ಶಾರುಖ್ ಕೊನೆಯ ಮಗನಿಗೆ AbRam ಎಂದು ಇಟ್ಟಿದ್ದೇಕೆ? ಇದೆ ಹಿಂದೂ ಕನೆಕ್ಷನ್

ರಜತ್ ಶರ್ಮಾ ಅವರ ‘ಆಪ್​ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಪಾಲ್ಗೊಂಡಿದ್ದರು. ಈ ವೇಳೆ ಫ್ಯಾನ್ಸ್ ಶಾರುಖ್ ಖಾನ್​ಗೆ ಪ್ರಶ್ನೆಗಳನ್ನು ಕೇಳಿದ್ದರು. ಅಬ್​ರಾಮ್ (AbRam) ಎಂದು ಆತನಿಗೆ ಹೆಸರು ಇಟ್ಟಿದ್ದು ಏಕೆ ಎಂದು ಕೇಳಲಾಗಿದೆ.

ಶಾರುಖ್ ಕೊನೆಯ ಮಗನಿಗೆ AbRam ಎಂದು ಇಟ್ಟಿದ್ದೇಕೆ? ಇದೆ ಹಿಂದೂ ಕನೆಕ್ಷನ್
ಅಬ್​ರಾಮ್-ಶಾರುಖ್
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 23, 2024 | 11:55 AM

ಶಾರುಖ್ ಖಾನ್ ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರು ಬಾಲಿವುಡ್​ನ ಆಳುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಅವರು ಹಲವು ದಶಕಗಳಿಂದ ಬಾಲಿವುಡ್​ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅವರಿಗೆ ಮೂವರು ಮಕ್ಕಳು. ಅವರ ಹಳೆಯ ಸಂದರ್ಶನ ಒಂದು ಈಗ ವೈರಲ್ ಆಗಿದೆ. ಇದರಲ್ಲಿ ಅವರು ಕೊನೆಯ ಮಗನಿಗೆ ಅಬ್​ರಾಮ್ ಎಂದು ಇಟ್ಟಿದ್ದೇಕೆ ಎಂಬುದನ್ನು ವಿವರಿಸಿದ್ದರು. ಈ ಹೆಸರಿನ ಹಿಂದೆ ಒಂದೊಳ್ಳೆಯ ಉದ್ದೇಶ ಇದೆ.

ರಜತ್ ಶರ್ಮಾ ಅವರ ‘ಆಪ್​ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಪಾಲ್ಗೊಂಡಿದ್ದರು. ಈ ವೇಳೆ ಫ್ಯಾನ್ಸ್ ಶಾರುಖ್ ಖಾನ್​ಗೆ ಪ್ರಶ್ನೆಗಳನ್ನು ಕೇಳಿದ್ದರು. ಅಬ್​ರಾಮ್ (AbRam) ಎಂದು ಆತನಿಗೆ ಹೆಸರು ಇಟ್ಟಿದ್ದು ಏಕೆ ಎಂದು ಕೇಳಲಾಗಿದೆ. ಈ ಬಗ್ಗೆ ಶಾರುಖ್ ಖಾನ್ ಅವರು ಮಾತನಾಡಿದ್ದರು.

‘ಇಸ್ಲಾಂನ ಹಜರತ್ ಇಬ್ರಾಹಿಂ ಅವರನ್ನು ಬೈಬಲ್​ನಲ್ಲಿ ಅಬ್ರಹಾಂ ಎಂದು ಕರೆಯಲಾಗುತ್ತದೆ ಮತ್ತು ಜುದಾಯಿಸಂನಲ್ಲಿ ಇದು ಅಬ್ರಾಮ್. ನನ್ನ ಪತ್ನಿ ಹಿಂದೂ ಹಾಗೂ ನಾನು ಮುಸ್ಲಿಂ. ಹೀಗಾಗಿ, ಮನೆಯಲ್ಲಿ ಅವರಿಗೆ ಸೆಕ್ಯುಲರ್ ಭಾವನೆ ಬರಬೇಕು ಅನ್ನೋದು ನನ್ನ ಆಸೆ. ಇದನ್ನು ಅನೇಕರು ಇಷ್ಟಪಡಲ್ಲ. ಇದು ವಿವಾದ ಕೂಡ ಆಯಿತು. ನಮ್ಮ ದೇಶದಲ್ಲಿ ಇರುವ ಸಾಮರಸ್ಯ ಇಲ್ಲೂ ಇದೆ ಎಂದು ನಂಬುತ್ತೇನೆ’ ಎಂದಿದ್ದಾರೆ ಅವರು.

