ಶಾರುಖ್ ಖಾನ್​ಗೆ ಆಹಾರದಲ್ಲಿ ಇದನ್ನು ಸೇರಿಸಿಕೊಟ್ಟರೆ ಏನುಬೇಕಾದರೂ ತಿಂತಾರೆ

ಶಾರುಖ್ ಖಾನ್ ನಟನೆಯ ‘ಜೀರೋ’ ಹಾಗೂ ಅಕ್ಷಯ್ ಕುಮಾರ್ ನಟನೆಯ ‘ಅತ್ರಂಗಿ ರೇ’ ಹಾಗೂ ‘ರಕ್ಷಾ ಬಂಧನ್’ ಚಿತ್ರವನ್ನು ಆನಂದ್ ನಿರ್ದೇಶನ ಮಾಡಿದ್ದಾರೆ. ಎರಡೂ ಸ್ಟಾರ್​ಗಳ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಶಾರುಖ್ ಖಾನ್ ಅವರು ಆಹಾರಾದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು ಎಂಬುದಾಗಿ ಹೇಳಿದ್ದಾರೆ.

ಶಾರುಖ್ ಖಾನ್​ಗೆ ಆಹಾರದಲ್ಲಿ ಇದನ್ನು ಸೇರಿಸಿಕೊಟ್ಟರೆ ಏನುಬೇಕಾದರೂ ತಿಂತಾರೆ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Sep 17, 2024 | 6:00 PM

ಶಾರುಖ್ ಖಾನ್ ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಈಗಲೂ ಫಿಟ್ ಆಗಿ ಕಾಣುತ್ತಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಕಳೆದ ವರ್ಷ ಅವರ ನಟನೆಯ ಮೂರು ಚಿತ್ರಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಿ ಗೆದ್ದಿವೆ. ಶಾರುಖ್ ಖಾನ್ ಅವರು ತಮ್ಮದೇ ಆದ ಫುಡ್ ಹ್ಯಾಬಿಟ್ ಹೊಂದಿದ್ದಾರೆ. ಅವರು ಆ ಒಂದು ವಿಷಯದ ಜೊತೆ ಆಹಾರ ನೀಡಿದರೆ ಯಾವುದೇ ಆಹಾರವನ್ನೂ ತಿನ್ನುತ್ತಾರೆ ಎಂಬುದನ್ನು ನಿರ್ದೇಶಕ ಆನಂದ್ ಎಲ್ ರಾಯ್ ಹೇಳಿದ್ದಾರೆ.

ಶಾರುಖ್ ಖಾನ್ ನಟನೆಯ ‘ಜೀರೋ’ ಹಾಗೂ ಅಕ್ಷಯ್ ಕುಮಾರ್ ನಟನೆಯ ‘ಅತ್ರಂಗಿ ರೇ’ ಹಾಗೂ ‘ರಕ್ಷಾ ಬಂಧನ್’ ಚಿತ್ರವನ್ನು ಆನಂದ್ ನಿರ್ದೇಶನ ಮಾಡಿದ್ದಾರೆ. ಎರಡೂ ಸ್ಟಾರ್​ಗಳ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಶಾರುಖ್ ಖಾನ್ ಅವರು ಆಹಾರಾದ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದರು ಎಂಬುದಾಗಿ ಹೇಳಿದ್ದಾರೆ.

ಶಾರುಖ್ ಖಾನ್ ಅವರು ಸದಾ ಸಿನಿಮಾ ಪೂರ್ಣಗೊಂಡ ಬಳಿಕ ಮುಂದಿನ ಆಲೋಚನೆಗಳ ಬಗ್ಗೆ ಮಾತನಾಡುತ್ತಿದ್ದರಂತೆ. ‘ಶಾರುಖ್ ಖಾನ್ ಅವರಿಗೆ ತಂದೂರಿ ಚಿಕನ್, ಕಾಫಿ ನೀಡಿದರೆ ಖುಷಿಯಿಂದ ತಿನ್ನುತ್ತಾರೆ. ಇದರ ಜೊತೆಗೆ ಪ್ರೀತಿಯಿಂದ ಏನನ್ನು ನೀಡಿದರೂ ಅವರು ಸ್ವೀಕರಿಸುತ್ತಾರೆ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಜಪಾನ್​ನಲ್ಲಿ ಸದ್ದು ಮಾಡೋಕೆ ರೆಡಿ ಆದ ಶಾರುಖ್ ಖಾನ್ ಸಿನಿಮಾ

‘ಯಾವುದಾದರು ವಿಚಾರ ನೇರವಾಗಿದ್ದರೆ ಅದು ಅಕ್ಷಯ್ ಕುಮಾರ್​ಗೆ ಅರ್ಥವಾಗುವುದಿಲ್ಲ. ಅವರು ಸೆನ್ಸಿಟಿವ್ ಪರ್ಸನ್. ಆದರೆ, ಅದನ್ನು ತೋರಿಸುವುದಿಲ್ಲ. ಅವರು ಪ್ರತಿ ಪ್ರಕ್ರಿಯೆ ಇಷ್ಟಪಡುತ್ತಾರೆ. ಅವರು ಪ್ರತಿ ಮೂಮೆಂಟ್ನ ಎಂಜಾಯ್ ಮಾಡಲು ಇಷ್ಟಪಡುತ್ತಾರೆ. ಅವರು ಹಾರ್ಡ್ವರ್ಕರ್. ಹೀಗಾಗಿ, ಅವರಿಗೆ ಜೀವನದಲ್ಲಿ ಎಲ್ಲವೂ ಸಿಕ್ಕಿದೆ. ಅವರು ಎಷ್ಟೇ ದೊಡ್ಡ ವ್ಯಕ್ತಿ ಆದರೂ ಜೀವನದ ಮೌಲ್ಯಗಳನ್ನು ಮರೆತಿಲ್ಲ’ ಎಂದಿದ್ದಾರೆ ಅವರು.

‘ಜೀರೋ’ ಸಿನಿಮಾ 2018ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಡಿಸಾಸ್ಟರ್ ಆಯಿತು. ಶಾರುಖ್ ಖಾನ್ ಅವರು ಇದಾದ ಬಳಿಕ ಒಂದು ಬ್ರೇಕ್ ಪಡೆದರು. ಆ ಬಳಿಕ ಅವರು ಬ್ಯಾಕ್ ಟು ಬ್ಯಾಕ್ ಗೆಲುವು ಕಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