AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ಮಂದಣ್ಣಗೆ ನಂಬಿದವರಿಂದಲೇ ಮೋಸ, ಲಕ್ಷಾಂತರ ಹಣ ಕಳೆದುಕೊಂಡ ನಟಿ

Rashmika Mandanna: ನಟಿ ರಶ್ಮಿಕಾ ಮಂದಣ್ಣಗೆ ಅವರು ನಂಬಿದ ವ್ಯಕ್ತಿಯಿಂದಲೇ ದೊಡ್ಡ ವಂಚನೆ ನಡೆದಿದೆ.

ರಶ್ಮಿಕಾ ಮಂದಣ್ಣಗೆ ನಂಬಿದವರಿಂದಲೇ ಮೋಸ, ಲಕ್ಷಾಂತರ ಹಣ ಕಳೆದುಕೊಂಡ ನಟಿ
ರಶ್ಮಿಕಾ ಮಂದಣ್ಣ
ಮಂಜುನಾಥ ಸಿ.
|

Updated on: Jun 18, 2023 | 3:23 PM

Share

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ (Pan India) ನಟಿ. ಹೈದರಾಬಾದ್, ಚೆನ್ನೈ, ಮುಂಬೈ ಹೀಗೆ ಚಿತ್ರೀಕರಣಕ್ಕಾಗಿ (Shooting) ಭಾರತದ ಹಲವು ನಗರಗಳನ್ನು ಸುತ್ತುತ್ತಲೇ ಇರುತ್ತಾರೆ. ಇದರ ನಡುವೆ ಜಾಹಿರಾತು, ಖಾಸಗಿ ಕಾರ್ಯಕ್ರಮ, ಪ್ರೊಮೋಷನಲ್ ಇವೆಂಟ್​ಗಳು ಒಂದರಮೇಲೊಂದು ಕಾರ್ಯಕ್ರಮಗಳು. ಚೆನ್ನಾಗಿಯೇ ದುಡಿಯುತ್ತಿರುವ ರಶ್ಮಿಕಾ ಮಂದಣ್ಣ ತಮ್ಮ ಹಣಕಾಸು ವ್ಯವಹಾರ, ಸಿನಿಮಾ ಒಪ್ಪಂದಗಳು, ಜಾಹೀರಾತು ಒಪ್ಪಂದಗಳು ಇನ್ನಿತರೆಗಳನ್ನು ನೋಡಿಕೊಳ್ಳಲು ಮ್ಯಾನೇಜರ್ ಒಬ್ಬರನ್ನು ನೇಮಿಸಿಕೊಂಡಿದ್ದಾರೆ. ಆದರೆ ಆ ಮ್ಯಾನೇಜರ್ ರಶ್ಮಿಕಾಗೆ ಮೋಸ ಮಾಡಿದ್ದಾನೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಹೆಚ್ಚು ಹೆಚ್ಚು ಸಿನಿಮಾ ಅವಕಾಶಗಳು ರಶ್ಮಿಕಾ ಮಂದಣ್ಣಗೆ ಬರಲು ಆರಂಭಿಸಿದಾಗ ರಶ್ಮಿಕಾ, ಮ್ಯಾನೇಜರ್ ಒಬ್ಬನನ್ನು ನೇಮಿಸಿಕೊಂಡಿದ್ದರು. ಕೆಲ ವರ್ಷ ಚೆನ್ನಾಗಿಯೇ ಕೆಲಸ ಮಾಡಿದ್ದ ಮ್ಯಾನೇಜರ್ ಈಗ ತನ್ನ ಮಾಲಕಿಗೆ ಮೋಸ ಮಾಡಿ ದೊಡ್ಡ ಮೊತ್ತದ ಹಣವನ್ನು ಲಪಟಾಯಿಸಿದ್ದಾನೆ. ರಶ್ಮಿಕಾ ಮಂದಣ್ಣಗೆ ಸೇರಿದ ಸುಮಾರು 80 ಲಕ್ಷ ಮೊತ್ತವನ್ನು ಮ್ಯಾನೇಜರ್ ಲಪಟಾಯಿಸಿದ್ದಾನೆ ಎನ್ನಲಾಗುತ್ತಿದೆ.

