ಗಾಯಗೊಂಡರೂ ಶೂಟಿಂಗ್‌ಗೆ ಮರಳಲು ರಶ್ಮಿಕಾ ಮಂದಣ್ಣ ಉತ್ಸುಕ: ‘ರಣಬಾಲಿ’ ಚಿತ್ರತಂಡಕ್ಕೆ ಆಸರೆ

ತೀವ್ರ ಗಾಯದ ನಡುವೆಯೂ ನಟಿ ರಶ್ಮಿಕಾ ಮಂದಣ್ಣ ತಮ್ಮ ಬಹುನಿರೀಕ್ಷಿತ 'ರಣಬಲಿ' ಚಿತ್ರದ ಶೂಟಿಂಗ್‌ಗೆ ಮರಳಲು ಸಿದ್ಧರಾಗಿದ್ದಾರೆ. ವೈದ್ಯರ ಸಲಹೆಯಂತೆ ಚೇತರಿಸಿಕೊಳ್ಳುತ್ತಿರುವ ಅವರು, ಅಕ್ಟೋಬರ್ 30 ರಂದು ಸಿನಿಮಾ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ತಮ್ಮ ಭಾಗದ ಚಿತ್ರೀಕರಣವನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ನಿರ್ಧರಿಸಿದ್ದಾರೆ.

ಗಾಯಗೊಂಡರೂ ಶೂಟಿಂಗ್‌ಗೆ ಮರಳಲು ರಶ್ಮಿಕಾ ಮಂದಣ್ಣ ಉತ್ಸುಕ: ರಣಬಾಲಿ ಚಿತ್ರತಂಡಕ್ಕೆ ಆಸರೆ
ರಶ್ಮಿಕಾ

Updated on: Aug 11, 2026 | 7:05 AM

ಮುಖ್ಯಾಂಶಗಳು

  • ಗಾಯಗೊಂಡರೂ ರಶ್ಮಿಕಾಗೆ ಶೂಟಿಂಗ್ ಮಾಡುವ ಆಸಕ್ತಿ
  • ರಣಬಲಿ ರಿಲೀಸ್ ಡೇಟ್ ಫಿಕ್ಸ್
  • ವಿಜಯ್ ದೇವರಕೊಂಡಗೆ ಮುಖ್ಯವಾದ ಚಿತ್ರ

ಚಿತ್ರೀಕರಣದ ವೇಳೆ ಗಂಭೀರವಾಗಿ ಗಾಯಗೊಂಡಿದ್ದರೂ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ವೃತ್ತಿಪರತೆಗೆ ಸಾಟಿಯಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ತೀವ್ರ ಗಾಯದ ನಡುವೆಯೂ ತಮ್ಮ ಬಹುನಿರೀಕ್ಷಿತ ‘ರಣಬಾಲಿ’ ಸಿನಿಮಾದ ಶೂಟಿಂಗ್ ಸೆಟ್‌ಗೆ ಬೇಗನೇ ಮರಳಿ, ಬಾಕಿ ಇರುವ ದೃಶ್ಯಗಳ ಚಿತ್ರೀಕರಣವನ್ನು ಪೂರ್ಣಗೊಳಿಸಲು ಅವರು ತೀವ್ರ ಆಸಕ್ತಿ ತೋರಿದ್ದಾರೆ. ಈ ಮೂಲಕ ಅಂದುಕೊಂಡ ದಿನಾಂಕದಂದು ಸಿನಿಮಾ ರಿಲೀಸ್​​ ಮಾಡಲು ಮುಂದಾಗಿದ್ದಾರೆ.

