AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ ಪ್ರಕರಣದಲ್ಲಿ ನಟಿ ಹೇಮಾಗೆ ಬಿಗ್ ರಿಲೀಫ್; ಕೇಸ್ ರದ್ದು ಮಾಡಿದ ಹೈಕೋರ್ಟ್

ಕಳೆದ ವರ್ಷದ ಬೆಂಗಳೂರು ರೇವ್ ಪಾರ್ಟಿ ಡ್ರಗ್ಸ್ ಪ್ರಕರಣದಲ್ಲಿ ನಟಿ ಹೇಮಾಗೆ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ವೈದ್ಯಕೀಯ ಪರೀಕ್ಷೆಯ ಮಾನದಂಡಗಳ ಕೊರತೆ ಹಿನ್ನೆಲೆ ನಟಿ ವಿರುದ್ಧದ ಡ್ರಗ್ಸ್ ಸೇವನೆ ಆರೋಪವನ್ನು ಹೈಕೋರ್ಟ್ ರದ್ದುಪಡಿಸಿದೆ. ನ್ಯಾಯಾಲಯದಲ್ಲಿ ಅಂತಹ ಪರೀಕ್ಷೆಗಳು ವಿಶ್ವಾಸಾರ್ಹವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಪ್ರಕರಣ ಮುಂದುವರಿಸಲು ಕಾನೂನು ಆಧಾರವಿಲ್ಲ ಎಂದಿದೆ.

ಡ್ರಗ್ ಪ್ರಕರಣದಲ್ಲಿ ನಟಿ ಹೇಮಾಗೆ ಬಿಗ್ ರಿಲೀಫ್; ಕೇಸ್ ರದ್ದು ಮಾಡಿದ ಹೈಕೋರ್ಟ್
ಹೇಮಾ
Shivaprasad B
| Edited By: |

Updated on: Dec 09, 2025 | 10:48 AM

Share

ಕಳೆದ ವರ್ಷ ಬೆಂಗಳೂರಿನ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ನಟಿ ಹೇಮಾ (Hema) ಹೆಸರು ಕೂಡ ಕೇಳಿ ಬಂದಿತ್ತು. ಈಗ ನಟಿಗೆ ಪ್ರಕರಣದಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ನಟಿ ವಿರುದ್ಧದ ಡ್ರಗ್ಸ್ ಸೇವನೆ ಪ್ರಕರಣವನ್ನು ರದ್ದು ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಕೇಸ್ ರದ್ದು ಕೋರಿ ನಟಿ ಹೇಮಾ ಹೈಕೋರ್ಟ್ ಮೊರೆ ಹೋಗಿದ್ದರು. ಹೇಮಾ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

ರಿಲೀಫ್ ಸಿಗಲು ಕಾರಣ ಏನು ?

ಖಾಸಗಿ ಆಸ್ಪತ್ರೆಯಲ್ಲಿ ನಟಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಡ್ರಗ್ಸ್ ಸೇವಿಸಿದ ವ್ಯಕ್ತಿಯ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಡ್ರಗ್ಸ್ ಸೇವನೆ ದೃಢ ಪಡಿಸುವ ಪರೀಕ್ಷೆಗಳ ಮಾನದಂಡಗಳು ಇನ್ನೂ ಲಭ್ಯವಿಲ್ಲ‌. ಮಾನದಂಡವಿಲ್ಲದ ಪರೀಕ್ಷೆಗಳು ನ್ಯಾಯಾಲಯದಲ್ಲಿ ವಿಶ್ವಾಸಾರ್ಹವಲ್ಲ. ಹೀಗಾಗಿ ಆರೋಪಿ ವಿರುದ್ಧ ಎನ್ ಡಿಪಿಎಸ್ ಕೇಸ್ ಮುಂದುವರಿಸಲು ಕಾನೂನು ಬದ್ಧ ಆಧಾರವಿಲ್ಲವೆಂದು ಕೋರ್ಟ್ ನಿರ್ಧಾರ ಮಾಡಿದೆ. ಹೀಗಾಗಿ, ನಟಿ ಹೇಮಾ ವಿರುದ್ಧದ ಪ್ರಕರಣ ರದ್ದುಗೊಳಿಸಿದೆ.

