Rashmika Mandanna: ನನ್ನ ಅಪ್ಪ-ಅಮ್ಮನಿಗೂ ಇದನ್ನು ನಂಬಲಾಗಲಿಲ್ಲ; ಹಳೆ ನೆನಪು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

ಅಮಿತಾಭ್​ ಜತೆ ನಟಿಸುತ್ತಿರುವ ಸಿನಿಮಾಗೆ ಗುಡ್​ ಬಾಯ್​ ಎನ್ನುವ ಟೈಟಲ್​ ಇಡಲಾಗಿದೆ. ಈ ಸಿನಿಮಾ ಆಫರ್ ಬಂದಾಗ ಅವರು ತುಂಬಾನೇ ಎಗ್ಸೈಟ್​ ಆಗಿದ್ದರಂತೆ. ಆದರೆ, ಈ ವಿಚಾರವನ್ನು ಅವರ ಮನೆಯವರು ನಂಬಲೇ ಇಲ್ಲವಂತೆ!

Rashmika Mandanna: ನನ್ನ ಅಪ್ಪ-ಅಮ್ಮನಿಗೂ ಇದನ್ನು ನಂಬಲಾಗಲಿಲ್ಲ; ಹಳೆ ನೆನಪು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ

Updated on: Apr 15, 2021 | 5:49 PM

ನಟಿ ರಶ್ಮಿಕಾ ಮಂದಣ್ಣ ಖ್ಯಾತಿ ಈಗ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಕನ್ನಡ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು ಈಗ ಬಾಲಿವುಡ್​ಗೆ ಹೋಗಿ ನಿಂತಿದ್ದಾರೆ. ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಜತೆಗೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ವಿಚಾರದ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ.

ಅಮಿತಾಭ್​ ಜತೆ ನಟಿಸುತ್ತಿರುವ ಸಿನಿಮಾಗೆ ಗುಡ್​ಬಯ್​​ ಎನ್ನುವ ಟೈಟಲ್​ ಇಡಲಾಗಿದೆ. ಈ ಸಿನಿಮಾ ಆಫರ್ ಬಂದಾಗ ಅವರು ತುಂಬಾನೇ ಎಗ್ಸೈಟ್​ ಆಗಿದ್ದರಂತೆ. ಆದರೆ, ಈ ವಿಚಾರವನ್ನು ಅವರ ಮನೆಯವರು ನಂಬಲೇ ಇಲ್ಲವಂತೆ! ಈ ನೆನಪಿನ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಮಿತಾಭ್​ ಓರ್ವ ಸೂಪರ್​ಸ್ಟಾರ್​. ಅವರ ಜತೆ ನಾನು ತೆರೆ ಹಂಚಿಕೊಳ್ಳುತ್ತೇನೆ ಎನ್ನುವ ವಿಚಾರ ಮನೆಯವರಿಗೆ ಗೊತ್ತಾದಾಗ ತುಂಬಾನೇ ಖುಷಿಯಾಗಿದ್ದರು. ಅದಕ್ಕೂ ಮೊದಲು ಅವರಿಗೆ ಈ ವಿಚಾರದ ಮೇಲೆ ನಂಬಿಕೆಯೇ ಬಂದಿರಲಿಲ್ಲ. ನಾನು ಅಮಿತಾಭ್​ ಸಿನಿಮಾ ನೋಡಿ ಬೆಳೆದವಳು. ಈಗ ಅವರ ಜತೆಯೇ ನಟನೆ ಮಾಡುತ್ತಿರುವುದಕ್ಕೆ ಖುಷಿ ಇದೆ ಎಂದಿದ್ದಾರೆ ರಶ್ಮಿಕಾ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಅಮಿತಾಭ್​ ಅವರನ್ನು ಭೇಟಿ ಮಾಡಿದ್ದರು. ಈ ಫೋಟೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದರು. ಈ ಭೇಟಿ ಬಗ್ಗೆ ಹೇಳಿಕೊಂಡಿರುವ ರಶ್ಮಿಕಾ, ಶಿಕ್ಷಕರು ವಿದ್ಯಾರ್ಥಿಗಳನ್ನು ಟ್ರೀಟ್​ ಮಾಡುವಂತೆ ಅವರು ನನ್ನನ್ನು ಟ್ರೀಟ್​ ಮಾಡಿದ್ದರು. ಒಳ್ಳೊಳ್ಳೆ ಕೆಲಸ ಮಾಡು ಎಂದು ಅವರು ನನಗೆ ಕಿವಿಮಾತು ಹೇಳಿದರು ಎಂದಿದ್ದಾರೆ ರಶ್ಮಿಕಾ.

ಸದ್ಯ, ರಶ್ಮಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಬಾಲಿವುಡ್​ ಸಿನಿಮಾ ಮಿಷನ್​ ಮಜ್ನು ಕೆಲಸದಲ್ಲಿ ಅವರು ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್​ ಮಲ್ಹೋತ್ರಗೆ ಜೋಡಿ ಆಗಿದ್ದಾರೆ. ಗುಡ್​ಬಯ್​ ರಶ್ಮಿಕಾ ಅವರ ಎರಡನೇ ಹಿಂದಿ ಸಿನಿಮಾ. ವಿಕಾಸ್​  ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಟ ಅಲ್ಲು ಅರ್ಜುನ್​ ಹಾಗೂ ನಿರ್ದೇಶಕ ಸುಕುಮಾರ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಪುಷ್ಪ ಚಿತ್ರಕ್ಕೂ ರಶ್ಮಿಕಾ ನಾಯಕಿ.

ಇದನ್ನೂ ಓದಿ: Rashmika Mandanna: ರಶ್ಮಿಕಾಗೆ ಬಾಲಿವುಡ್​ನಲ್ಲಿ ಬೆಂಬಲವಾಗಿ ನಿಂತ ಸಿದ್ಧಾರ್ಥ್ ಮಲ್ಹೋತ್ರ! ಅನುಭವ ಹಂಚಿಕೊಂಡ ಕಿರಿಕ್​ ಬೆಡಗಿ

ಹರಿದ ಜೀನ್ಸ್​ ಪ್ಯಾಂಟ್​ ವಿಚಾರಕ್ಕೆ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡ ಅಮಿತಾಭ್​ ಮೊಮ್ಮಗಳು ನವ್ಯಾ!

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us