ವಕೀಲರು ಬದಲಾದರೂ ಆರ್ಯನ್ ಖಾನ್ಗೆ ಇಲ್ಲ ಜಾಮೀನು; ಅ.20ಕ್ಕೆ ವಿಚಾರಣೆ ಮುಂದೂಡಿಕೆ
ಆರ್ಯನ್ ಖಾನ್ಗೆ ಜಾಮೀನು ಕೊಡಿಸಲು ಶಾರುಖ್ ಖಾನ್ ಹರಸಾಹಸ ಮಾಡುತ್ತಿದ್ದಾರೆ. ಪುತ್ರ ಅರೆಸ್ಟ್ ಆದ ದಿನದಿಂದಲೂ ಅವರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.
ರೇವ್ಸ್ ಪಾರ್ಟಿ ಮಾಡಿ ಸಿಕ್ಕಿ ಬಿದ್ದಿರುವ ಆರ್ಯನ್ ಖಾನ್ಗೆ ಜಾಮೀನು ಎಂಬುದು ಮರೀಚಿಕೆಯಾಗಿದೆ. ಎನ್‌ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಾರುಖ್ ಖಾನ್ ಪುತ್ರ ಸದ್ಯ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಇಂದು (ಅಕ್ಟೋಬರ್ 14) ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಿಚಾರಣೆ ನಡೆಸಿದೆ. ಜಾಮೀನು ಅರ್ಜಿ ಆದೇಶವನ್ನು ಕಾಯ್ದಿರಿಸಿರುವ ನ್ಯಾಯಾಲಯ, ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಿದೆ.
ಆರ್ಯನ್ ಜಾಮೀನು ಅರ್ಜಿಗೆ ಎನ್‌ಸಿಬಿ ಆಕ್ಷೇಪ ವ್ಯಕ್ತಪಡಿಸಿತು. ‘ಆರ್ಯನ್ ವಿರುದ್ಧ ಬಹಳಷ್ಟು ಸಾಕ್ಷ್ಯಗಳು ಇವೆ. ಕ್ರೂಸ್‌ನಲ್ಲಿ ಆರ್ಯನ್ ಖಾನ್ ಡ್ರಗ್ಸ್ ಸೇವನೆ ಮಾಡಿದ್ದಾರೆ. ಆರ್ಯನ್‌ಗೆ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್‌ಗಳ ಜತೆ ನಂಟಿದೆ. ಆರ್ಯನ್ ಖಾನ್ ನಿರಂತರವಾಗಿ ಡ್ರಗ್ಸ್ ಸೇವಿಸುತ್ತಾರೆ’ ಎಂದು ಎನ್‌ಸಿಬಿ ಪರ ಎಎಸ್‌ಜಿ ಅನಿಲ್ ಸಿಂಗ್ ವಾದ ಮಂಡನೆ ಮಾಡಿದರು.
‘ಆರ್ಯನ್ ನಿರಂತರವಾಗಿ ಡ್ರಗ್ಸ್ ಸೇವಿಸುವುದು ವಾಟ್ಸಾಪ್ ಚಾಟಿಂಗ್‌ನಿಂದ ಬಯಲಾಗಿದೆ. NCB ವಿಚಾರಣೆಯ ವೇಳೆ ಅರ್ಬಾಜ್‌ನಿಂದ ತಪ್ಪೊಪ್ಪಿಗೆ ಆಗಿದೆ. ಆರ್ಯನ್ ಜತೆ ಸೇರಿ ಡ್ರಗ್ಸ್ ಸೇವಿಸಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಆರ್ಯನ್‌ಗೆ ಜಾಮೀನು ನೀಡಿದ್ರೆ ಸಾಕ್ಷ್ಯ ತಿರುಚುವ ಸಾಧ್ಯತೆ ಇರುತ್ತದೆ’ ಎಂದು ಅನಿಲ್ ಸಿಂಗ್ ವಾದ ಮಂಡನೆ ಮಾಡಿದರು.
‘ಯುವಕನೆಂಬ ಮಾತ್ರಕ್ಕೆ ಆರ್ಯನ್‌ಗೆ ಜಾಮೀನು ಬೇಡ. ಯುವಕರು ದೇಶದ ಭವಿಷ್ಯವಿದ್ದಂತೆ. ಇಡೀ ದೇಶದ ಭವಿಷ್ಯ ಯುವಕರನ್ನು ಅವಲಂಬಿಸಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ, ಈಗ ಜಾಮೀನು ಬೇಡ. ತನಿಖೆ ಮುಗಿದ ಬಳಿಕ ಬೇಕಾದ್ರೆ ಜಾಮೀನು ನೀಡಿ’ ಎಂದು ಅನಿಲ್ ಸಿಂಗ್ ವಾದ ಮಂಡನೆ ಮಾಡಿದರು.
ಆರ್ಯನ್ ಖಾನ್ ಪರ ಈ ಮೊದಲು ಸತೀಶ್ ಮಾನೆಶಿಂಧೆ ಅವರು ವಾದ ಮಾಡುತ್ತಿದ್ದರು. ಆದರೆ, ಈಗ ಆರ್ಯನ್ ಪರ ವಕೀಲರನ್ನು ಬದಲಾಗಿದ್ದಅರೆ. ಅಮಿತ್ ದೇಸಾಯಿ ಅವರು ಆರ್ಯನ್ ಪರ ವಾದ ಮಂಡಿಸುತ್ತಿದ್ದಾರೆ. ಆದಾಗ್ಯೂ ಅವರಿಗೆ ಜಾಮೀನು ಸಿಗುತ್ತಿಲ್ಲ.
ಇದನ್ನೂ ಓದಿ: ಆರ್ಯನ್ ಖಾನ್ ಜತೆ ಸೆಲ್ಫಿ ಕ್ಲಿಕ್ಕಿಸಿದ ‘ಡಿಟೆಕ್ಟಿವ್’ ಕಿರಣ್ ಗೋಸಾವಿಗೆ ಪುಣೆ ಪೊಲೀಸರಿಂದ ಲುಕೌಟ್ ನೋಟಿಸ್
Published On - 4:58 pm, Thu, 14 October 21