ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ

ರಶ್ಮಿಕಾ ಹೈದರಾಬಾದ್​ನ ಎಎಂಬಿ ಸಿನಿಮಾಸ್​ನಲ್ಲಿ (ಏಷಿಯನ್ ಮಹೇಶ್ ಬಾಬು) ಚಿತ್ರ ವೀಕ್ಷಿಸಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಹಾಗೂ ವಿಜಯ್ ಸಹೋದರ ಆನಂದ್ ಅವರು ರಶ್ಮಿಕಾ ಜೊತೆ ಕಾಣಿಸಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ
ರಶ್ಮಿಕಾ

Updated on: Dec 06, 2024 | 9:17 AM

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಚಾರವನ್ನು ಇಷ್ಟು ವರ್ಷ ಇವರು ಮುಚ್ಚಿಟ್ಟಿದ್ದರು. ಕದ್ದು ಮುಚ್ಚಿ ವಿದೇಶದಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ, ಈಗ ಇವರು ಬದಲಾಗಿದ್ದಾರೆ. ಓಪನ್ ಆಗಿ ಸುತ್ತಾಟ ನಡೆಸುತ್ತಾರೆ. ರಶ್ಮಿಕಾ ಮಂದಣ್ಣ ಅವರು ಹೆಚ್ಚು ಸಮಯವನ್ನು ವಿಜಯ್ ದೇವರಕೊಂಡ ಕುಟುಂಬದ ಜೊತೆ ಕಳೆಯುತ್ತಾರೆ. ಈಗ ರಶ್ಮಿಕಾ ಅವರು ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ತೋರಿಸಿದ್ದಾರೆ.

ಡಿಸೆಂಬರ್ 5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಅಭಿಮಾನಿಗಳಿಂದ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಅಲ್ಲು ಅರ್ಜುನ್​ಗೆ ಜೊತೆಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ರಶ್ಮಿಕಾ ಪಾತ್ರಕ್ಕೆ ಈ ಚಿತ್ರದಲ್ಲಿ ಪ್ರಾಮುಖ್ಯತೆ ಇದೆ. ಸಿನಿಮಾ ಉದ್ದಕ್ಕೂ ಅವರು ಕಾಣಿಸಿಕೊಳ್ಳುತ್ತಾರೆ. ಈಗ ರಶ್ಮಿಕಾ ಅವರು ಈ ಚಿತ್ರವನ್ನು ಬಾಯ್​ಫ್ರೆಂಡ್ ಕುಟುಂಬಕ್ಕೆ ತೋರಿಸಿದ್ದಾರೆ.

ರಶ್ಮಿಕಾ ಹೈದರಾಬಾದ್​ನ ಎಎಂಬಿ ಸಿನಿಮಾಸ್​ನಲ್ಲಿ (ಏಷಿಯನ್ ಮಹೇಶ್ ಬಾಬು) ಚಿತ್ರ ವೀಕ್ಷಿಸಿದ್ದಾರೆ. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಹಾಗೂ ವಿಜಯ್ ಸಹೋದರ ಆನಂದ್ ಅವರು ರಶ್ಮಿಕಾ ಜೊತೆ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಜಯ್ ದೇವರಕೊಂಡ ಇಲ್ಲ. ವಿಜಯ್ ಜೊತೆ ರಶ್ಮಿಕಾ ಸಿನಿಮಾ ನೋಡಿದ್ದರೆ ಏನೋ ಗೆಳೆತನ ಎನ್ನಬಹುದು. ಆದರೆ, ವಿಜಯ್ ಕುಟುಂಬದ ಜೊತೆ ರಶ್ಮಿಕಾ ಸಿನಿಮಾ ನೋಡುತ್ತಾರೆ ಎಂದರೆ ಇದರ ಅರ್ಥವೇನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಔಟಿಂಗ್ ಹೊರಟ ರಶ್ಮಿಕಾ-ವಿಜಯ್ ದೇವರಕೊಂಡ, ಫೋಟೊ ವೈರಲ್

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಶೀಘ್ರವೇ ವಿವಾಹ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಅವರು ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ವಿಜಯ್ ದೇವರಕೊಂಡ ಕುಟುಂಬದ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.