​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​

| Updated By: ಮದನ್​ ಕುಮಾರ್​

Updated on: Mar 27, 2022 | 8:21 AM

Thalapathy Vijay: ನಟ ದಳಪತಿ ವಿಜಯ್​ ಮೃತಪಟ್ಟರು ಎಂದು ಕೆಲವರು ಸುಳ್ಳು ಸುದ್ದಿ ಹರಡಿದ್ದಾರೆ. ಫ್ಯಾನ್ಸ್​ ವಾರ್​ ಹೆಸರಿನಲ್ಲಿ ಇಷ್ಟು ಕೀಳು ಮಟ್ಟಕ್ಕೆ ಇಳಿದ ಅಭಿಮಾನಿಗಳಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

​ಕೀಳು ಮಟ್ಟಕ್ಕೆ ಬಂತು ಫ್ಯಾನ್ಸ್​ ವಾರ್​; ದಳಪತಿ ವಿಜಯ್​ ನಿಧನ ಎಂದು ಫೇಕ್​ ನ್ಯೂಸ್​ ಹಬ್ಬಿಸಿದ ಅಜಿತ್​ ಫ್ಯಾನ್ಸ್​
ದಳಪತಿ ವಿಜಯ್
Follow us on

ಸ್ಟಾರ್​ ವಾರ್​ ಎಂಬುದು ಎಲ್ಲ ಭಾಷೆಯಲ್ಲೂ ಇದೆ. ಸ್ಟಾರ್​ ಕಲಾವಿದರ ನಡುವೆ ಒಂದಿಲ್ಲೊಂದು ಕಾರಣಕ್ಕೆ ಟಫ್​ ಸ್ಪರ್ಧೆ ಏರ್ಪಡುವುದು, ಅದರಿಂದ ದ್ವೇಷದ ವಾತಾವರಣ ನಿರ್ಮಾಣ ಆಗುವುದು, ಅವರ ಅಭಿಮಾನಿಗಳು ಆವೇಶಕ್ಕೆ ಒಳಗಾಗುವುದು ಹೊಸದೇನೂ ಅಲ್ಲ. ಆದರೆ ಎಲ್ಲದಕ್ಕೂ ಒಂದು ಮಿತಿ ಇರಬೇಕು. ಕೆಲವೊಮ್ಮೆ ಫ್ಯಾನ್ಸ್​ ವಾರ್​ ಎಂಬುದು ತೀರಾ ಕೆಟ್ಟ ಮಟ್ಟಕ್ಕೆ ಇಳಿದುಬಿಡುತ್ತದೆ. ಸ್ಟಾರ್​ ನಟರು ಸೌಹಾರ್ದಯುತವಾಗಿ ಇದ್ದರೂ ಕೂಡ ಅವರ ಫ್ಯಾನ್ಸ್​ ಅತಿರೇಕ ಮಾಡೋದು ನಿಲ್ಲಿಸಲ್ಲ. ಈಗ ನಟ ಅಜಿತ್​ ಕುಮಾರ್ (Ajith Kumar) ಅವರ ಅಭಿಮಾನಿಗಳು ಅದೇ ಹಂತವನ್ನು ತಲುಪಿದ್ದಾರೆ ಎಂಬ ಆರೋಪ ಎದುರಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ #RIPJosephVijay ಎಂಬ ಹ್ಯಾಷ್​ ಟ್ಯಾಗ್​ ಸಖತ್​ ಟ್ರೆಂಡ್​ ಆಗಿದೆ. ಹೌದು, ಈ ರೀತಿಯಾಗಿ ದಳಪತಿ ವಿಜಯ್​ (Thalapathy Vijay) ಅವರಿಗೆ ಅಜಿತ್​ ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಅಗೌರವ ತೋರಿಸುತ್ತಿದ್ದಾರೆ. ವಿಜಯ್​ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ವಿಕೃತಿ ಮರೆಯಲಾಗುತ್ತಿದೆ. ಈ ವಿಷಯ ದೊಡ್ಡಮಟ್ಟದಲ್ಲಿ ಚರ್ಚೆ ಆಗುತ್ತಿದೆ. ವಿಜಯ್​ ನಟನೆಯ ‘ಬೀಸ್ಟ್​’ ಸಿನಿಮಾ (Beast Movie) ಬಿಡುಗಡೆಗೆ ಸಿದ್ಧವಾಗಿರುವ ಹೊಸ್ತಿಲಲ್ಲೇ ಇಂಥ ಕಿರಿಕ್​ ಆರಂಭ ಆಗಿದೆ.

ಕಾಲಿವುಡ್​ನಲ್ಲಿ ದಳಪತಿ ವಿಜಯ್​ ಮತ್ತು ಅಜಿತ್​ ಕುಮಾರ್​ ಅವರಿಗೆ ಸಖತ್​ ಡಿಮ್ಯಾಂಡ್​ ಇದೆ. ಇಬ್ಬರೂ ಕೂಡ ತಮ್ಮದೇ ಫ್ಯಾನ್​ ಬೇಸ್​ ಹೊಂದಿದ್ದಾರೆ. ಆದರೆ ಅವರ ಅಭಿಮಾನಿಗಳನ್ನು ಕಂಡರೆ ಇವರ ಅಭಿಮಾನಿಗಳಿಗೆ ಆಗುವುದಿಲ್ಲ ಎಂಬಂತಹ ವಾತಾವರಣ ನಿರ್ಮಾಣ ಆಗಿದೆ. ಅದಕ್ಕೆ ಟ್ವಿಟರ್​ನಲ್ಲಿ ಶುರುವಾಗಿರುವ #RIPJosephVijay ಹ್ಯಾಶ್​ ಟ್ಯಾಗ್​ ಟ್ರೆಂಡ್​ ಸಾಕ್ಷಿ.

