ಮತ್ತೆ ದೈವಾರಾಧಕರ ಕೋಪಕ್ಕೆ ಗುರಿಯಾದ ರಿಷಬ್; ನಿಯಮಗಳ ವಿರುದ್ಧ ಹೋದ ನಟ?

ನಟ ರಿಷಬ್ ಶೆಟ್ಟಿ ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲ ಮಾಡಿಸಿದ್ದರು. ಈ ವೇಳೆ ದೈವ ನರ್ತಕರ ವರ್ತನೆ ಕುರಿತು ಭಾರೀ ವಿವಾದ ಹುಟ್ಟಿಕೊಂಡಿದೆ. ರಿಷಬ್ ಕಾಲೆ ಮೇಲೆ ಮಲಗಿದ್ದು ದೈವ ನರ್ತಕರೇ ಹೊರತು ದೈವವಲ್ಲ ಎಂಬ ಮಾತು ಕೇಳಿಬಂದಿದೆ. ದೈವಾರಾಧನೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ದೈವಾರಾಧಕ ತಮ್ಮಣ್ಣ ಶೆಟ್ಟಿ ಸೇರಿದಂತೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೆ ದೈವಾರಾಧಕರ ಕೋಪಕ್ಕೆ ಗುರಿಯಾದ ರಿಷಬ್; ನಿಯಮಗಳ ವಿರುದ್ಧ ಹೋದ ನಟ?
ರಿಷಬ್
Updated By: ರಾಜೇಶ್ ದುಗ್ಗುಮನೆ

Updated on: Dec 09, 2025 | 10:06 AM

ನಟ ರಿಷಬ್ ಶೆಟ್ಟಿ (Rishab Shetty) ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲ ಮಾಡಿಸಿದ್ದರು. ‘ಕಾಂತಾರ: ಚಾಪ್ಟರ್ 1’ ಹಿಟ್ ಆದ ಬಳಿಕ ಅವರು ತಂಡದ ಜೊತೆ ಮಂಗಳೂರಿಗೆ ತೆರಳಿದ್ದರು. ಈ ವೇಳೆ ರಿಷಬ್ ಕಾಲ ಮೇಲೆ ದೈವಾರಾಧಕ ಮಲಗಿದ್ದು ಚರ್ಚೆಗೆ ಕಾರಣ ಆಗಿದೆ. ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ,ದೈವವಲ್ಲ ಬದಲಾಗಿ ನರ್ತಕ ಎಂಬಾ ಮಾತುಗಳು ಕೇಳಿ ಬಂದಿವೆ. ಈ ಹರಕೆ ಕೋಲ ದೈವಾರಾಧನೆಯ ನಿಯಮಗಳ ವಿರುದ್ಧವಾಗಿ ನಡೆಯಿತಾ ಎಂಬ ಪ್ರಶ್ನೆಯೂ ಮೂಡಿದೆ.

ಗುರುವಾರ (ಡಿಸೆಂಬರ್ 4) ಮಂಗಳೂರಿನ ಬಾರೆಬೈಲ್ ಅಲ್ಲಿ ವಾರಾಹಿ ಪಂಜುರ್ಲಿ, ಅರಸು ಜಾರಂದಾಯ ಹಾಗು ಬಂಟ ದೈವಸ್ಥಾನದಲ್ಲಿ ಹರಕೆ ಕೋಲ ನಡೆಯಿತು. ಈ ವೇಳೆ ದೈವ ನರ್ತಕ ರಿಷಬ್ ಕಾಲ ಮೇಲೆ ಮಲಗಿದ್ದರು. ಕೋಲದ ವೇಳೆ ದೈವ ನರ್ತಕ ರಿಷಬ್ ಜೊತೆಗೆ ವರ್ತಿಸಿದ ರೀತಿ ವಿರುದ್ಧ ಟೀಕೆ ವ್ಯಕ್ತವಾಗಿದೆ.
‘ತುಳುನಾಡಿನ ದೈವಾರಾಧನೆಯಲ್ಲಿ ದೈವಗಳು ಈ ರೀತಿ ವರ್ತಿಸುವುದಿಲ್ಲ.ರಿಷಬ್ ಕಾಲ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ,ದೈವವಲ್ಲ ಬದಲಾಗಿ ನರ್ತಕ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ದೈವರಾಧಕ ತಮ್ಮಣ್ಣ ಶೆಟ್ಟಿ ಈ ಬಗ್ಗೆ ಟಿವಿ‌9 ಕನ್ನಡದ ಜೊತೆ ಮಾತನಾಡಿದ್ದಾರೆ. ‘ಕಾಂತಾರದಿಂದ ದೈವಗಳು ಬೀದಿಗೆ ಬಂದಿವೆ. ಈಗ ಹರಕೆಯ ನೇಮೋತ್ಸವದಿಂದ ದೈವರಾಧನೆ ಸಂಪೂರ್ಣ ಮುಗಿಯಿತು ಎಂಬಂತಾಗಿದೆ. ಹರಕೆ ನೀಡುವುದುಕ್ಕೂ ಅದರದ್ದೆ ಆದ ಕಟ್ಟುಪಾಡುಗಳಿವೆ. ಇತ್ತೀಚೆಗೆ ನಡೆದಿದ್ದು ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ. ರಿಷಬ್ ಶೆಟ್ಟಿಗೆ ಡೇಟ್ ಇದೆ ಎಂದು ಕದ್ರಿ ಮಂಜುನಾಥನನ್ನು ಬದಿಗೆ ಬಿಟ್ಟು ಇವರು ನೇಮ ಮಾಡಿದ್ದಾರೆ’ ಎಂದು ತಮ್ಮಣ್ಣ ಹೇಳಿದ್ದಾರೆ.

