AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ಜನ್ಮದಿನದಂದು ಶೇ.90 ಉಳಿತಾಯ ದಾನ ಮಾಡುವ ನಿರ್ಧಾರ ಮಾಡಿದ ನಿರ್ಮಾಪಕ

ಮಹಾವೀರ್ ಅವರು ತಮ್ಮ ಸೇವಿಂಗ್ಸ್​ನಲ್ಲಿ ಶೇ. 90ರಷ್ಟನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನಕ್ಕೆ ಅವರು ಹೊಸ ಘೋಷಣೆ ಮಾಡಿದ್ದಾರೆ. ಅವರು ಅನೇಕ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಈ ಪೈಕಿ ಗೆದ್ದವು ಕಡಿಮೆ.

ಮೋದಿ ಜನ್ಮದಿನದಂದು ಶೇ.90 ಉಳಿತಾಯ ದಾನ ಮಾಡುವ ನಿರ್ಧಾರ ಮಾಡಿದ ನಿರ್ಮಾಪಕ
ಮಹಾವೀರ್
ರಾಜೇಶ್ ದುಗ್ಗುಮನೆ
|

Updated on: Sep 17, 2024 | 12:56 PM

Share

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಸೆಪ್ಟೆಂಬರ್ 17) ಜನ್ಮದಿನ. ಅವರಿಗೆ ಬಾಲಿವುಡ್​ನವರೂ ವಿಶ್ ಮಾಡುತ್ತಿದ್ದಾರೆ. ಈ ದಿನದಂದು ಬಾಲಿವುಡ್ ನಿರ್ಮಾಪಕ ಮಹಾವೀರ್ ಜೈನ್ ಅವರು ಒಂದು ದಿಟ್ಟ ನಿರ್ಧಾರ ಮಾಡಿದ್ದಾರೆ. ಸರಳ ಜೀವನ ನಡೆಸಲು ನಿರ್ಧರಿಸಿರೋ ಅವರು ಶೇ. 90 ಉಳಿತಾಯವನ್ನು ದಾನ ಮಾಡೋದಾಗಿ ಹೇಳಿದ್ದಾರೆ. ಕಷ್ಟದಲ್ಲಿ ಇರುವವರಿಗೆ ತಮ್ಮ ಹಣ ನೀಡಲು ನಿರ್ಧರಿಸಿದ್ದಾರೆ.

ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಮಹಾವೀರ್ ಅವರು ಮಾತನಾಡಿದ್ದಾರೆ. ‘ಸ್ವಾಮಿ ವಿವೇಕಾನಂದರ ಒಂದು ತತ್ವಶಾಸ್ತ್ರವನ್ನು ನಮ್ಮ ಪ್ರಧಾನಿ ಅವರು ಅಳವಡಿಸಿಕೊಂಡಿದ್ದಾರೆ. ಯಾರು ಬೇರೆಯವರಿಗಾಗಿ ಬದುಕುತ್ತಾರೋ ಅವರು ಮಾತ್ರ ಬದುಕಲು ಸಾಧ್ಯ ಎಂಬ ಮಾತನ್ನು ಶಾಲಾ ವಿದ್ಯಾರ್ಥಿ ಇದ್ದಾಗಲೇ ಮೋದಿ ಅವರು ಪಾಲಿಸುತ್ತಾ ಬಂದಿದ್ದಾರೆ’ ಎಂದಿದ್ದಾರೆ ಅವರು.

ಮೋದಿ ನಮ್ಮ ದೇಶದ ಪ್ರಧಾನಿ ಆಗಿರುವುದಕ್ಕೆ ಮಹಾವೀರ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ನಮ್ಮ ದೇಶಕ್ಕೆ ಮೋದಿ ಅವರಂಥ ನಾಯಕರು ಸಿಕ್ಕಿರುವುದಕ್ಕೆ ನನಗೆ ಪ್ರತಿ ದಿನ ಪ್ರತಿ ಕ್ಷಣ ಗೆಮ್ಮೆ ಆಗುತ್ತದೆ. ಇಡೀ ವಿಶ್ವ ಭಾರತವನ್ನು ಹೆಚ್ಚು ಗೌರವದಿಂದ ನೋಡುತ್ತಿದೆ. ಭಾರತೀಯನಾಗಿ ನಮಗೆ ಹೆಮ್ಮೆ ಇದೆ’ ಎಂದಿದ್ದಾರೆ ಮಹಾವೀರ್.

‘ನಮ್ಮ ಚಿತ್ರರಂಗದಲ್ಲಿ ಆಮಿರ್ ಖಾನ್, ರಾಜ್‌ಕುಮಾರ್ ಹಿರಾನಿ ರೀತಿಯವರು ಉತ್ತಮ ಕೆಲಸ ಮಾಡುವ ಮೂಲಕ ಉತ್ತಮ ಉದಾಹರಣೆ ಆಗಿದ್ದಾರೆ. ಅವರು ಈಗಲೂ ಅತ್ಯಂತ ಸರಳ, ಪ್ರಾಮಾಣಿಕ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸುತ್ತಿದ್ದಾರೆ. ನಾನು ಯಾವಾಗಲೂ ಅವರನ್ನು ಮಾದರಿ ಆಗಿ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಈಗ ಮಹಾವೀರ್ ಅವರು ತಮ್ಮ ಸೇವಿಂಗ್ಸ್​ನಲ್ಲಿ ಶೇ. 90ರಷ್ಟನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. 2011ರಲ್ಲಿ ರಿಲೀಸ್ ಆದ ‘ದೇಖ್ ಇಂಡಿಯನ್​ ಸರ್ಕಸ್’ ಮೂಲಕ ನಿರ್ಮಾಪಕರಾದರು. ‘ಚಲೋ ಜೀತೀ ಹೇ’, ‘ಮಲಾಲ್’, ‘ಊಂಚಾಯಿ’, ‘ರಾಮ್ ಸೇತು’, ‘ಗುಡ್ ಲಕ್ ಜೆರ್ರಿ’ ರೀತಿಯ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಈ ಪೈಕಿ ಗೆದ್ದವು ಕಡಿಮೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