‘ವಾರಿಸು’ ಟ್ರೇಲರ್​​ನಲ್ಲಿ ಕೆಲವೇ ಸೆಕೆಂಡ್​​​ಗಳ ದೃಶ್ಯಕ್ಕೆ ರಶ್ಮಿಕಾ ಸೀಮಿತ; ಸಿನಿಮಾದಲ್ಲೂ ಇದೇ ಕಥೆ?

| Updated By: ರಾಜೇಶ್ ದುಗ್ಗುಮನೆ

Updated on: Jan 05, 2023 | 7:08 AM

Varisu Trailer: ‘ವಾರಿಸು’ ಸಿನಿಮಾ ರಶ್ಮಿಕಾ ಮಂದಣ್ಣ ಪಾಲಿಗೆ ತುಂಬಾನೇ ವಿಶೇಷ. ದಳಪತಿ ವಿಜಯ್ ಜತೆ ನಟಿಸಬೇಕು ಎಂಬುದು ಅವರ ಕನಸಾಗಿತ್ತು. ಆ ಕನಸು ಈ ಚಿತ್ರದ ಮೂಲಕ ಈಡೇರಿದೆ.

‘ವಾರಿಸು’ ಟ್ರೇಲರ್​​ನಲ್ಲಿ ಕೆಲವೇ ಸೆಕೆಂಡ್​​​ಗಳ ದೃಶ್ಯಕ್ಕೆ ರಶ್ಮಿಕಾ ಸೀಮಿತ; ಸಿನಿಮಾದಲ್ಲೂ ಇದೇ ಕಥೆ?
ರಶ್ಮಿಕಾ
Follow us on

ದಳಪತಿ ವಿಜಯ್ (Thalapathy Vijay) ನಟನೆಯ ‘ವಾರಿಸು’ ಸಿನಿಮಾದ ಟ್ರೇಲರ್​ ರಿಲೀಸ್ ಆಗಿದೆ. ಮಾಸ್​ ಜತೆ ಸೆಂಟಿಮೆಂಟ್ ಕಥೆಯೂ ಸಿನಿಮಾದಲ್ಲಿ ಹೈಲೈಟ್ ಆಗಿದೆ ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. 2.27 ನಿಮಿಷದ ಟ್ರೇಲರ್​​ನಲ್ಲಿ ರಶ್ಮಿಕಾ ಮಂದಣ್ಣ ಅವರು ಕೆಲವೇ ಸೆಕೆಂಡ್​ಗಳ ದೃಶ್ಯಕ್ಕೆ ಸೀಮಿತ ಆಗಿದ್ದಾರೆ. ‘ಬೀಸ್ಟ್​​’ ಚಿತ್ರದಲ್ಲಿ  ಪೂಜಾ ಹೆಗ್ಡೆಗೆ (Pooja Hegde) ಆದ ಕಥೆಯೇ ರಶ್ಮಿಕಾ ಮಂದಣ್ಣಗೂ ರಿಪೀಟ್ ಆಗುತ್ತಾ ಎಂಬುದು ಸದ್ಯದ ಕುತೂಹಲ.

‘ವಾರಿಸು’ ಸಿನಿಮಾ ರಶ್ಮಿಕಾ ಮಂದಣ್ಣ ಪಾಲಿಗೆ ತುಂಬಾನೇ ವಿಶೇಷ. ದಳಪತಿ ವಿಜಯ್ ಜತೆ ನಟಿಸಬೇಕು ಎಂಬುದು ಅವರ ಕನಸಾಗಿತ್ತು. ಆ ಕನಸು ಈ ಚಿತ್ರದ ಮೂಲಕ ಈಡೇರಿದೆ. ಹೀಗಾಗಿ, ಅವರು ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ಫ್ಯಾನ್ಸ್ ಕೂಡ ಈ ಸಿನಿಮಾಗಾಗಿ ಕಾದಿದ್ದಾರೆ. ಸದ್ಯ ಟ್ರೇಲರ್ ನೋಡಿದ ರಶ್ಮಿಕಾ ಫ್ಯಾನ್ಸ್​​ಗೆ ಬೇಸರ ಆಗಿದೆ. ಕೆಲವೇ ಸೆಕೆಂಡ್​ಗಳ ಗ್ಲಾಮರ್ ದೃಶ್ಯಕ್ಕೆ ರಶ್ಮಿಕಾ ಅವರನ್ನು ಸೀಮಿತ ಮಾಡಲಾಗಿದೆ.