‘ನರ್ತಕ ಹಾಕಿದ ಬಟ್ಟೆಗಳೆಲ್ಲಾ ದೈವರಾಧನೆಗೆ ವಿರುದ್ಧವಾಗಿದೆ. ಅವರು ಡ್ಯಾನ್ಸರ್​​ಗಳು ಹಾಕುವ ಬಟ್ಟೆ ಹಾಕಬಾರದು. ದೈವ ಕಡ್ತಳೆಯನ್ನು ತಲೆಗೆ ಹೊಡೆದುಕೊಳ್ಳುವುದಿಲ್ಲ. ಪಲ್ಟಿ ಹೊಡೆಯುವ ದೈವಗಳು ಬೇರೆ ಇದೆ. ಇತ್ತೀಚೆಗೆ ನಡೆದಿರುವ ನೇಮ ದೈವರಾಧನೆಯ ನಿಯಮಕ್ಕೆ ವಿರುದ್ಧವಾಗಿದೆ’ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

‘ಇದಕ್ಕೆ ಮುಂದಿನ ದಿನ‌ ಭಾರಿ‌ ದೊಡ್ಡ ಬೆಲೆ ತೆರಬೇಕಾಗುತ್ತದೆ. ಜನರನ್ನು ಮೆಚ್ಚಿಸಲು ಮೋಸ ಮಾಡಬೇಡಿ. ರಿಷಬ್ ಶೆಟ್ಟಿ ಸಿನಿಮಾ ಮಾಡುವ ಒಬ್ಬ ವ್ಯಾಪಾರಿ. ರಿಷಬ್ ಶೆಟ್ಟಿಯ ಕಾಲ ಬುಡದಲ್ಲಿ ದೈವ ಹೇಗೆ ಬೀಳುತ್ತೆ? ಈ ದೈವ ನರ್ತಕನೇ ದೈವರಾಧನೆಯ‌ ಅಸ್ಮಿತೆಯನ್ನು ರಿಷಬ್ ಶೆಟ್ಟಿಗೆ ಮಾರಾಟ ಮಾಡಿದ್ದಾನೆ. ದೈವಕ್ಕೂ ರಿಷಬ್ ಶೆಟ್ಟಿಗೂ ಏನು ಸಂಬಂಧ ಇದೆ? ಶರ್ಟ್ ಹಾಕಿದವರನ್ನು‌ ಯಾವ ದೈವವೂ ಮುಟ್ಟಲ್ಲ. ಹೊರಳಾಡಿ, ಬಕೇಟ್ ಹಿಡಿದು ಯಾರ ಜೊತೆಯೂ ಮಾತನಾಡುವುದಿಲ್ಲ’ ಎಂಬುದು ತಮ್ಮಣ್ಣ ಅವರ ಅಭಿಪ್ರಾಯ.

ಇದನ್ನೂ ಓದಿ: ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ&; ರಿಷಬ್​ಗೆ ಅಭಯ ನೀಡಿದ ದೈವ

‘20 ವರ್ಷದಿಂದ ದೈವರಾಧನೆಯನ್ನು ವ್ಯಾಪಾರ ಮಾಡಿ ಆಗಿದೆ. ಜನ‌ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಇದೆಲ್ಲಾ ದೈವ ಮೆಚ್ಚುವ ಕೆಲಸವಲ್ಲ. ನಾಟಕಗಳೆಲ್ಲಾ ಇನ್ನು ಕೊನೆಯಾಗುತ್ತೆ. ದೊಡ್ಡ ತಪ್ಪು ನಡೆದಿದೆ’ ಎಂದು ಅವರು ಬೇಸರ ಹೊರಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.