AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nithya Menen: ಮದುವೆಯಾಗುವಂತೆ ಕಿರುಕುಳ: ದೂರು ನೀಡಲು ಮುಂದಾದ ಮೈನಾ ಸುಂದರಿ

Nithya Menen: ಕನ್ನಡದಲ್ಲಿ ಸೆವೆನ್ ಓ ಕ್ಲಾಕ್, ಜೋಶ್, ಮೈನಾ ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಿತ್ಯಾ ಮೆನನ್ ಕೊನೆಯ ಬಾರಿ ಸ್ಯಾಂಡಲ್​ವುಡ್​ ಸಿನಿಮಾದಲ್ಲಿ ಅಭಿನಯಿಸಿದ್ದು ಕೋಟಿಗೊಬ್ಬ- 2 ಚಿತ್ರದಲ್ಲಿ. ಇದಾದ ಬಳಿಕ ಸೌತ್ ಸಿನಿರಂಗದ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.

Nithya Menen: ಮದುವೆಯಾಗುವಂತೆ ಕಿರುಕುಳ: ದೂರು ನೀಡಲು ಮುಂದಾದ ಮೈನಾ ಸುಂದರಿ
Nithya Menen
TV9 Web
| Edited By: |

Updated on: Aug 06, 2022 | 1:25 PM

Share

ಸೌತ್ ಸಿನಿರಂಗದ ಚೆಂದುಳ್ಳಿ ಚೆಲುವೆ ನಿತ್ಯಾ ಮೆನನ್ (Nithya Menen) ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಆದರೆ ಈ ಎಲ್ಲಾ ವದಂತಿಗಳನ್ನು ಮೈನಾ ಸುಂದರಿ ಅಲ್ಲೆಗಳೆದಿದ್ದರು. ಇದಾಗ್ಯೂ ಈ ಸುದ್ದಿ ಹೇಗೆ ಹುಟ್ಟಿಕೊಂಡಿತು? ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಆದರೀಗ ಇದರ ಹಿಂದಿರುವ ವ್ಯಕ್ತಿ ಯೂಟ್ಯೂಬ್ ಚಾನೆಲ್​ವೊಂದರ ಸಿನಿಮಾ​ ವಿಮರ್ಶಕ ಎನ್ನಲಾಗುತ್ತಿದೆ. ಸಂತೋಷ್ ವರ್ಕಿ ಎನ್ನುವ ವ್ಯಕ್ತಿಯು ನಟಿಯ ಹೆಸರಿನಲ್ಲಿ ನಾನಾ ಸುದ್ದಿಗಳನ್ನು ಹರಿಬಿಡುತ್ತಿದ್ದ. ಅಲ್ಲದೆ ಇದೀಗ ನಿತ್ಯಾ ಮೆನನ್​ರನ್ನು ಮದುವೆಯಾಗುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ.

ಅಷ್ಟೇ ಯಾಕೆ ನಟಿಗೆ ಕರೆ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದಾನಂತೆ. ಆರಂಭದಲ್ಲಿ ಅಭಿಮಾನಿಯೊಬ್ಬರ ಅಭಿಲಾಷೆ ಎಂದು ಸುಮ್ಮನಾಗಿದ್ದ ನಟಿಗೆ ಆ ಬಳಿಕ ಆತನಿಂದ ಕಿರುಕುಳ ಶುರುವಾಗಿದೆ. ಇದರಿಂದ ಬೆಸತ್ತ ನಟಿಯು ಆತನ ನಂಬರ್​ ಅನ್ನು ಬ್ಲಾಕ್ ಮಾಡಿದ್ದಾರೆ. ಇದಾದ ಬಳಿಕವಷ್ಟೇ ಅಸಲಿಯಾಟ ಶುರುವಾಗಿದ್ದು.

ಅಂದರೆ ಸಂತೋಷ್ ವರ್ಕಿ ಬರೋಬ್ಬರಿ 30 ನಂಬರ್​ಗಳಿಂದ ನಟಿಗೆ ಕಾಲ್ ಮಾಡಿದ್ದ. ಪ್ರತಿ ಬಾರಿ ನಿತ್ಯಾ ಮೆನನ್ ನಂಬರ್ ಬ್ಲಾಕ್ ಮಾಡುತ್ತಿದ್ದರೆ, ಅತ್ತ ಕಡೆಯಿಂದ ಹೊಸ ನಂಬರ್​ ಮೂಲಕ ಆತ ಕರೆ ಮಾಡುತ್ತಿದ್ದ. ಮೊದಲು ಹುಡುಗನ ಭವಿಷ್ಯ ಹಾಳಾಗಬಾರದು ಎಂಬ ಉದ್ದೇಶದಿಂದ ನಟಿ ಪೊಲೀಸರಿಗೆ ದೂರು ನೀಡಿರಲಿಲ್ಲ.

ಇದನ್ನೂ ಓದಿ
Image
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Image
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!

ಆದರೆ ಯಾವಾಗ ಟಾರ್ಚರ್ ಜಾಸ್ತಿ ಆಯ್ತೋ, ಕುಟುಂಬಸ್ಥರು ದೂರು ನೀಡುವಂತೆ ಸಲಹೆ ನೀಡಿದ್ದಾರೆ. ಅಷ್ಟೇ ಅಲ್ಲದೆ ನಿತ್ಯಾ ಮೆನನ್​ನ ನಾನು ಪ್ರೀತಿಸುತ್ತಿದ್ದು, ನಾವಿಬ್ಬರೂ ಮದುವೆಯಾಗುತ್ತಿರುವುದಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಸಿನಿಮಾ ವಿಮರ್ಶಕನ ವಿರುದ್ದ ದೂರು ದಾಖಲಿಸಲು ಮೈನಾ ಸುಂದರಿಗೆ ಮುಂದಾಗಿದ್ದಾರೆ.

ಸದ್ಯ ನಿತ್ಯಾ ಮೆನನ್ ಅಭಿನಯದ 19(1) ಚಿತ್ರ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ ಇದೀಗ ವಿಮರ್ಶಕನ ರೂಪದಲ್ಲಿ ನಟಿಗೆ ಹೊಸ ಸಮಸ್ಯೆ ಎದುರಾಗಿದೆ. ಕನ್ನಡದಲ್ಲಿ ಸೆವೆನ್ ಓ ಕ್ಲಾಕ್, ಜೋಶ್, ಮೈನಾ ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಿತ್ಯಾ ಮೆನನ್ ಕೊನೆಯ ಬಾರಿ ಸ್ಯಾಂಡಲ್​ವುಡ್​ ಸಿನಿಮಾದಲ್ಲಿ ಅಭಿನಯಿಸಿದ್ದು ಕೋಟಿಗೊಬ್ಬ- 2 ಚಿತ್ರದಲ್ಲಿ. ಇದಾದ ಬಳಿಕ ತಮಿಳು, ಮಲಯಾಳಂ, ತೆಲುಗು ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟಿ ಶೀಘ್ರದಲ್ಲೇ ಮತ್ತೊಮ್ಮೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್