Rhea Singha: ‘ಮಿಸ್ ಯೂನಿವರ್ಸ್​ ಇಂಡಿಯಾ 2024’ ಆಗಿ ಹೊರ ಹೊಮ್ಮಿದ ರಿಯಾ ಸಿಂಘಾ

|

Updated on: Sep 23, 2024 | 1:08 PM

Miss Universe India 2024 Crown Winner: ‘ಮಿಸ್ ಯೂನಿವರ್ಸ್ 2024’ನ ಮೊದಲ ರನ್ನರ್ ಅಪ್​ ಆಗಿ ಪ್ರಂಜಲ್ ಪ್ರಿಯಾ ಮೊದಲ ರನ್ನರ್ ಅಪ್​ ಆಗಿದ್ದಾರೆ. ಚವಿ ವರ್ಗ್​ ಅವರು ಎರಡನೇ ಸ್ಥಾನ ಪಡೆದಿದ್ದಾರೆ. ಸುಷ್ಮಿತಾ ರಾಯ್ ಅವರು ಮೂರನೇ ರನ್ನರ್ ಅಪ್​ ಆಗಿದ್ದಾರೆ.

Rhea Singha: ‘ಮಿಸ್ ಯೂನಿವರ್ಸ್​ ಇಂಡಿಯಾ 2024’ ಆಗಿ ಹೊರ ಹೊಮ್ಮಿದ ರಿಯಾ ಸಿಂಘಾ
‘ಮಿಸ್ ಯೂನಿವರ್ಸ್​ ಇಂಡಿಯಾ 2024’ ಆಗಿ ಹೊರ ಹೊಮ್ಮಿದ ರಿಯಾ ಸಿಂಘಾ
Follow us on

ರಿಯಾ ಸಿಂಘಾ ಅವರು ‘ಮಿಸ್ ಯೂನಿವರ್ಸ್ ಇಂಡಿಯಾ 2024’ ಆಗಿ ಹೊರಹೊಮ್ಮಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ಭಾನುವಾರ (ಸೆಪ್ಟೆಂಬರ್ 22) ಈ ಕಾರ್ಯಕ್ರಮ ನಡೆದಿದೆ. ಊರ್ವಶಿ ರೌಟೇಲಾ ಅವರು ಈ ಕಿರೀಟವನ್ನು ತೊಡಿಸಿದ್ದಾರೆ. ಈ ಸಂದರ್ಭದ ವಿಡಿಯೋ ಹಾಗೂ ಫೋಟೋ ವೈರಲ್ ಆಗುತ್ತಿದೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

‘ನಾನು ಮಿಸ್ ಯೂನಿವರ್ಸ್ ಇಂಡಿಯಾ 2024 ಕಿರೀಟ ಗೆದ್ದಿದ್ದೇನೆ. ನಾನು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ನಾನು ಇಲ್ಲಿಗೆ ಬರಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಈ ಕಿರೀಟಕ್ಕೆ ನಾನು ಅರ್ಹ ಎಂದು ಭಾವಿಸುತ್ತೇನೆ. ಈ ಮೊದಲಿನ ವಿನ್ನರ್​ಗಳಿಂದ ನಾನು ಸ್ಫೂರ್ತಿ ಪಡೆದಿದ್ದೇನೆ’ ಎಂದಿದ್ದಾರೆ ಅವರು.

‘ಮಿಸ್ ಯೂನಿವರ್ಸ್ 2024’ನ ಮೊದಲ ರನ್ನರ್ ಅಪ್​ ಆಗಿ ಪ್ರಂಜಲ್ ಪ್ರಿಯಾ ಮೊದಲ ರನ್ನರ್ ಅಪ್​ ಆಗಿದ್ದಾರೆ. ಚವಿ ವರ್ಗ್​ ಅವರು ಎರಡನೇ ಸ್ಥಾನ ಪಡೆದಿದ್ದಾರೆ. ಸುಷ್ಮಿತಾ ರಾಯ್ ಅವರು ಮೂರನೇ ರನ್ನರ್ ಅಪ್​ ಆಗಿದ್ದಾರೆ.

ಊರ್ವಶಿ ರೌಟೇಲಾ ಅವರು 2015ರ ಮಿಸ್ ಯೂನಿವರ್ಸ್​ ಇಂಡಿಯಾ ಫೈನಲಿಸ್ಟ್ ಆಗಿದ್ದರು. ಅವರು ಈ ಈ ಸ್ಪರ್ಧೆಯಲ್ಲಿ ಜಡ್ಜ್​ ಪ್ಯಾನಲ್​ನಲ್ಲಿ ಇದ್ದರು. ‘ಈ ವರ್ಷ ಮಿಸ್ ಯೂನಿವರ್ಸ್ ಕಿರೀಟ್ ಭಾರತಕ್ಕೆ ಸಿಗಲಿ ಎಂದು ಆಶಿಸುತ್ತೇನೆ’ ಎಂದರು.

ಇದನ್ನೂ ಓದಿ: ಮಿಸ್ ಯೂನಿವರ್ಸ್ ಹರ್ನಾಜ್ ಸಂಧುವನ್ನು ಮರೆತುಬಿಟ್ಟಿರಾ? ಈಗೇನು ಮಾಡುತ್ತಿದ್ದಾರೆ ಭುವನ ಸುಂದರಿ

ರಿಯಾ ಸಿಂಘಾ ಅವರಿಗೆ ಈಗಿನ್ನೂ 19 ವರ್ಷ. ಅವರು ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಗುಜರಾತ್ ಮೂಲದವರು. ಅವರು ಇತರ ಸ್ಪರ್ಧಿಗಳ ಜೊತೆ ಟಫ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ರಿಯಾ ಅವರು ಸದ್ಯ  ‘ಮಿಸ್ ಯೂನಿವರ್ಸ್ 2024’ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ವರ್ಷ ಈ ಸ್ಪರ್ಧೆ ನಡೆಯಲಿದೆ.

ಮಿಸ್ ಯೂನಿವರ್ಸ್ ಕಿರೀಟ ಗೆದ್ದರೆ ಸಹಜವಾಗಿಯೇ ಅವರ ಖ್ಯಾತಿ ಹೆಚ್ಚಲಿದೆ. ಸಿನಿಮಾ ರಂಗದಿಂದ ಸಾಕಷ್ಟು ಆಫರ್​ಗಳು ಕೂಡ ಬರುತ್ತವೆ. ಈವರೆಗೆ ಭಾರತದ ಮಿಸ್ ಯೂನಿವರ್ಸ್ ಗೆದ್ದವರು ಎಂದರೆ ಸುಷ್ಮಿತಾ ಸೇನ್ (1994), ಲಾರಾ ದತ್ (2000) ಹಾಗೂ ಹರ್ನಾಜ್ ಸಂಧು ಇದನ್ನು ಗೆದ್ದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:07 pm, Mon, 23 September 24