ರಶ್ಮಿಕಾಗೆ ಗಾಯ

ಇತ್ತೀಚೆಗೆ ಅವರು ಚಿತ್ರ ‘ಮೈಸಾ’ ಶೂಟಿಂಗ್‌ನಲ್ಲಿ ನಿರತರಾಗಿದ್ದಾಗ ರಶ್ಮಿಕಾ ತೀವ್ರ ಸ್ವರೂಪದ ಅಪಘಾತಕ್ಕೆ ಈಡಾಗಿದ್ದರು. ಡ್ಯಾನ್ಸ್ ದೃಶ್ಯದ ಚಿತ್ರೀಕರಣದ ವೇಳೆ ಅವರ ಬಲ ಸೊಂಟದ ಸ್ನಾಯುಖಂಡಕ್ಕೆ ಗಾಯವಾಗಿತ್ತು. ವೈದ್ಯರು ಅವರಿಗೆ ಸುಮಾರು ಆರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಮತ್ತು ಫಿಸಿಯೋಥೆರಪಿ ಚಿಕಿತ್ಸೆ ಪಡೆಯುವಂತೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ. ಈ ಆಕಸ್ಮಿಕ ಗಾಯದಿಂದಾಗಿ ‘ಮೈಸಾ’ ಹಾಗೂ ‘ರಣಬಾಲಿ’ ಎರಡೂ ದೊಡ್ಡ ಬಜೆಟ್ ಚಿತ್ರಗಳ ಶೂಟಿಂಗ್ ವೇಳಾಪಟ್ಟಿಗೆ ತಾತ್ಕಾಲಿಕವಾಗಿ ತಡೆ ಬಿದ್ದಿತ್ತು.

ಶೂಟಿಂಗ್ ಮಾಡಲು ಪಣ

ಪ್ರಸ್ತುತ ರಶ್ಮಿಕಾ ಅವರ ಚೇತರಿಕೆ ವೇಗವಾಗಿ ಮತ್ತು ಉತ್ತಮವಾಗಿ ಸಾಗುತ್ತಿದ್ದು, ಚಿತ್ರತಂಡದಲ್ಲಿ ಹೊಸ ಭರವಸೆ ಮೂಡಿದೆ. ಇತ್ತ ‘ರಣಬಾಲಿ’ ನಿರ್ಮಾಪಕರು ಚಿತ್ರವನ್ನು ಅಕ್ಟೋಬರ್ 30ರಂದು ಅದ್ಧೂರಿಯಾಗಿ ಪ್ರದರ್ಶನಕ್ಕೆ ತರಲು ಯೋಜನೆ ರೂಪಿಸಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿರುವುದರಿಂದ, ಯಾವುದೇ ವಿಳಂಬವಿಲ್ಲದೆ ತಮಗೆ ನಿಗದಿಪಡಿಸಿದ ಭಾಗದ ಶೂಟಿಂಗ್ ಮುಗಿಸಿಕೊಡಲು ರಶ್ಮಿಕಾ ಪಣ ತೊಟ್ಟಿದ್ದಾರೆ.
ವಿಜಯ್​ಗೆ ಮುಖ್ಯ

‘ರಣಬಾಲಿ’ ಸಿನಿಮಾ ನಟ ವಿಜಯ್ ದೇವರಕೊಂಡ ಅವರಿಗೆ ಅತ್ಯಂತ ನಿರ್ಣಾಯಕವಾಗಿದೆ. ಇತ್ತೀಚಿನ ಅವರ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಜೊತೆಗೆ, ಪತಿ ವಿಜಯ್ ದೇವರಕೊಂಡ ನಾಯಕನಾಗಿ ನಟಿಸುತ್ತಿರುವ ಚಿತ್ರವಾದ್ದರಿಂದ ರಶ್ಮಿಕಾ ಅವರಿಗೂ ಇದು ಭಾವನಾತ್ಮಕವಾಗಿ ಅತ್ಯಂತ ವಿಶೇಷವಾದ ಯೋಜನೆಯಾಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಸೊಂಟಕ್ಕೆ ಪೆಟ್ಟಾಗಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ

ಗಾಯದ ನೋವಿದ್ದರೂ ರಶ್ಮಿಕಾ ತೋರಿಸುತ್ತಿರುವ ಈ ಕಮಿಟ್‌ಮೆಂಟ್ ಕಂಡು ‘ರಣಬಾಲಿ’ ಚಿತ್ರತಂಡ ಅಚ್ಚರಿಗೊಂಡಿದ್ದು, ಯೋಜಿಸಿದಂತೆ ಶೂಟಿಂಗ್ ಪೂರ್ಣಗೊಳಿಸಿ ಅಕ್ಟೋಬರ್ 30ಕ್ಕೆ ತೆರೆಗೆ ತರಲು ಭರದ ಸಿದ್ಧತೆ ನಡೆಸುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us