ವಿಜಯ್​ ಅವರು ನಿಧನರಾದರು ಎಂದು ಬಣ್ಣಬಣ್ಣದ ಕಥೆ ಕಟ್ಟಿ, ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಚೆನ್ನೈ ಸೂಪರ್​ ಕಿಂಗ್ಸ್​​ ತಂಡದ ನಾಯಕತ್ವದಿಂದ ಧೋನಿ ಹಿಂದೆ ಸರಿದಿದ್ದಕ್ಕೆ ದಳಪತಿ ವಿಜಯ್​ ಆತ್ಮಹತ್ಯೆ ಮಾಡಿಕೊಂಡರು ಎಂದು ಫೇಕ್​ ನ್ಯೂಸ್​ ಹರಡಿಸಲಾಗಿದೆ. ಅಪಘಾತದಲ್ಲಿ ವಿಜಯ್​ ಮೃತಪಟ್ಟರು ಎಂದು ಕೂಡ ಕೆಲವರು ಸುಳ್ಳು ಸುದ್ದಿ ಹರಡಿದ್ದಾರೆ. ಫ್ಯಾನ್ಸ್​ ವಾರ್​ ಹೆಸರಿನಲ್ಲಿ ಇಷ್ಟು ಕೀಳು ಮಟ್ಟಕ್ಕೆ ಇಳಿದ ಅಭಿಮಾನಿಗಳಿಗೆ ಕೆಲವು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

1996ರಿಂದಲೂ ಅಜಿತ್​ ಮತ್ತು ವಿಜಯ್​ ಫ್ಯಾನ್ಸ್​ ನಡುವೆ ಈ ರೀತಿಯ ವೈರತ್ವ ನಡೆದುಕೊಂಡುಬಂದಿದೆ. ಈ ಸ್ಟಾರ್​ ನಟರ ಅನೇಕ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಪೈಪೋಟಿಗೆ ಇಳಿದ ಉದಾಹರಣೆಗಳಿವೆ. ಅದೇನೇ ಇರಲಿ, ಒಬ್ಬ ನಟ ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸುವ ಮಟ್ಟಕ್ಕೆ ಫ್ಯಾನ್ಸ್​ ವಾರ್​ ತಲುಪಬಾರದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಅಜಿತ್​ ಅವರ ಕೆಲವು ಅಭಿಮಾನಿಗಳು #RIPJosephVijay ಎಂಬ ಹ್ಯಾಶ್​ ಟ್ಯಾಗ್ ಬಳಕೆಯನ್ನು ವಿರೋಧಿಸಿದ್ದಾರೆ. ‘ಈ ರೀತಿ ಮಾಡುವುದು ಸರಿಯಲ್ಲ. ನಿಜವಾದ ಅಜಿತ್​ ಅಭಿಮಾನಿಗಳು ಇದಕ್ಕೆ ಬೆಂಬಲ ನೀಡುವುದಿಲ್ಲ. ಅಜಿತ್​ ಅವರಿಗೂ ಇದೆಲ್ಲ ಇಷ್ಟ ಆಗುವುದಿಲ್ಲ’ ಎಂದು ಕೆಲವರು ಟ್ವೀಟ್​ ಮಾಡಿದ್ದಾರೆ.

ವಿಜಯ್​ ನಟನೆಯ ‘ಬೀಸ್ಟ್​’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಏ.13ರಂದು ಈ ಚಿತ್ರ ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಕನ್ನಡ ಸೇರಿ ಅನೇಕ ಭಾಷೆಗಳಿಗೆ ಡಬ್​ ಆಗಿ ಈ ಸಿನಿಮಾ ರಿಲೀಸ್​ ಆಗುತ್ತಿದೆ. ಏ.14ರಂದು ಕನ್ನಡದ ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ. ಹಾಗಾಗಿ ಈ ಎರಡು ಸಿನಿಮಾಗಳ ನಡುವೆ ಬಿಗ್​ ಕ್ಲ್ಯಾಶ್​ ಏರ್ಪಡಲಿದೆ. ಚಿತ್ರಮಂದಿರಗಳ ಹಂಚಿಕೆ ಮತ್ತು ಗಲ್ಲಾಪೆಟ್ಟಿಗೆ ಕಲೆಕ್ಷನ್​ನಲ್ಲಿ ಭರ್ಜರಿ ಪೈಪೋಟಿ ಇರಲಿದೆ.

ಇದನ್ನೂ ಓದಿ:

ನಿರ್ಮಾಪಕನ ಕಾರಿಗೆ ಮೊಸರಿನ ಅಭಿಷೇಕ; ಅಜಿತ್ ಫ್ಯಾನ್ಸ್​ ಮೇಲೆ ಪೆಟ್ರೋಲ್​ ಬಾಂಬ್​​ ಎಸೆತ

ದಳಪತಿ ವಿಜಯ್​ ಮನೆಗೆ ಬಾಂಬ್​ ಇಟ್ಟಿದ್ದೇವೆಂದು ಬೆದರಿಕೆ; ಮುಂದೇನಾಯ್ತು?