Rolex Vs Dilli: ಒಂದೇ ವೇದಿಕೆಯಲ್ಲಿ ರೋಲೆಕ್ಸ್​-ದಿಲ್ಲಿ ಮುಖಾಮುಖಿ; ಹೇಗಿತ್ತು ಅಣ್ಣ-ತಮ್ಮನ ಹವಾ?

Suriya | Karthi: ರೋಲೆಕ್ಸ್​ ಮತ್ತು ದಿಲ್ಲಿ ಪಾತ್ರಗಳನ್ನು ಒಟ್ಟಿಗೆ ನೋಡಲು ಫ್ಯಾನ್ಸ್​ ಕಾದಿದ್ದಾರೆ. ‘ವಿರುಮಾನ್​’ ಆಡಿಯೋ ರಿಲೀಸ್​ ವೇದಿಕೆಯಲ್ಲಿ ಅದರ ಝಲಕ್​ ಸಿಕ್ಕಿದೆ.

Rolex Vs Dilli: ಒಂದೇ ವೇದಿಕೆಯಲ್ಲಿ ರೋಲೆಕ್ಸ್​-ದಿಲ್ಲಿ ಮುಖಾಮುಖಿ; ಹೇಗಿತ್ತು ಅಣ್ಣ-ತಮ್ಮನ ಹವಾ?
ಸೂರ್ಯ-ಕಾರ್ತಿ
Edited By:

Updated on: Aug 05, 2022 | 10:05 AM

ಕಾಲಿವುಡ್​ ನಟ ಕಾರ್ತಿ (Karthi) ಅವರ ಪಾಲಿಗೆ 2022ರ ವರ್ಷ ತುಂಬ ಸ್ಪೆಷಲ್​ ಆಗಿದೆ. ಈ ವರ್ಷ ತೆರೆಕಂಡು ಸೂಪರ್​ ಹಿಟ್​ ಆದ ‘ವಿಕ್ರಮ್​’ ಸಿನಿಮಾದಲ್ಲಿ ಅವರ ಮುಖ ಕಾಣಿಸಿಲ್ಲವಾದರೂ ಪಾತ್ರದ ಎಳೆ ಬಂದುಹೋಗಿದೆ. ಈಗ ‘ವಿರುಮಾನ್​’ ಸಿನಿಮಾದ ಬಿಡುಗಡೆಯನ್ನು ಕಾರ್ತಿ ಎದುರು ನೋಡುತ್ತಿದ್ದಾರೆ. ಆಗಸ್ಟ್​ 12ರಂದು ಈ ಚಿತ್ರ ರಿಲೀಸ್​ ಆಗಲಿದೆ. ಇನ್ನು, ಸೆಪ್ಟೆಂಬರ್​ 30ರಂದು ‘ಪೊನ್ನಿಯಿನ್​ ಸೆಲ್ವನ್​’ ಸಿನಿಮಾ ತೆರೆಕಾಣಲಿದೆ. ಆ ಚಿತ್ರದಲ್ಲೂ ಕಾರ್ತಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇತ್ತಿಚೆಗೆಷ್ಟೇ ಈ ಚಿತ್ರದ ‘ಪೊನ್ನಿ ನದಿ..’ ಹಾಡು ರಿಲೀಸ್​ ಆಗಿ ಸದ್ದು ಮಾಡುತ್ತಿದೆ. ಈ ನಡುವೆ ‘ವಿರುಮಾನ್​’ (Viruman) ಚಿತ್ರದ ಆಡಿಯೋ ರಿಲೀಸ್​ ಕೂಡ ಮಾಡಲಾಗಿದೆ. ಆ ಕಾರ್ಯಕ್ರಮಕ್ಕೆ ಕಾರ್ತಿ ಸಹೋದರ, ನಟ ಸೂರ್ಯ (Suriya) ಕೂಡ ಹಾಜರಿ ಹಾಕಿದ್ದಾರೆ. ಅಣ್ಣ-ತಮ್ಮನನ್ನು ಒಂದೇ ವೇದಿಕೆಯಲ್ಲಿ ನೋಡಿ ಫ್ಯಾನ್ಸ್​ ಖುಷಿ ಪಟ್ಟಿದ್ದಾರೆ.

