Actress Ramya: ನನ್ನ ಸಂಗಾತಿ ಸತ್ತಿರಬಹುದು…ಹಳೆ ಪ್ರೇಮ ಪುರಾಣದ ಗುಂಗಿನಲ್ಲಿ ನಟಿ ರಮ್ಯಾ?

Sandalwood Actress Ramya: ಸ್ಯಾಂಡಲ್​ವುಡ್​ನಲ್ಲಿ ನಾಯಕಯಾಗಿ ಮಿಂಚಿದ್ದ ರಮ್ಯಾ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಪುಷ್ಠೀಕರಿಸುವಂತೆ ಇತ್ತೀಚಿನ ದಿನಗಳಲ್ಲಿ ಅವರು ಚಿತ್ರರಂಗದ ಪ್ರಮುಖರೊಂದಿಗೆ ಕಾಣಿಸಿಕೊಂಡಿದ್ದರು.

Actress Ramya: ನನ್ನ ಸಂಗಾತಿ ಸತ್ತಿರಬಹುದು...ಹಳೆ ಪ್ರೇಮ ಪುರಾಣದ ಗುಂಗಿನಲ್ಲಿ ನಟಿ ರಮ್ಯಾ?
Actress Ramya
Follow us
TV9 Web
| Updated By: Digi Tech Desk

Updated on:Aug 06, 2022 | 12:30 PM

ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ (Actress Ramya) ಚಿತ್ರರಂಗದಿಂದ ದೂರ ಉಳಿದು ವರ್ಷಗಳೇ ಕಳೆದಿವೆ. ಆದರೂ ಅವರ ಫ್ಯಾನ್ ಫಾಲೋಯಿಂಗ್ ಇನ್ನೂ ಕೂಡ ಹಾಗೇ ಇದೆ. ಇದಕ್ಕೆ ಸಾಕ್ಷಿಯೇ ಅವರು ಕುಂತರೂ ನಿಂತರೂ ಸುದ್ದಿಯಾಗುತ್ತಿರುವುದು. ಇದೀಗ ಅವರು ಹಾಕಿದ ಒಂದೇ ಒಂದು ಇನ್​ಸ್ಟಾಗ್ರಾಮ್ ರೀಲ್ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಅದರಲ್ಲೂ ಮುಖ್ಯವಾಗಿ ಅವರ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅಷ್ಟಕ್ಕೂ ಚಂದನವನ ಚೆಂದುಳ್ಳಿ ಚೆಲುವೆ ಹಾಕಿದ ಆ ಇನ್​ಸ್ಟಾಗ್ರಾಮ್ ರೀಲ್ಸ್​ನಲ್ಲಿ ಏನಿತ್ತು? ಅವರು ಸಂಗಾತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಾ? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

2016 ರಲ್ಲಿ ಕೊನೆಯ ಬಾರಿ ಕನ್ನಡ ಚಿತ್ರದಲ್ಲಿ ಕಾಣಿಸಿಕೊಂಡ ರಮ್ಯಾ ಆ ಬಳಿಕ ಬಣ್ಣದಲೋಕದಿಂದ ದೂರವೇ ಉಳಿದಿದ್ದರು. ಇದರ ನಡುವೆ ಒಂದಷ್ಟು ರಾಜಕೀಯ ಮತ್ತು ಮತ್ತೊಂದಷ್ಟು ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗಿದ್ದರು. ಈ ವೇಳೆ ಕೇಳಿ ಬಂದ ಪ್ರಮುಖ ಹೆಸರೆಂದರೆ ರಾಫೆಲ್. ಪೋರ್ಚುಗಲ್ ಉದ್ಯಮಿ ರಾಫೆಲ್ ಜೊತೆ ಸ್ಯಾಂಡಲ್​ವುಡ್ ಮೋಹಕ ತಾರೆ ಹಸೆಮಣೆ ಏರಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಕೂಡ ಹರಿದಾಡಿತ್ತು. ಆದರೆ ಆಮೇಲೆ ಏನಾಯ್ತೊ..ಇದಕ್ಕಿದ್ದಂತೆ ರಮ್ಯಾ ಒಂಟಿಯಾಗಿ ಕಾಣಿಸಿಕೊಂಡರು.

ಇದೀಗ ಹಳೆಯ ಸಂಗಾತಿಯನ್ನು ನೆನಪಿಸಿಕೊಳ್ಳುವಂತಹ ರೀಲ್ಸ್​ವೊಂದನ್ನು ರಮ್ಯಾ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಸಂಗಾತಿ ಸತ್ತಿರಬಹುದು ಇಲ್ಲ ನನಗೆ ಸಂಗಾತಿನೇ ಹುಟ್ಟಿಲ್ಲ ಎಂಬ ಸಾಹಿತ್ಯದ ಇಂಗ್ಲಿಷ್ ಹಾಡೊಂದರ ವಿಡಿಯೋವನ್ನು  ಶೇರ್ ಮಾಡಿದ್ದಾರೆ.

