ಇವರೇ ಈ ಬಾರಿಯ ‘ಬಿಗ್ ಬಾಸ್’ನ ಅತ್ಯಂತ ದುಬಾರಿ ಸ್ಪರ್ಧಿ; ಕೊಟ್ಟಿದ್ದು ಎಷ್ಟು ಹಣ?
‘ಕುಂಕುಮ ಭಾಗ್ಯ’ ಧಾರಾವಾಹಿಯಲ್ಲಿ ಕರಣ್ ಲೂತ್ರಾ ಪಾತ್ರದಲ್ಲಿ ನಟಿಸಿದ್ದ ಧೀರಜ್ ಧೂಪರ್. ಧೀರಜ್‌ಗೆ ಬಿಗ್ ಬಾಸ್ ಕಡೆಯಿಂದ ದೊಡ್ಡ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಅವರು ‘ಬಿಗ್ ಬಾಸ್ 18'ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ದೂರದರ್ಶನದಲ್ಲಿ ಅತ್ಯಂತ ಜನಪ್ರಿಯ ಮತ್ತು ಅಷ್ಟೇ ವಿವಾದಾತ್ಮಕ ರಿಯಾಲಿಟಿ ಶೋಗಳಲ್ಲಿ ಒಂದು. ಈ ಕಾರ್ಯಕ್ರಮವು ವಿವಿಧ ಭಾಷೆಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಕನ್ನಡದಲ್ಲೂ ಇದರ ಆಗಮಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 29ರಿಂದ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಅದೇ ರೀತಿ ಹಿಂದಿ ಬಿಗ್ ಬಾಸ್ಗೆ ಬೇರೆಯದ್ದೇ ಕ್ರೇಜ್ ಇದೆ. ನಟ ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ಈಗ ಶೀಘ್ರದಲ್ಲೇ ಹಿಂದಿ ಬಿಗ್ ಬಾಸ್ ಹದಿನೆಂಟನೇ ಸೀಸನ್ ಪ್ರೇಕ್ಷಕರ ಮುಂದೆ ಬರಲಿದೆ. ಇದರಲ್ಲಿ ಯಾವ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಬೇರೆ ಬೇರೆ ಹೆಸರುಗಳು ಚರ್ಚೆಯಲ್ಲಿವೆ. ಹಿಂದಿ ಕಿರುತೆರೆಯ ಅತ್ಯಂತ ಜನಪ್ರಿಯ ನಟ ಹದಿನೆಂಟನೇ ಸೀಸನ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಈ ಸೀಸನ್‌ನ ಅತ್ಯಂತ ದುಬಾರಿ ಸ್ಪರ್ಧಿ ಎಂದೂ ಹೇಳಲಾಗಿದೆ.
ಆ ನಟ ಬೇರೆ ಯಾರೂ ಅಲ್ಲ, ‘ಕುಂಕುಮ ಭಾಗ್ಯ’ ಧಾರಾವಾಹಿಯಲ್ಲಿ ಕರಣ್ ಲೂತ್ರಾ ಪಾತ್ರದಲ್ಲಿ ನಟಿಸಿದ್ದ ಧೀರಜ್ ಧೂಪರ್. ಧೀರಜ್‌ಗೆ ಬಿಗ್ ಬಾಸ್ ಕಡೆಯಿಂದ ದೊಡ್ಡ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಅವರು ‘ಬಿಗ್ ಬಾಸ್ 18’ರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ವರದಿಗಳ ಪ್ರಕಾರ, ಧೀರಜ್‌ಗೆ ಸುಮಾರು 4-5 ಕೋಟಿ ರೂ.ಗಳ ಆಫರ್ ಹೋಗಿದೆ ಎನ್ನಲಾಗುದೆ.
ಧೀರಜ್ ಜೊತೆಗೆ ಎಲ್ಲಿಸ್ ಕೌಶಿಕ್, ಯೂಟ್ಯೂಬರ್ ಮತ್ತು ನಟ ಹರ್ಷ್ ಬೇನಿವಾಲ್, ನುಸ್ರತ್ ಜಹಾನ್, ಕಿರುತೆರೆ ನಟಿಯರಾದ ಸುರಭಿ ಜ್ಯೋತಿ, ಸೋಮಿ ಅಲಿ ಮತ್ತು ಕರಣ್ ಪಟೇಲ್ ಕೂಡ ಬಿಗ್ ಬಾಸ್ ಆಫರ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ. ಇವರಲ್ಲಿ ಯಾವ ಕಲಾವಿದರು ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ: ಮಹಾಭಾರತಕ್ಕೆ ಕೃಷ್ಣ, ಬಿಗ್ ಬಾಸ್ಗೆ ಕಿಚ್ಚ: ‘ಬಿಬಿಕೆ 11’ ಪ್ರೋಮೋ ಕಂಡು ಫ್ಯಾನ್ಸ್ ಪ್ರತಿಕ್ರಿಯೆ
ಅಕ್ಟೋಬರ್ 5ರಿಂದ ಈ ಸೀಸನ್ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈ ವಾರ ಬಿಗ್ ಬಾಸ್ 18 ರ ಮೊದಲ ಟೀಸರ್ ಕೂಡ ಪ್ರೇಕ್ಷಕರ ಮುಂದೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಾರಿ ಕೆಲವು ಹಳೆಯ ಸ್ಪರ್ಧಿಗಳು ಸಹ ಕಾಣಿಸಿಕೊಳ್ಳಲಿದ್ದಾರಂತೆ. ಅಷ್ಟೇ ಅಲ್ಲ, ಸಲ್ಮಾನ್ ಖಾನ್ ಜೊತೆಗೆ ಮಾಜಿ ಸ್ಪರ್ಧಿ ಅಬ್ದು ರೋಝಿಕ್ ಕೂಡ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಧೀರಜ್ ಧೂಪರ್ ಯಾರು?
‘ಸಸುರಲ್ ಸಿಮಾರ್ ಕಾ’ ಧಾರಾವಾಹಿಯಲ್ಲಿ ಪ್ರೇಮ್ ಭಾರದ್ವಾಜ್ ಮತ್ತು ‘ಕುಂಡ್ಲಿ ಭಾಗ್ಯ’ದಲ್ಲಿ ಕರಣ್ ಲೂತ್ರಾ ಪಾತ್ರದಲ್ಲಿ ಧೀರಜ್ ಮನೆಮಾತಾಗಿದ್ದರು. ಈ ಪಾತ್ರಗಳಿಗಾಗಿ ಅವರು ಅನೇಕ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಅವರು ಮಾಡೆಲಿಂಗ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಟಿ ವಿನ್ನಿ ಅರೋರಾ ಅವರನ್ನು ಧೀರಜ್ ವಿವಾಹವಾಗಿದ್ದಾರೆ. ‘ಮಾತ್ ಪಿತಾಹ್ ಕೆ ಫಾಸ್ ಮೇ ಸ್ವರ್ಗ’ ಧಾರಾವಾಹಿಯ ಸೆಟ್‌ನಲ್ಲಿ ಇಬ್ಬರೂ ಭೇಟಿಯಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.