ಅಕ್ಷಯ್​ ಕುಮಾರ್​ ಸಿನಿಮಾದ ನಿರ್ದೇಶಕನ 7.30 ಕೋಟಿ ರೂಪಾಯಿ ಸಂಭಾವನೆ ಹಣಕ್ಕೆ ಮೋಸ

‘ಪೂಜಾ ಎಂಟರ್​ಟೇನ್ಮೆಂಟ್’ ಸಂಸ್ಥೆಯ ಮೇಲೆ ಇರುವ ಆರೋಪಗಳು ಒಂದೆರಡಲ್ಲ. ನಿರ್ಮಾಪಕ ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಅವರು ಸಂಬಳ ನೀಡಿಲ್ಲ ಎಂದು ನಿರ್ದೇಶಕ ಅಲಿ ಅಬ್ಬಾಸ್​ ಜಾಫರ್​ ಅವರು ಆರೋಪ ಮಾಡಿದ್ದಾರೆ. ಅಕ್ಷಯ್​ ಕುಮಾರ್​ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ನಿರ್ದೇಶನ ಮಾಡಿದ್ದಕ್ಕೆ 7.3 ಕೋಟಿ ರೂಪಾಯಿ ಸಂಭಾವನೆ ನೀಡಬೇಕಿತ್ತು.

ಅಕ್ಷಯ್​ ಕುಮಾರ್​ ಸಿನಿಮಾದ ನಿರ್ದೇಶಕನ 7.30 ಕೋಟಿ ರೂಪಾಯಿ ಸಂಭಾವನೆ ಹಣಕ್ಕೆ ಮೋಸ
ಟೈಗರ್​ ಶ್ರಾಫ್​, ಅಕ್ಷಯ್​ ಕುಮಾರ್​
Follow us
ಮದನ್​ ಕುಮಾರ್​
|

Updated on: Sep 22, 2024 | 6:11 PM

ಒಂದು ಸಿನಿಮಾ ಗೆದ್ದರೆ ಹಲವರ ಜೀವನ ಸಾಗುತ್ತದೆ. ಅದೇ ಒಂದು ಸಿನಿಮಾ ಸೋತರೆ ಅನೇಕರ ಬದುಕಿಗೆ ತೊಂದರೆ ಆಗುತ್ತದೆ. ಅದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಬಾಲಿವುಡ್​ನ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ. ಈ ವರ್ಷ ಏಪ್ರಿಲ್​ನಲ್ಲಿ ಬಿಡುಗಡೆ ಆದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ನಿರೀಕ್ಷಿತ ಪ್ರಮಾಣದ ಹಣವನ್ನು ಗಳಿಸಲಿಲ್ಲ. ಇದರಿಂದ ನಿರ್ಮಾಪಕರಿಗೆ ದೊಡ್ಡ ನಷ್ಟ ಆಯಿತು. ಅಷ್ಟೇ ಅಲ್ಲದೇ, ನಿರ್ದೇಶಕ ಅಲಿ ಅಬ್ಬಾಸ್​ ಜಾಫರ್​ ಅವರಿಗೂ ಸಂಭಾವನೆ ಹಣ ತಪ್ಪಿಹೋಯಿತು. ಹಾಗಾಗಿ ಅವರು ತಮಗೆ ನ್ಯಾಯ ಬೇಕು ಎಂದು ಈಗ ಪಟ್ಟು ಹಿಡಿದಿದ್ದಾರೆ.

ವರದಿಗಳ ಪ್ರಕಾರ, ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ನಿರ್ದೇಶಕ ಅಲಿ ಅಬ್ಬಾಸ್​ ಜಾಫರ್​ ಅವರು ನಿರ್ದೇಶಕರ ಸಂಘಕ್ಕೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಒಪ್ಪಂದದ ಪ್ರಕಾರ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಕ್ಕಾಗಿ ಅಲಿ ಅಬ್ಬಾಸ್​ ಜಾಫರ್​ ಅವರಿಗೆ 7.3 ಕೋಟಿ ರೂಪಾಯಿ ಸಂಭಾವನೆ ನೀಡಬೇಕಿತ್ತು. ಆದರೆ ತಮಗೆ ಆ ಹಣವನ್ನು ನಿರ್ಮಾಪಕರು ನೀಡಿಲ್ಲ ಎಂದು ಅಲಿ ಅಬ್ಬಾಸ್​ ಜಾಫರ್​ ಆರೋಪಿಸಿದ್ದಾರೆ.

‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​, ಟೈಗರ್​ ಶ್ರಾಫ್​, ಪೃಥ್ವಿರಾಜ್​ ಸುಕುಮಾರನ್​, ಮಾನುಷಿ ಚಿಲ್ಲರ್​, ಸೋನಾಕ್ಷಿ ಸಿನ್ಹಾ ಮುಂತಾದವರು ನಟಿಸಿದ್ದಾರೆ. ಭಾರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಮಾಡಲಾಯಿತು. ಅಂದಾಜು 350 ಕೋಟಿ ರೂಪಾಯಿ ಹಣವನ್ನು ಈ ಚಿತ್ರಕ್ಕಾಗಿ ಸುರಿಯಲಾಯಿತು. ಆದರೆ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದು ಕೇವಲ 102 ಕೋಟಿ ರೂಪಾಯಿ ಮಾತ್ರ.

ಇದನ್ನೂ ಓದಿ: 45 ಕೋಟಿ ರೂ. ಬಜೆಟ್​ನ ಸಿನಿಮಾದ ಕಲೆಕ್ಷನ್ ಬರೀ 45 ಸಾವಿರ ರೂ; ಅತಿ ದೊಡ್ಡ ಫ್ಲಾಪ್

‘ಪೂಜಾ ಎಂಟರ್​ಟೇನ್ಮೆಂಟ್​’ ಸಂಸ್ಥೆಯ ಜಾಕಿ ಭಗ್ನಾನಿ ಮತ್ತು ವಶು ಭಗ್ನಾನಿ ಅವರು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾವನ್ನು ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ನಷ್ಟ ಆಗಿದೆ. ಆ ಕಾರಣದಿಂದ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನೇಕರಿಗೆ ಸಂಬಳ ನೀಡಲು ಅವರಿಗೆ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೇ, ಮುಂಬೈನಲ್ಲಿ ಇರುವ ಆಸ್ತಿಯನ್ನು ಮಾರಿಕೊಳ್ಳುವ ಪರಿಸ್ಥಿತಿ ಅವರಿಗೆ ಬಂತು. ಈಗ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್​ಗೆ ಅವರು ಸಂಬಳ ಕೊಡದೇ ಇರುವುದು ಕೂಡ ಬೆಳಕಿಗೆ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.