ಇದನ್ನೂ ಓದಿ
Image
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
Image
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Image
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Image
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!

Watch this story by Ramya/Divya Spandana on Instagram before it disappears.

null

ಐನಾಟ್​ಶೇನ್ ಹಾಡಿರುವ ಈ ಹಾಡು ಭಗ್ನ ಪ್ರೇಮಿಗಳಿಗೆ ಮಾಡಿಸಿದಂತಹ ಸಾಹಿತ್ಯವನ್ನು ಹೊಂದಿದೆ. ಇದೇ ಹಾಡನ್ನು ರಮ್ಯಾ ಹಂಚಿಕೊಂಡಿದ್ದರಿಂದ ಇದೀಗ ನಟಿಯು ಸಂಗಾತಿಯ ನೆನಪಿನ ಗುಂಗಿನಲ್ಲೇ ಕಾಲ ಕಳೆಯುತ್ತಿದ್ದಾರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಮತ್ತೊಂದೆಡೆ ಮೋಹಕತಾರೆ ಸೋಷಿಯಲ್ ಮೀಡಿಯಾದಲ್ಲಿ ಹೀಗ್ಯಾಕೆ ಹಾಕಿದ್ದಾರೆ ಎಂಬ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸ್ಯಾಂಡಲ್​ವುಡ್ ಕ್ವೀನ್​​ಗೆ ಒಂಟಿತನ ಕಾಡುತ್ತಿದೆಯಾ ಎಂಬ ಪ್ರಶ್ನೆಯೊಂದು ಅಭಿಮಾನಿಗಳನ್ನು ಕಾಡತೊಡಗಿದೆ.

ಸಿಕ್ಕಾಪಟ್ಟೆ ಹಿಟ್ ಆಗಿರುವ ಒಂದಾದ್ರೆ ನನ್ನ ಸಂಗಾತಿ ಸತ್ತಿರಬಹುದು  (Maybe My Soulmate Died) ಹಾಡಿಗೆ ಬ್ರೇಕ್ ಅಪ್ ಆದವರು ಹಾಗೂ ಮದುವೆಯಲ್ಲಿ ಆಸಕ್ತಿ ಇಲ್ಲದವರು ರೀಲ್ಸ್ ಮಾಡುತ್ತಿದ್ದಾರೆ. ಇದೀಗ ಅದೇ ಟ್ರೆಂಡ್ ಅನ್ನು ನಟಿ ರಮ್ಯಾ ಕೂಡ ಫಾಲೋ ಮಾಡಿರುವುದರಿಂದ ಅಭಿಮಾನಿಗಳಲ್ಲಿ ನಾನಾ ಯೋಚನೆಗಳು ಶುರುವಾಗಿದೆ.

ರಮ್ಯಾ ರಿಎಂಟ್ರಿ..? ಸ್ಯಾಂಡಲ್​ವುಡ್​ನಲ್ಲಿ ನಾಯಕಯಾಗಿ ಮಿಂಚಿದ್ದ ರಮ್ಯಾ ಮತ್ತೆ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನು ಪುಷ್ಠೀಕರಿಸುವಂತೆ ಇತ್ತೀಚಿನ ದಿನಗಳಲ್ಲಿ ಅವರು ಚಿತ್ರರಂಗದ ಪ್ರಮುಖರೊಂದಿಗೆ ಕಾಣಿಸಿಕೊಂಡಿದ್ದರು. ಅದರಲ್ಲೂ ತಿಂಗಳ ಹಿಂದೆಯಷ್ಟೇ ಅವರು ಡಾಲಿ ಧನಂಜಯ್ ನಟನೆಯ ಹೊಯ್ಸಲ ಚಿತ್ರ ಸೆಟ್​ಗೆ ಭೇಟಿ ನೀಡಿದ್ದರು. ಹೀಗಾಗಿಯೇ ಹೊಯ್ಸಳ ಚಿತ್ರದ ವಿಶೇಷ ಪಾತ್ರವೊಂದರ ಮೂಲಕ ಸ್ಯಾಂಡಲ್​ವುಡ್ ಕ್ವೀನ್ ಮತ್ತೆ ಬಣ್ಣ ಹಚ್ಚಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇದಾಗ್ಯೂ ಹೊಯ್ಸಳ ಚಿತ್ರತಂಡವಾಗಲಿ, ರಮ್ಯಾ ಆಗಲಿ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಅದಾಗ್ಯೂ ರಮ್ಯಾ ಅವರ ರಿಎಂಟ್ರಿಯನ್ನು ಸ್ವಾಗತಿಸಲು ಅಭಿಮಾನಿಗಳಂತು ತುದಿಗಾಲಲ್ಲಿ ನಿಂತಿದ್ದಾರೆ ಎಂಬುದೇ ಸತ್ಯ.

Published On - 11:51 am, Sat, 6 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