ನಟಿ ಹೇಮಾ ಕಣ್ಣೀರು

ಹೈಕೋರ್ಟ್ ನಲ್ಲಿ ಕೇಸ್ ರದ್ದುಗೊಂಡ ಹಿನ್ನೆಲೆ ವಿಡಿಯೋ ಮೂಲಕ ನಟಿ ಹೇಮಾಕಣ್ಣೀರು ಹಾಕಿದ್ದಾರೆ. ‘ಘಟನೆಯಿಂದ ಕುಗ್ಗಿ ತಾಯಿ ಸಾವನ್ನಪ್ಪಿದರು. ಆ ನೋವನ್ನ ಮನಸ್ಸಿನಲ್ಲಿ ಇಟ್ಟುಕೊಂಡು, ಒಳ್ಳೆ ವಿಚಾರವನ್ನ ಹಂಚಿಕೊಳ್ಳುತ್ತಿದ್ದೇನೆ. ಬೆಂಗಳೂರು ಹೈಕೋರ್ಟ್ ಕೇಸ್ ವಜಾ ಮಾಡಿದೆ.

ಇದನ್ನೂ ಓದಿ:  ರೇವ್ ಪಾರ್ಟಿ ಪ್ರಕರಣ: ನಟಿ ಹೇಮಾ, ಆಶು ರೈ ರಿಪೋರ್ಟ್ ಪಾಸಿಟಿವ್

ಪ್ರಕರಣದ ಹಿನ್ನೆಲೆ:

2024ರಲ್ಲಿ ಹೆಬ್ಬಗೋಡಿಯ ಜಿಆರ್ ಫಾರ್ಮ್ಸ್ ಅಲ್ಲಿ ವಾಸು ಎಂಬಾತ ಬರ್ತ್​ಡೇ ಪಾರ್ಟಿ ಆಯೋಜಿಸಿದ್ದ. ರೇವ್ ಪಾರ್ಟಿಯಲ್ಲಿ ಹೇಮಾ ಕೂಡ ಭಾಗಿ ಆಗಿದ್ದರು.ಈ ವೇಳೆ ಪಾರ್ಟಿ ಮೇಲೆ ದಾಳಿ‌ ನಡೆದಿತ್ತು. ಮಾದಕವಸ್ತು ಸೇವನೆ ಮತ್ತು ಶಾಂತಿಭಂಗ ಉಂಟು ಮಾಡಿದ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ನಟಿ ಹೇಮಾ ಸೇರಿ 88 ಮಂದಿ ಬಂಧನವಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಮಳೆ ಅಭಾವ: ತುಮಕೂರಲ್ಲಿ ಸಂಪೂರ್ಣ ಬತ್ತಿದ 300ಕ್ಕೂ ಹೆಚ್ಚು ಕೆರೆಗಳು
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ: ಪ್ರಯಾಣಿಕರ ಪರದಾಟ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಆರ್​ಎಸ್​ಎಸ್ ನೋಂದಣಿ ಬಗ್ಗೆ ರಾಷ್ಟ್ರಮಟ್ಟದಲ್ಲಿ ಅಭಿಯಾನ
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ; ಭಾರತೀಯ ವನಿತೆಯರ ಕಮಾಲ್
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
ಚಾಮರಾಜೇಶ್ವರಸ್ವಾಮಿ ಆಷಾಢ ಮಾಸದ ರಥೋತ್ಸವಕ್ಕೆ ಕ್ಷಣಗಣನೆ ಆರಂಭ
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
‘ಟಾಕ್ಸಿಕ್ ನೋಡಿದವರು ವಾಟ್​ ದಿ ಹೆಲ್​ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಸಿಟಿ ರವಿ ಚಿಕ್ಕಮಗಳೂರಿಗೆ ಬರದಂತೆ ತಡೀತೇವೆ, ಮುಸ್ಲಿಂ ಮುಖಂಡರ ಎಚ್ಚರಿಕೆ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಭೀಕರ ಬರಕ್ಕೆ ತುತ್ತಾದ ರಾಯಚೂರು, ಲಿಂಗಸೂರಿನಲ್ಲಿ ಗುಳೆ ಹೊರಟ 40 ಸಾವಿರ ಜನ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ
ಬೆಂಗಳೂರು: ಕ್ಯಾಬ್ಗೆ ಕಾಯುತ್ತಿದ್ದ ಯುವತಿ ಜೊತೆ ವ್ಯಕ್ತಿ ಅಸಭ್ಯ ವರ್ತನೆ