Pushpa: ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಫರ್ಸ್ಟ್ ಲುಕ್ ಬಹಿರಂಗ; ನೂತನ ಗೆಟಪ್​ಗೆ ಫಿದಾ ಆದ ಅಭಿಮಾನಿಗಳು

| Updated By: shivaprasad.hs

Updated on: Sep 29, 2021 | 10:36 AM

Rashmika Mandanna: ಬಹು ನಿರೀಕ್ಷಿತ‘ಪುಷ್ಪ’ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣರ ಲುಕ್ ಬಹಿರಂಗವಾಗಿದೆ. ಅವರ ನೂತನ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Pushpa: ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಫರ್ಸ್ಟ್ ಲುಕ್ ಬಹಿರಂಗ; ನೂತನ ಗೆಟಪ್​ಗೆ ಫಿದಾ ಆದ ಅಭಿಮಾನಿಗಳು
‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ
Follow us on

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾದ ‘ಪುಷ್ಪ’ ಈಗಾಗಲೇ ದೇಶದಾದ್ಯಂತ ಸಖತ್ ಹವಾ ಎಬ್ಬಿಸಿದೆ. ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೊದಲ ಭಾಗಕ್ಕೆ ‘ಪುಷ್ಪ ದಿ ರೈಸ್’ ಎಂದು ಹೆಸರಿಇಡಲಾಗಿದೆ. ಈ ಚಿತ್ರದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್​ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಖಳನಾಯಕನಾಗಿ ಫಹಾದ್ ಫಾಸಿಲ್ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರತಂಡವು ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ಲುಕ್, ಟೀಸರ್​ಗಳನ್ನು ಬಿಡುಗಡೆ ಮಾಡಿದೆ. ಅಲ್ಲದೇ ಒಂದು ಹಾಡು ಕೂಡ ಬಿಡುಗಡೆಯಾಗಿದೆ. ಆದರೆ ಇದುವರೆಗೆ ರಶ್ಮಿಕಾ ಮಂದಣ್ಣ ಪಾತ್ರದ ಕುರಿತು ಸುದ್ದಿಯಿರಲಿಲ್ಲ. ಇದೀಗ ರಶ್ಮಿಕಾರ ಪಾತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ನೂತನ ಅವತಾರದಲ್ಲಿ ರಶ್ಮಿಕಾ ಮಿಂಚುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪಾತ್ರದ ಮೊದಲ ಲುಕ್ ಹಂಚಿಕೊಂಡಿದ್ದಾರೆ. ‘ಶ್ರೀವಲ್ಲಿ’ ಎಂದು ಕ್ಯಾಪ್ಶನ್ ನೀಡಿರುವ ಅವರು, ತಮ್ಮ ಪಾತ್ರದ ಹೆಸರನ್ನೂ ತಿಳಿಸಿದ್ದಾರೆ. ರಶ್ಮಿಕಾ ತಮ್ಮ ವೃತ್ತಿ ಜೀವನದಲ್ಲಿಯೇ ಸಂಪೂರ್ಣ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದು, ಅವರ ನೂತನ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪುಷ್ಪದಲ್ಲಿ ರಶ್ಮಿಕಾ ಪಾತ್ರದ ಫರ್ಸ್ಟ್ ಲುಕ್:

‘ಪುಷ್ಪ’ ಚಿತ್ರತಂಡ ಹಂಚಿಕೊಂಡ ಪೋಸ್ಟ್:

ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ಕಾಣಿಸಿಕೊಂಡಿದ್ದು, ಮಲಯಾಳಂ ನಟ ಫಹಾದ್ ಫಾಸಿಲ್, ಕನ್ನಡದ ಡಾಲಿ ಧನಂಜಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್​ ‘ಪುಷ್ಪ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. 2018ರಲ್ಲಿ ತೆರೆಕಂಡ ‘ರಂಗಸ್ಥಲಂ’ ಚಿತ್ರದ ನಂತರ ಅವರು ಕೈಗೆತ್ತಿಕೊಂಡಿರುವ ಮುಂದಿನ ಚಿತ್ರ ಇದಾಗಿದೆ. ‘ಪುಷ್ಪ’ ಚಿತ್ರ ಕಾಡಿನ ಹಿನ್ನೆಲೆ ಹೊಂದಿದೆ. ಶೇಷಾಚಲಂನ ಅರಣ್ಯದಲ್ಲಿ ನಡೆಯುತ್ತಿದ್ದ ರಕ್ತ ಚಂದನದ ಕಳ್ಳ ಸಾಗಾಣಿಕೆ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​ ಟ್ರಕ್​ ಡ್ರೈವರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

‘ಪುಷ್ಪ’ ಸಿನಿಮಾದಲ್ಲಿ ಫಹಾದ್ ಫಾಸಿಲ್​ ಲುಕ್​ ನೋಡಿ ಫಿದಾ ಆದ ಅಭಿಮಾನಿಗಳು

Jaggesh: ಜಗ್ಗೇಶ್ ಪುತ್ರ ಗುರುರಾಜ್ ಹೇಳಲಿದ್ದಾರೆ ತಂದೆಗೆ ಆಕ್ಷನ್ ಕಟ್; ನವರಸ ನಾಯಕ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ

(Rashmika Mandanna will portray Srivalli in Allu Arjun s Pushpa first look released)

Published On - 10:28 am, Wed, 29 September 21