Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಳಪತಿ ವಿಜಯ್​ ಮನೆಗೆ ಬಾಂಬ್​ ಇಟ್ಟಿದ್ದೇವೆಂದು ಬೆದರಿಕೆ; ಮುಂದೇನಾಯ್ತು?

ಕಳೆದ ವಾರಾಂತ್ಯದಲ್ಲಿ ವಿಜಯ್​ ಅವರು ಅಭಿಮಾನಿಗಳ ಜತೆ ಫೋಟೋ ಕ್ಲಿಕ್​ ಮಾಡಿಕೊಳ್ಳುವುದರಲ್ಲಿ ಬ್ಯುಸಿ ಇದ್ದರು. ಈ ವೇಳೆ ಪೊಲೀಸರಿಗೆ ದೂರವಾಣಿ ಕರೆ ಒಂದು ಬಂದಿತ್ತು. ಅದರಲ್ಲಿ ಬಾಂಬ್​ ದಾಳಿ ನಡೆಯಲಿದೆ ಎನ್ನುವ ಎಚ್ಚರಿಕೆ ಇತ್ತು.

ದಳಪತಿ ವಿಜಯ್​ ಮನೆಗೆ ಬಾಂಬ್​ ಇಟ್ಟಿದ್ದೇವೆಂದು ಬೆದರಿಕೆ; ಮುಂದೇನಾಯ್ತು?
ದಳಪತಿ ವಿಜಯ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 15, 2021 | 8:26 PM

ದಳಪತಿ ವಿಜಯ್​ಗೆ (Thalapathy Vijay) ದೊ ಡ್ಡ ಅಭಿಮಾನಿ ಬಳಗ ಇದೆ. ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ಅವರ ಸಿನಿಮಾ ರಿಲೀಸ್​ ಆಗುತ್ತಿದೆ ಎಂದಾದರೆ ಹಬ್ಬದ ವಾತಾವಾರಣ ನಿರ್ಮಾಣ ಆಗುತ್ತದೆ. ಅಭಿಮಾನಿಗಳು ಹಾಲಿನ ಅಭಿಷೇಕ್ ಮಾಡಿ ಸಂಭ್ರಮಿಸುತ್ತಾರೆ. ಇಂಥ ಅಭಿಮಾನಿಗಳಿಗೆ ಗಾಬರಿ ಆಗುವ ವಿಚಾರ ಒಂದು ಎದುರಾಗಿತ್ತು. ವಿಜಯ್​ ಮನೆಯಲ್ಲಿ ಬಾಂಬ್​ ಇಡಲಾಗಿದೆ ಎನ್ನುವ ಕರೆ ಬಂದಿತ್ತು. ಇದಾದ ಬೆನ್ನಲ್ಲೇ ಪೊಲೀಸರು ಶ್ವಾನ ದಳದೊಂದಿಗೆ ಸಂಪೂರ್ಣ ಮನೆಯನ್ನು ಶೋಧ ಮಾಡಿದ್ದರು. ಈ ವೇಳೆ ಇದೊಂದು ಹುಸಿ ಬಾಂಬ್​ ಕರೆ (Hoax Bomb Threat Call) ಎನ್ನುವ ವಿಚಾರ ಗೊತ್ತಾಗಿದೆ.

ಕಳೆದ ವಾರಾಂತ್ಯದಲ್ಲಿ ವಿಜಯ್​ ಅವರು ಅಭಿಮಾನಿಗಳ ಜತೆ ಫೋಟೋ ಕ್ಲಿಕ್​ ಮಾಡಿಕೊಳ್ಳುವುದರಲ್ಲಿ ಬ್ಯುಸಿ ಇದ್ದರು. ಈ ವೇಳೆ ಪೊಲೀಸರಿಗೆ ದೂರವಾಣಿ ಕರೆ ಒಂದು ಬಂದಿತ್ತು. ಅದರಲ್ಲಿ ಬಾಂಬ್​ ದಾಳಿ ನಡೆಯಲಿದೆ ಎನ್ನುವ ಎಚ್ಚರಿಕೆ ಇತ್ತು. ದೂರವಾಣಿ ಕರೆ ಬಂದ ಬೆನ್ನಲ್ಲೆ ಚೆನ್ನೈ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಬಾಂಬ್​ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವೂ ಇತ್ತು.   ಮನೆ ಹಾಗೂ ಮನೆಯ ಸಮೀಪ ಶೋಧ ಕಾರ್ಯ ನಡೆಸಲಾಯಿತು. ಆದರೆ, ಏನು ದೊರೆತಿಲ್ಲ. ಆನಂತರದಲ್ಲಿ ಇದೊಂದು ಹುಸಿ ಕರೆ ಎಂಬುದು ಸ್ಪಷ್ಟವಾಗಿದೆ.

ಹುಸಿ ಕರೆ ಮಾಡಿದವರನ್ನು ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆತ ಯಾವ ಕಾರಣಕ್ಕೆ ಈ ರೀತಿ ಮಾಡಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಕಷ್ಟು ಸೆಲೆಬ್ರಿಟಿಗಳಿಗೆ ಇದೇ ರೀತಿಯ ಹುಸಿ ಕರೆ ಬಂದಿತ್ತು.

ವಿಜಯ್​ 65ನೇ ಚಿತ್ರಕ್ಕೆ ‘ಬೀಸ್ಟ್’ ಎಂದು ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ಇತ್ತೀಚೆಗೆ ಫಸ್ಟ್​ ಲುಕ್​ ರಿಲೀಸ್​ ಆಗಿತ್ತು.  ಪೂಜಾ ಹೆಗ್ಡೆ ಈ ಸಿನಿಮಾದ ನಾಯಕಿ. ಅವರು ಇದೇ ಮೊದಲ ಬಾರಿಗೆ ವಿಜಯ್​ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಸನ್​ ಪಿಕ್ಚರ್ಸ್​ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಭರ್ಜರಿ ಜಯಭೇರಿ ಬಾರಿಸಿದ ದಳಪತಿ ವಿಜಯ್​ ಫ್ಯಾನ್ಸ್​ ಕ್ಲಬ್​

ವಿಜಯ್​ ಸೇತುಪತಿ ಮೇಲೆ ಹಲ್ಲೆ ಮಾಡಿದವರಿಗೆ ನಗದು ಬಹುಮಾನ ಘೋಷಿಸಿದ ರಾಜಕಾರಣಿ

Published On - 7:48 pm, Mon, 15 November 21

ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