ಕಳೆದ ವರ್ಷ ಏಪ್ರಿಲ್ 13ರಂದು ತೆರೆಗೆ ಬಂದ ದಳಪತಿ ವಿಜಯ್ ಸಿನಿಮಾ ‘ಬೀಸ್ಟ್​​’ಗೆ ಪೂಜಾ ಹೆಗ್ಡೆ ನಾಯಕಿ ಆಗಿದ್ದರು. ಅವರನ್ನು ಸಿನಿಮಾದಲ್ಲಿ ಕೆಲವೇ ದೃಶ್ಯಗಳಿಗೆ ಸಿಮೀತ ಮಾಡಲಾಗಿತ್ತು. ಟ್ರೇಲರ್​​ನಲ್ಲೂ ಅವರು ಕಾಣಿಸಿಕೊಂಡಿದ್ದು ಒಂದೇ ಒಂದು ದೃಶ್ಯದಲ್ಲಿ ಮಾತ್ರ. ಈ ಕಾರಣಕ್ಕೆ ರಶ್ಮಿಕಾ ಫ್ಯಾನ್ಸ್​ಗೆ ಈ ವಿಚಾರದಲ್ಲಿ ಆತಂಕ ಶುರುವಾಗಿದೆ. ಸಿನಿಮಾದಲ್ಲಿ ಕೆಲವೇ ಕೆಲವು ನಿಮಿಷ ಮಾತ್ರ ರಶ್ಮಿಕಾ ಕಾಣಿಸಿಕೊಂಡರೆ ಗತಿಯೇನು ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ
Rashmika Mandanna: ಎದೆ ಮೇಲೆ ಆಟೋಗ್ರಾಫ್​ ಹಾಕಿ ಅಂತ ಹಠ ಹಿಡಿದ ರಶ್ಮಿಕಾ ಮಂದಣ್ಣ ಅಭಿಮಾನಿ; ಮುಂದೇನಾಯ್ತು?
Rashmika Mandanna: ‘ಇಂದು ನಾನೇ ಗೋಲ್ಡನ್​ ಗರ್ಲ್​’ ಅಂತ ಪೋಸ್​ ನೀಡಿದ ರಶ್ಮಿಕಾ ಮಂದಣ್ಣ; ಆದ್ರೆ ಜನ ಹೇಳಿದ್ದೇನು?
Rashmika Mandanna: ಬಾಲಿವುಡ್​ ಸೇರಿದ ರಶ್ಮಿಕಾ ಮಂದಣ್ಣ ಹೊಸ ಅವತಾರ ಹೇಗಿದೆ ನೋಡಿ; ಫೋಟೋ ವೈರಲ್​
Rashmika Mandanna: ಸೆಲ್ಫಿ ಕೇಳಿದ ಅಭಿಮಾನಿಗಳ ಜತೆ ರಶ್ಮಿಕಾ ಮಂದಣ್ಣ ನಡೆದುಕೊಂಡಿದ್ದು ಹೇಗೆ? ವಿಡಿಯೋ ವೈರಲ್​

ರಶ್ಮಿಕಾ ಮಂದಣ್ಣ ಅವರು ಸದ್ಯ ಸಾಕಷ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ‘ವಾರಿಸು’ ಚಿತ್ರದಲ್ಲಿ ಅವರನ್ನು ಕೆಲವೇ ನಿಮಿಷಗಳ ದೃಶ್ಯಕ್ಕೆ ಸೀಮಿತ ಮಾಡಿದರೂ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ಸಿಗಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Rashmika Mandanna: ಮೊದಲು ‘ವಾರಿಸು’, ನಂತರ ‘ಮಿಷನ್​ ಮಜ್ನು’; ರಶ್ಮಿಕಾ ಮಂದಣ್ಣಗೆ ಈ ತಿಂಗಳು ಡಬಲ್​ ಧಮಾಕಾ

ಜನವರಿ ತಿಂಗಳು ರಶ್ಮಿಕಾಗೆ ವಿಶೇಷವಾಗಿದೆ. ಜನವರಿ 12ರಂದು ‘ವಾರಿಸು’ ರಿಲೀಸ್ ಆದರೆ, ಜನವರಿ 20ರಂದು ಹಿಂದಿಯಲ್ಲಿ ‘ಮಿಷನ್​ ಮಜ್ನು’ ಚಿತ್ರ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