ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಭರ್ಜರಿ ಜಯಭೇರಿ ಬಾರಿಸಿದ ದಳಪತಿ ವಿಜಯ್​ ಫ್ಯಾನ್ಸ್​ ಕ್ಲಬ್​

TV9 Digital Desk

| Edited By: Rajesh Duggumane

Updated on: Oct 14, 2021 | 4:00 PM

 169 ಸ್ಥಾನಗಳ ಪೈಕಿ ವಿಜಯ್​ ಪಕ್ಷ 115 ಸ್ಥಾನಗಳನ್ನು ಗೆದ್ದಿದೆ. ಅಂದರೆ, ಶೇ. 68 ಸ್ಥಾನಗಳು ವಿಜಯ್​ ಫ್ಯಾನ್​ ಕ್ಲಬ್​ ಪಕ್ಷದ ಪಾಲಾಗಿದೆ.

ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ: ಭರ್ಜರಿ ಜಯಭೇರಿ ಬಾರಿಸಿದ ದಳಪತಿ ವಿಜಯ್​ ಫ್ಯಾನ್ಸ್​ ಕ್ಲಬ್​
ದಳಪತಿ ವಿಜಯ್

ತಮಿಳುನಾಡಿನಲ್ಲಿ ರಾಜಕೀಯಕ್ಕೂ ಚಿತ್ರರಂಗಕ್ಕೂ ಉತ್ತಮ ನಂಟಿದೆ. ಚಿತ್ರರಂಗದಲ್ಲಿ ಫೇಮಸ್​ ಆದ ನಂತರದಲ್ಲಿ ಪಾಲಿಟಿಕ್ಸ್​ಗೆ ಎಂಟ್ರಿ ನೀಡುವ ಸಂಪ್ರದಾಯ ಅಲ್ಲಿ ಮೊದಲಿನಿಂದಲೂ ನಡೆದು ಬಂದಿದೆ. ಈಗ ದಳಪತಿ ವಿಜಯ್​ ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕೂ ಮೊದಲೇ ಅವರ ಹೆಸರಿನಲ್ಲಿ ಕಟ್ಟಲ್ಪಟ್ಟ ಪಕ್ಷವು ತಮಿಳುನಾಡು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದೆ.

ವಿಜಯ್​ ತಂದೆ ಖ್ಯಾತ ನಿರ್ದೇಶಕ ಎಸ್​.ಎ. ಚಂದ್ರಶೇಖರ್​. ಅವರು ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು ‘ಆಲ್​ ಇಂಡಿಯಾ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಮ್​’ ಪಕ್ಷ ಆರಂಭಿಸಿದ್ದರು. ಆರಂಭದಲ್ಲಿ ಇದಕ್ಕೆ ವಿಜಯ್​ ಅವರೇ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ಈ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧೆ ಮಾಡಲು ಒಪ್ಪಿಗೆ ಸೂಚಿಸಿದ್ದರು ವಿಜಯ್​. ಅಂತೆಯೇ, ತಮಿಳುನಾಡಿನ 9 ಜಿಲ್ಲೆಗಳಲ್ಲಿ ನಡೆದ ಗ್ರಾಮೀಣ ಚುನಾವಣೆಯಲ್ಲಿ ವಿಜಯ್​ ಫ್ಯಾನ್​ ಕ್ಲಬ್​ ಭರ್ಜರಿ ಜಯಭೇರಿ ಬಾರಿಸಿದೆ.

169 ಸ್ಥಾನಗಳ ಪೈಕಿ ವಿಜಯ್​ ಪಕ್ಷ 115 ಸ್ಥಾನಗಳನ್ನು ಗೆದ್ದಿದೆ. ಅಂದರೆ, ಶೇ. 68 ಸ್ಥಾನಗಳು ವಿಜಯ್​ ಫ್ಯಾನ್​ ಕ್ಲಬ್​ ಪಕ್ಷದ ಪಾಲಾಗಿದೆ. ಈ ಗೆಲುವಿನ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್​ ಮಾತನಾಡಿದ್ದಾರೆ. ‘ನಾವು 115 ಸ್ಥಾನಗಳನ್ನು ಗೆದ್ದಿದ್ದೇವೆ. 115 ಮಂದಿಯಲ್ಲಿ 45 ಮಹಿಳೆಯರು. ಚುನಾವಣೆಯಲ್ಲಿ ನಿಂತವರೆಲ್ಲರೂ ರೈತರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಲ್ಯಾಬ್​ ಟೆಕ್ನೀಷಿಯನ್ಸ್​ ಮತ್ತು ಶಾಲಾ ಶಿಕ್ಷಕರು’ ಎಂದಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಹೋಲಿಕೆ ಮಾಡಿದರೆ ವಿಜಯ್​ ಫ್ಯಾನ್​ ಕ್ಲಬ್​ ಗೆದ್ದಿರುವುದು ತುಂಬಾ ಕಡಿಮೆ ಸ್ಥಾನಗಳು. ಆದರೆ, ಮೊದಲ ಚುನಾವಣೆಯಲ್ಲೇ ಇಷ್ಟು ದೊಡ್ಡ ಗೆಲುವು ಕಂಡಿರುವುದು ವಿಜಯ್​ ರಾಜಕೀಯ ಜೀವನದಲ್ಲಿ ಬಹಳ ಮಹತ್ವ ಪಡೆದುಕೊಳ್ಳುವ ಸಾಧ್ಯತೆ ಇದೆ.

ವಿಜಯ್​ ಅವರ ಬಳಿ ಬಂದ ಅನೇಕ ಅಭಿಮಾನಿಗಳು ಈ ಪಕ್ಷದ ಅಡಿಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡೋಕೆ ಒಪ್ಪಿಗೆ ನೀಡುವಂತೆ ಕೋರಿದ್ದರು. ಕೊನೆಯ ಕ್ಷಣದಲ್ಲಿ ವಿಜಯ್​ ಇದಕ್ಕೆ ಅನುಮತಿ ನೀಡಿದ್ದರು. ಈಗ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ.

ಸಿನಿಮಾ ಬಗ್ಗೆ ಹೇಳೋದಾದರೆ, ವಿಜಯ್​ 65ನೇ ಚಿತ್ರಕ್ಕೆ ‘ಬೀಸ್ಟ್’ ಎಂದು ಹೆಸರಿಡಲಾಗಿದೆ. ಹೆಸರಿಗೆ ತಕ್ಕಂತೆ ಇತ್ತೀಚೆಗೆ ಫಸ್ಟ್​ ಲುಕ್​ ರಿಲೀಸ್​ ಆಗಿತ್ತು.  ಪೂಜಾ ಹೆಗ್ಡೆ ಈ ಸಿನಿಮಾದ ನಾಯಕಿ. ಅವರು ಇದೇ ಮೊದಲ ಬಾರಿಗೆ ವಿಜಯ್​ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು ನೆಲ್ಸನ್​ ದಿಲೀಪ್​ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಸನ್​ ಪಿಕ್ಚರ್ಸ್​ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.

ಇದನ್ನೂ ಓದಿ: ದಳಪತಿ ವಿಜಯ್​ ಮತ್ತು ಮಹೇಶ್​ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್​

ತಂದೆ-ತಾಯಿ ವಿರುದ್ಧವೇ ಕೋರ್ಟ್​ ಮೆಟ್ಟಿಲೇರಿದ ನಟ ದಳಪತಿ ವಿಜಯ್; ಇದು ಸರಿ ಇದೆ ಎಂದ ಫ್ಯಾನ್ಸ್​​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada