ಸಲ್ಲು-ಐಶ್ವರ್ಯಾ ಒಂದು ಮಾಡಲು ಒದ್ದಾಡಿದ್ದ ಖ್ಯಾತ ನಿರ್ದೇಶಕ
Aishwarya Rai: ಐಶ್ವರ್ಯಾ ರೈ ಹಾಗೂ ಸಲ್ಮಾನ್ ಖಾನ್ ಅನ್ನು ಒಂದು ಮಾಡಲು ಬಾಲಿವುಡ್ನ ಖ್ಯಾತ ನಿರ್ದೇಶಕ ಬಹಳ ಪ್ರಯತ್ನ ಪಟ್ಟರಂತೆ ಆದರೆ ಸಾಧ್ಯವಾಗಲಿಲ್ಲ. ಯಾರದು?
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿದೆ . ಇಬ್ಬರ ನಡುವೆ ಶುರುವಾದ ಲವ್ ಸ್ಟೋರಿ ಹೆಚ್ಚು ದಿನ ಉಳಿಯಲಿಲ್ಲ. ಅವರ ಬ್ರೇಕಪ್ ಕೂಡ ಅವರ ಅಭಿಮಾನಿಗಳನ್ನು ನಿರಾಸೆಗೊಳಿಸಿತು. ಸಲ್ಮಾನ್ ಖಾನ್ ಅವರ ಲವ್ ಲೈಫ್ ಹೇಳಿದಾಗ ಜನರು ಐಶ್ವರ್ಯಾ ಹೆಸರನ್ನು ಹೇಳುತ್ತಾರೆ. ಐಶ್ವರ್ಯಾ ಅವರಿಗಿಂತ ಮೊದಲು ಸಲ್ಮಾನ್ ಜೀವನದಲ್ಲಿ ಮತ್ತೊಬ್ಬರು ಇದ್ದರು. ಸಲ್ಮಾನ್ ಖಾನ್ ಅವರನ್ನು ಮದುವೆಯಾಗಲೂ ಬಯಸಿದ್ದರು. ಆದರೆ ಆ ಮದುವೆ ನಡೆಯಲಿಲ್ಲ. ಸಲ್ಲು-ಐಶ್ವರ್ಯಾ ಒಂದಾಗಬೇಕು ಎಂಬುದು ಖ್ಯಾತ ನಿರ್ದೇಶಕನ ಆಸೆ ಆಗಿತ್ತು. ಇದಕ್ಕಾಗಿ ಸೋಮಿಯನ್ನು ದೂರ ಮಾಡಲಾಯಿತೇ ಎಂಬ ಪ್ರಶ್ನೆ ಇದೆ.
ಸಂಜಯ್ ಲೀಲಾ ಬನ್ಸಾಲಿಯವರ ‘ಹಮ್ ದಿಲ್ ದೇ ಚುಕೇ ಸನಮ್’ ಚಿತ್ರೀಕರಣ ಪ್ರಾರಂಭವಾದಾಗ, ಐಶ್ವರ್ಯಾ ಮತ್ತು ಸಲ್ಮಾನ್ ಹತ್ತಿರವಾಗಿದ್ದರು ಎಂದು ಸೋಮಿ ಅಲಿ ಹೇಳಿದ್ದಾರೆ. ‘ಒಂದು ದಿನ ಶೂಟಿಂಗ್ ವೇಳೆ ಸಲ್ಮಾನ್ಗೆ ಕರೆ ಮಾಡಿದ್ದೆ. ಆದರೆ ಫೋನ್ ಎತ್ತಲಿಲ್ಲ. ನಂತರ ಬನ್ಸಾಲಿಗೆ ಕರೆ ಮಾಡಿದೆ. ಅವರು ಫೋನ್ ಎತ್ತಿದ್ದರು. ಸಲ್ಮಾನ್ ಶೂಟಿಂಗ್ನಲ್ಲಿದ್ದಾರೆ ಎಂದಿದ್ದರು. ಸಲ್ಮಾನ್ ಶಾಟ್‌ನಲ್ಲಿದ್ದರೆ ಬನ್ಸಾಲಿ ಯಾಕೆ ನಿರ್ದೇಶನ ಮಾಡುತ್ತಿಲ್ಲ? ಅವರು ನನ್ನ ಫೋನ್ ಅನ್ನು ಹೇಗೆ ತೆಗೆದುಕೊಂಡರು’ ಎಂದು ಸೋಮಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:ಸಲ್ಮಾನ್ ಖಾನ್ ಬೆಂಗಾವಲು ವಾಹನಕ್ಕೆ ಏಕಾಏಕಿ ನುಗ್ಗಿದ ಬೈಕ್ ಸವಾರ; ಮುಂದೇನಾಯ್ತು?
‘ಬನ್ಸಾಲಿ ತಮಗೆ ಹೇಳಿದ್ದು ತನ್ನ ತಿಳುವಳಿಕೆಯನ್ನು ಮೀರಿದೆ. ಅವರು ಮಾತನಾಡುವಾಗ ಎಡವುತ್ತಿದ್ದರು. ಅವರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ನಂತರ ಐಶ್ವರ್ಯಾ ರೈ ಅವರು ಸಲ್ಮಾನ್ ಜಿಮ್‌ಗೆ ಬರಲು ಪ್ರಾರಂಭಿಸಿದರು. ನಾನು ಸಲ್ಮಾನ್ ಅವರ ಗ್ಯಾಲಕ್ಸಿಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದೆವು. ಅಲ್ಲಿ ನಮ್ಮ ಜಿಮ್ ಕೂಡ ಇತ್ತು’ ಎಂದಿದ್ದಾರೆ ಸೋಮಿ.
‘ಹಮ್ ದಿಲ್ ದೇ ಚುಕೇ ಸನಮ್’ ಸಮಯದಲ್ಲಿ ಸಲ್ಮಾನ್ ಮತ್ತು ಐಶ್ವರ್ಯಾ ಸಂಬಂಧದ ಬಗ್ಗೆ ನನಗೆ ತಿಳಿದಿತ್ತು ಎಂದು ಸೋಮಿ ಅಲಿ ಹೇಳಿದ್ದಾರೆ. ಸಲ್ಮಾನ್‌ನ ಸಂಗ ಬಿಡುವ ಸಮಯ ಬಂದಿದೆ ಎಂದು ಸೋಮಿಗೆ ಅರಿವಾಗತೊಡಗಿತ್ತು.
ಸಲ್ಮಾನ್ ಖಾನ್ ಮತ್ತು ಸೋಮಿ ಅಲಿ ಅವರ ಸಂಬಂಧವು 1991ರಲ್ಲಿ ಪ್ರಾರಂಭವಾಯಿತು. 1999ರ ‘ಹಮ್ ದಿಲ್ ದೇ ಚುಕೆ ಸನಮ್’ ಚಿತ್ರದ ಸಮಯದಲ್ಲಿ ಕೊನೆಗೊಂಡಿತು. ಸಲ್ಮಾನ್ ಮತ್ತು ಐಶ್ವರ್ಯಾ ಪರಸ್ಪರ ಪ್ರೀತಿಸುತ್ತಿದ್ದ ಸಮಯ ಇದು. ಆದರೆ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು 2002ರಲ್ಲಿ ದೂರ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:41 pm, Sat, 21 September 24