಲೆಯಲ್ಲಿ ಸಾಗಲಿದೆ. ಚಿತ್ರವನ್ನು ರವೀಂದ್ರ ಪುಲ್ಲೆ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಪ್ರಶ್ನೆ: ರಶ್ಮಿಕಾ ಮಂದಣ್ಣ ನಟನೆಯ ಮೊದಲ ಮಹಿಳಾ ಪ್ರಧಾನ ಸಿನಿಮಾ ಯಾವುದು? ಉತ್ತರ: ಮೈಸಾ ಸಿನಿಮಾ ಪ್ರಶ್ನೆ:ಈ ಸಿನಿಮಾ ಯಾವಾಗ ರಿಲೀಸ್ ಆಗಲಿದೆ? ಉತ್ತರ: ಈ ವರ್ಷವೇ ರಶ್ಮಿಕಾ ನಟನೆಯ ‘ಮೈಸಾ’ ರಿಲೀಸ್ ಆಗಲಿದೆ.
ಪ್ರಶ್ನೆ: ರಶ್ಮಿಕಾ ಮಂದಣ್ಣ ವಿವಾಹ ಯಾವಗ ಆಯಿತು? ಉತ್ತರ: ರಶ್ಮಿಕಾ-ವಿಜಯ್ ವಿವಾಹ ಈ ವರ್ಷ ಫೆಬ್ರವರಿ 26ರಂದು ಉದಯಪುರದಲ್ಲಿ ನಡೆಯಿತು.