ಇಂಗ್ಲಿಷ್​ನಲ್ಲಿ ಅವರ ಹೆಸರು AbRam ಎಂದಿದೆ. ರಾಮ್ ಎಂಬುದನ್ನು ಇಲ್ಲಿ ಹೈಲೈಟ್ ಮಾಡಲಾಗಿದೆ. ಈ ವಿಚಾರ ಅನೇಕರಿಗೆ ಇಷ್ಟ ಆಗಿದೆ. ಶಾರುಖ್ ಖಾನ್ ಅವರು ಗೌರಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಅವರಿಗೆ ಪತ್ನಿಯ ಬಗ್ಗೆ ಸಾಕಷ್ಟು ಪ್ರೀತಿ ಇದೆ. ಈ ಕಾರಣಕ್ಕೆ ಅವರು ಮನೆಯಲ್ಲಿ ಹಿಂದೂ ಹಬ್ಬಗಳ ಆಚರಣೆಯನ್ನು ಮಾಡುತ್ತಾರೆ.

ಇದನ್ನೂ ಓದಿ: ಶಾರುಖ್ ಖಾನ್​ಗೆ ಆಹಾರದಲ್ಲಿ ಇದನ್ನು ಸೇರಿಸಿಕೊಟ್ಟರೆ ಏನುಬೇಕಾದರೂ ತಿಂತಾರೆ 

ಶಾರುಖ್ ಖಾನ್ ಅವರು ಕಳೆದ ವರ್ಷ ಹ್ಯಾಟ್ರಿಕ್ ಹಿಟ್ ನೀಡಿದ್ದಾರೆ. ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾ ಬಿಡುಗಡೆ ಕಂಡಿದೆ. ಅವರು ‘ಕಿಂಗ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ 2025ರಲ್ಲಿ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಅಜ್ಜಿ ಜೊತೆ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಆದ್ಯವೀರ ಒಡೆಯರ್‌
ಅಜ್ಜಿ ಜೊತೆ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿದ ಆದ್ಯವೀರ ಒಡೆಯರ್‌
ನ್ಯೂಯಾರ್ಕ್​ನಲ್ಲಿ ಟೆಕ್ ಕಂಪನಿಗಳ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ
ನ್ಯೂಯಾರ್ಕ್​ನಲ್ಲಿ ಟೆಕ್ ಕಂಪನಿಗಳ ಸಿಇಒಗಳ ಜತೆ ಪ್ರಧಾನಿ ಮೋದಿ ಸಭೆ
ಮಂತ್ರಾಲಯದಲ್ಲಿ ಪರಿಮಳ ಪ್ರಸಾದ ತಯಾರಿ ಪ್ರಕ್ರಿಯೆ ಹೇಗಿದೆ ಗೊತ್ತಾ?
ಮಂತ್ರಾಲಯದಲ್ಲಿ ಪರಿಮಳ ಪ್ರಸಾದ ತಯಾರಿ ಪ್ರಕ್ರಿಯೆ ಹೇಗಿದೆ ಗೊತ್ತಾ?
ವಿಶ್ವವಿಖ್ಯಾತ ಮೈಸೂರು ದಸರಾ ಕುರಿತು ಜಿಲ್ಲಾಡಳಿತದಿಂದ ವಿಶೇಷ ವಿಡಿಯೋ
ವಿಶ್ವವಿಖ್ಯಾತ ಮೈಸೂರು ದಸರಾ ಕುರಿತು ಜಿಲ್ಲಾಡಳಿತದಿಂದ ವಿಶೇಷ ವಿಡಿಯೋ
Daily Devotional: ಲಲಿತಾ ಸಹಸ್ರನಾಮದ ಮಹತ್ವ ಹಾಗೂ ಫಲ ತಿಳಿಯಿರಿ
Daily Devotional: ಲಲಿತಾ ಸಹಸ್ರನಾಮದ ಮಹತ್ವ ಹಾಗೂ ಫಲ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಸೋಮವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಸೋಮವಾರದ ದಿನ ಭವಿಷ್ಯ ತಿಳಿಯಿರಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
PM Modi in US: ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು ಎಂದ ಮೋದಿ
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
‘ಅನ್ನ’ ಸಿನಿಮಾ ವೀಕ್ಷಿಸಿ ಭಾವುಕರಾದ ಸಿದ್ದರಾಮಯ್ಯ; ಕಾಡಿತು ಬಾಲ್ಯದ ನೆನಪು
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಗೇಟ್​ ಬಿದ್ದು ಮಗು ಸಾವು ಕೇಸ್:​ ಈ ಬಗ್ಗೆ ತನಿಖೆ ಮಾಡ್ತೇವೆ ಎಂದ ದಿನೇಶ್
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