‘ಬಿಗ್ ಬಾಸ್ ಕನ್ನಡ 11’ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ; ಏನೇಲ್ಲ ನಿರೀಕ್ಷಿಸಬಹುದು?

ಬಿಗ್ ಬಾಸ್ ಅತ್ಯಂತ ಜನಪ್ರಿಯ ಶೋಗಳಲ್ಲಿ ಒಂದು. ಈ ರಿಯಾಲಿಟಿ ಶೋ ವಿವಿಧ ಭಾಷೆಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಕನ್ನಡದಲ್ಲೂ ಇದರ ಆಗಮಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 29ರಿಂದ ಈ ರಿಯಾಲಿಟಿ ಶೋ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ ಕರೆಯಲಾಗಿದೆ.

‘ಬಿಗ್ ಬಾಸ್ ಕನ್ನಡ 11’ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಠಿ; ಏನೇಲ್ಲ ನಿರೀಕ್ಷಿಸಬಹುದು?
ಬಿಗ್ ಬಾಸ್
Follow us
ರಾಜೇಶ್ ದುಗ್ಗುಮನೆ
|

Updated on: Sep 23, 2024 | 11:13 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಸೆಪ್ಟೆಂಬರ್ 29ರಿಂದ ಈ ರಿಯಾಲಿಟಿ ಶೋ ಪ್ರಾರಂಭ ಆಗುತ್ತಿದೆ. ಈ ಬಾರಿಯ ಬಿಗ್ ಬಾಸ್​ನಿಂದ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಮಾಡುತ್ತಿದ್ದಾರೆ. 11ನೇ ಸೀಸನ್ ಎಂಬ ಕಾರಣಕ್ಕೆ ಈಗ ಹೊಸ ಲೆಕ್ಕ ಎಂದು ವಾಹಿನಿಯವರೇ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸುದ್ದಿಗೋಷ್ಠಿ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸುದ್ದಿಗೋಷ್ಠಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಇಂದು (ಸೆಪ್ಟೆಂಬರ್ 23) ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕಿಚ್ಚ ಸುದೀಪ್ ಹಾಗೂ ಕಲರ್ಸ್​ ಕನ್ನಡ ವಾಹಿನಿಯವರು ಇದರಲ್ಲಿ ಭಾಗಿ ಆಗಲಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಸಾಕಷ್ಟು ಪ್ರಶ್ನೆಗಳು ಎದುರಾಗಲಿದ್ದು, ಅದಕ್ಕೆ ವಾಹಿನಿಯವರು ಹಾಗೂ ಸುದೀಪ್ ಉತ್ತರ ನೀಡಲಿದ್ದಾರೆ.

ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್​ನೊಂದಿಗೆ ಬಿಗ್ ಬಾಸ್ ಮೂಡಿ ಬರುತ್ತಿದೆ ಎನ್ನುವ ಸೂಚನೆಯನ್ನು ವಾಹಿನಿಯವರು ನೀಡಿದ್ದಾರೆ. ಇದು ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಬಗ್ಗೆ ವಾಹಿನಿ ಕಡೆಯಿಂದ ಉತ್ತರ ಸಿಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇದೆ.

ಪ್ರತಿ ಬಾರಿ ಬಿಗ್ ಬಾಸ್ ಆರಂಭ ಆದಾಗಲೂ ಅದರಲ್ಲಿ ಸ್ಪರ್ಧಿಗಳಾಗಿ ನಾನಾ ಕ್ಷೇತ್ರದವರು ಇರುತ್ತಾರೆ. ಈ ಬಾರಿ ಆ ಕ್ಷೇತ್ರಗಳು ಯಾವವು ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ವಾಹಿನಿಯವರು ಉತ್ತರ ನೀಡಲಿದ್ದಾರೆ. ಎಲ್ಲಕಿಂತ ಮುಖ್ಯವಾಗಿ ಸಾಮಾನ್ಯ ಜನರಿಗೆ ಅವಕಾಶ ಇದೆಯೇ ಎನ್ನುವ ಪ್ರಶ್ನೆ ಇದೆ. ಅದಕ್ಕೂ ವಾಹಿನಿಯವರು ಉತ್ತರಿಸಲಿದ್ದಾರೆ.

ಇದನ್ನೂ ಓದಿ:  ಇವರೇ ಈ ಬಾರಿಯ ‘ಬಿಗ್ ಬಾಸ್’ನ ಅತ್ಯಂತ ದುಬಾರಿ ಸ್ಪರ್ಧಿ; ಕೊಟ್ಟಿದ್ದು ಎಷ್ಟು ಹಣ?

ಪ್ರತಿ ಬಾರಿ 17 ಸ್ಪರ್ಧಿಗಳು ಇರುತ್ತಾರೆ. ಈ ಬಾರಿ ವಾಹಿನಿಯವರು ಎಷ್ಟು ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ ಎಂಬ ವಿಚಾರ ರಿವೀಲ್ ಆಗಲಿದೆ. ಕಳೆದ ಬಾರಿ ಚಾರ್ಲಿ ಶ್ವಾನ ಬಿಗ್ ಬಾಸ್ ಮನೆಗೆ ಬರುತ್ತದೆ ಎಂದು ಹೇಳಲಾಗಿತ್ತು. ಈ ರೀತಿಯ ವಿಶೇಷ ಅತಿಥಿಗಳ ಘೋಷಣೆ ಆಗಲಿದೆಯೇ ಎನ್ನುವ ಕುತೂಹಲವೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.