ಭಾರತದ ಹೆಮ್ಮೆಯ ವಿಜ್ಞಾನಿ, ಇಸ್ರೋ ಸಂಸ್ಥೆಯ ನಂಬಿ ನಾರಾಯಣನ್ ಅವರ ( ISRO scientist Nambi Narayanan) ಜೀವನಾಧಾರಿತ ರಾಕೆಟ್ರಿ ಸಿನಿಮಾವನ್ನು (Rocketry movie) ಸಂಸದರಿಗಾಗಿ ಪ್ರದರ್ಶಿಸಲಾಗಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Union Minister Pralhad Joshi), ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಿರಿಯ ಮುಖಂಡರು ಸಂಸದರ ಜೊತೆ ರಾಕೆಟ್ರಿ ಸಿನಿಮಾ ವೀಕ್ಷಿಸಿದ್ದಾರೆ.
ರಾಕೆಟ್ ಉಡಾವಣೆಗೆ ಬಳಸುವ ಮಹತ್ವದ ವಿಕಾಸ್ ಇಂಜಿನ್ ತಯಾರಿಸಿದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರು ಸಹ ಈ ವಿಶೇಷ ಪ್ರದರ್ಶನದ ವೇಳೆ ಹಿರಿಯ ನಾಯಕರು ಹಾಗೂ ಸಂಸದರ ಜೊತೆ ಪಾಲ್ಗೊಂಡಿದ್ದರು.
ಈ ಶ್ರೇಷ್ಠ ಚಿತ್ರದ ಅಭಿನಯಕ್ಕಾಗಿ ನಾಯಕ ನಟ ಆರ್. ಮಾಧವನ್ ಅವರನ್ನ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಅವರು ಅಭಿನಂದಿಸಿದರು.
ದೇಶಭಕ್ತ ವಿಜ್ಞಾನಿ ಶ್ರೀ ನಂಬಿ ನಾರಾಯಣನ್ ಅವರು ಸುಳ್ಳು ಆಪಾದನೆ ಎದುರಿಸಿ 1994 ರಿಂದ 1998 ರ ವರೆಗೆ ಅನುಭವಿಸಿದ ಹಿಂಸೆ, ಕೇರಳ ಪೊಲೀಸರು ನೀಡಿದ ಕಿರುಕುಳಗಳ ಕುರಿತು ಚಿತ್ರದಲ್ಲಿ ಹೇಳಲಾಗಿದೆ. ವಿಕಾಸ್ ಇಂಜಿನ್ ತಯಾರಿಸಿದ ಒಬ್ಬ ರಾಕೆಟ್ ಸೈನ್ಸ್ ವಿಜ್ಞಾನಿ ಭಾರತದ ವ್ಯವಸ್ಥೆಯಲ್ಲಿ ಪಟ್ಟ ಶ್ರಮದ ಬಗ್ಗೆ ಈ ಸಿನಿಮಾದಲ್ಲಿ ಅರ್ಥಪೂರ್ಣ ಚಿತ್ರಣವಿದೆ.
ಹಲವು ಅವಮಾನ, ಹಿಂಸೆಯ ನಡುವೆಯೂ ಹೋರಾಡಿ ತಾವು ನಿರ್ದೋಷಿ ಎಂಬುದನ್ನ ಸಾಬೀತು ಮಾಡಿದ ನಂಬಿ ನಾರಾಯಣನ್, ದೇಶದ ಅತ್ಯುತ್ತಮ ಮೂರನೇ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪಡೆದವರು.
ವಿದೇಶದಲ್ಲಿ ಹೆಚ್ಚಿನ ತರಬೇತಿ ಪಡೆದ ಬಳಿಕವು ಅಮೇರಿಕಾದ ನಾಸಾ ಆಫರ್ ತಿರಸ್ಕರಿಸಿ ಭಾರತಕ್ಕೆ ಬಂದು ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದವರು ನಂಬಿ ನಾರಾಯಣನ್. ಪಾಕಿಸ್ತಾನಕ್ಕೆ ಕ್ರಯೋಜನಿಕ್ ಇಂಜಿನ್ ತಂತ್ರಜ್ಞಾನವನ್ನ ಮಾರಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ನಂಬಿ ನಾರಾಯಣನ್ ಜೈಲುವಾಸ ಅನುಭವಿಸಬೇಕಾಯಿತು.
ಭಾರತದಲ್ಲಿ ಇಲ್ಲದ ಟೆಕ್ನಾಲಜಿಯನ್ನ ಮಾರಲು ಹೇಗೆ ಸಾಧ್ಯವಿದೆ..? ಎಂದು ನಂಬಿ ನಾರಾಯಣನ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಷಡ್ಯಂತ್ರದ ಹಿಂದೆ ಯಾರೇ ಇದ್ದರು ಅವರನ್ನ ಬಿಡಬಾರದು. ಇದು ದೇಶದ ಅತಿ ದೊಡ್ಡ ಸ್ಕಾಂಡಲ್. ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ ಅಧಿಕಾರಿಗಳನ್ನ ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರು ಯಾರು ಎಂಬುದು ದೇಶಕ್ಕೆ ಗೊತ್ತಾಗಬೇಕು ಎಂಬುದು ನಂಬಿ ನಾರಾಯಣನ್ ಹೋರಾಟವಾಗಿದೆ.
ರಾಕೆಟ್ರಿ ಸಿನಿಮಾ ವೀಕ್ಷಣೆ ಬಳಿಕ, ನಂಬಿ ನಾರಾಯಣನ್ ಅವರನ್ನ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.
Rocketry movie was screened for MPs at Parliament. It is an inspiring tale of ISRO scientist Nambi Narayanan.
Attended this special screening along with @BJP4India President @JPNadda ji, fellow MPs & Nambi Narayanan himself. Congratulated @ActorMadhavan for the great cinema. pic.twitter.com/bmkatuDqjo
— Pralhad Joshi (@JoshiPralhad) August 5, 2022