ರಶ್ಮಿಕಾರ ಗಮನಕ್ಕೆ ಬಾರದೆ ಅವರಿಗೆ ಸೇರಬೇಕಾಗಿದ್ದ ದೊಡ್ಡ ಮೊತ್ತದ ಹಣವನ್ನು ಮ್ಯಾನೇಜರ್ ತನ್ನ ಖಾತೆಗೆ ಹಾಕಿಕೊಂಡಿದ್ದನಂತೆ. ಈ ವಿಷಯ ತಿಳಿಯುತ್ತಿದ್ದಂತೆ ರಶ್ಮಿಕಾ ಮಂದಣ್ಣ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಆದರೆ ಈ ಬಗ್ಗೆ ದೂರು ನೀಡಿರುವ ಕುರಿತು ವರದಿಯಾಗಿಲ್ಲ. ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಕೆಲವು ಉದ್ಯಮಗಳಲ್ಲಿಯೂ ರಶ್ಮಿಕಾ ಹಣ ತೊಡಗಿಸಿದ್ದಾರೆ. ರಶ್ಮಿಕಾರ ತಂದೆ ರಶ್ಮಿಕಾರ ಕೆಲವು ಬ್ಯುಸಿನೆಸ್​ಗಳನ್ನು ನೋಡಿಕೊಳ್ಳುತ್ತಾರೆ. ರಶ್ಮಿಕಾರ ಸಂಭಾವನೆ ಹಾಗೂ ಕೆಲವು ಬ್ರ್ಯಾಂಡ್ ಒಪ್ಪಂದಗಳನ್ನು ಮ್ಯಾನೇಜರ್ ನೋಡಿಕೊಳ್ಳುತ್ತಿದ್ದರಂತೆ.

ಇದನ್ನೂ ಓದಿ:Rashmika Mandanna: ಸಂತೋಷದ ಜೀವನಕ್ಕಾಗಿ ಅಭಿಮಾನಿಗಳಿಗೆ ಹೊಸ ಮಂತ್ರ ಹೇಳಿಕೊಟ್ಟ ನಟಿ ರಶ್ಮಿಕಾ ಮಂದಣ್ಣ

ಚಿತ್ರರಂಗದ ಬಹುತೇಕ ನಟ-ನಟಿಯರು ಮ್ಯಾನೇಜರ್​ಗಳನ್ನು ನೇಮಿಸಿಕೊಂಡಿದ್ದಾರೆ. ಮ್ಯಾನೇಜರ್​ಗಳು ನಟರಿಗೆ ಮೋಸ ಮಾಡಿರುವ ಹಲವು ಉದಾಹರಣೆಗಳು ಚಿತ್ರರಂಗದಲ್ಲಿವೆ. ಇತ್ತೀಚೆಗಷ್ಟೆ ತೆಲುಗಿನ ನಟ ಸಾಯಿ ಧರಂ ತೇಜ್ ತಮ್ಮ ಮ್ಯಾನೇಜರ್ ಅನ್ನು ಬದಲಾಯಿಸಿದ್ದರು. ಅದಕ್ಕೂ ಮುನ್ನ, ನಟಿಯೊಬ್ಬರು ತಮ್ಮ ಮ್ಯಾನೇಜರ್​ನಿಂದಾಗಿ ಹಲವು ಸಿನಿಮಾ ಅವಕಾಶಗಳನ್ನು ಕಳೆದುಕೊಂಡಿದ್ದಾಗಿ ಅವಲತ್ತುಕೊಂಡಿದ್ದರು.

ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಾಲಿವುಡ್​ನಲ್ಲಿ ರಣ್​ಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ಟೈಗರ್ ಶ್ರಾಫ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಇದರ ಜೊತೆಗೆ ತೆಲುಗಿನ ಪುಷ್ಪ 2 ನಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಎಸ್ ಎಂದಿದ್ದಾರೆ. ಶೀಘ್ರದಲ್ಲಿಯೇ ಮಲಯಾಳಂಗೂ ರಶ್ಮಿಕಾ ಕಾಲಿಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