‘ಕೈದಿ’ ಸಿನಿಮಾದಲ್ಲಿ ನಟ ಕಾರ್ತಿ ಅವರು ದಿಲ್ಲಿ ಎಂಬ ಪಾತ್ರ ಮಾಡಿ ಜನಮನ ಗೆದ್ದಿದ್ದರು. ಅದೇ ಸಿನಿಮಾದ ಕಥೆಯ ಎಳೆ ‘ವಿಕ್ರಮ್​’ ಚಿತ್ರದಲ್ಲಿ ಮುಂದುವರಿಯಿತು. ‘ವಿಕ್ರಮ್​’ ಸಿನಿಮಾದಲ್ಲಿ ಸೂರ್ಯ ಮಾಡಿದ ರೋಲೆಕ್ಸ್​ ಪಾತ್ರ ಭಯಂಕರವಾಗಿದೆ. ಮುಂದಿನ ಸಿನಿಮಾದಲ್ಲಿ ರೋಲೆಕ್ಸ್​ ಮತ್ತು ದಿಲ್ಲಿ ಮುಖಾಮುಖಿ ಆಗಲಿದ್ದಾರೆ. ಈಗ ‘ವಿರುಮಾನ್​’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸೂರ್ಯ ಮತ್ತು ಕಾರ್ತಿ ಅವರನ್ನು ಒಟ್ಟಿಗೆ ಕಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ
Salman Khan: ‘ವಿಕ್ರಮ್​’ ಸಿನಿಮಾ ನಿರ್ದೇಶಕ ಲೋಕೇಶ್​ ಕನಗರಾಜ್​ ಜೊತೆ ಸಲ್ಮಾನ್​ ಖಾನ್​ ಹೊಸ ಚಿತ್ರ?
‘ಮೊದಲು ನನ್ನ ಸಾಲ ತೀರಿಸುತ್ತೇನೆ’; ‘ವಿಕ್ರಮ್​’ ಯಶಸ್ಸಿನ ಬಗ್ಗೆ ನಟ ಕಮಲ್ ಹಾಸನ್ ಮಾತು
‘ವಿಕ್ರಮ್​’ ವಿಲನ್ ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್​; ಇದರ ಬೆಲೆ ಎಷ್ಟು ಲಕ್ಷ? ಗೆಸ್ ಮಾಡಿ
‘ವಿಕ್ರಮ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​; ಮೊದಲ ದಿನ ಕಮಲ್​ ಹಾಸನ್​ ಸಿನಿಮಾ ಗಳಿಸಿದ್ದೆಷ್ಟು?

‘ವಿರುಮಾನ್​’ ವೇದಿಕೆಯಲ್ಲಿ ರೋಲೆಕ್ಸ್​ ಮತ್ತು ದಿಲ್ಲಿ ಪಾತ್ರಗಳ ಬಗ್ಗೆ ಪ್ರಸ್ತಾಪ ಆಯಿತು. ಇಬ್ಬರು ಮುಖಾಮುಖಿ ಆದರೆ ಹೇಗಿರುತ್ತದೆ ಎಂದು ಫ್ಯಾನ್ಸ್​ ಕೇಳಿದರು. ‘ಕಾಲ ಬಂದಾಗ ಅದಕ್ಕೆ ಉತ್ತರ ಸಿಗಲಿದೆ’ ಎಂದು ಸೂರ್ಯ ಹೇಳಿದರು. ‘ಮನೆಯಲ್ಲಿ ರೋಲೆಕ್ಸ್​ ಮತ್ತು ದಿಲ್ಲಿ ನಡುವೆ ಬಹಳ ಫೈಟ್ಸ್ ನಡೆದಿವೆ’ ಎಂದು ಕಾರ್ತಿ ಹೇಳಿದರು. ಅದೇ ವೇದಿಕೆಯಲ್ಲಿ ಇಬ್ಬರೂ ಮುಖಾಮುಖಿ ಆಗಿ ಡೈಲಾಗ್​ ಹೇಳಿಕೊಂಡರು.

ಸೂರ್ಯ ಮತ್ತು ಜ್ಯೋತಿಕಾ ಅವರ ‘2ಡಿ ಎಂಟರ್​ಟೇನ್ಮೆಂಟ್​’ ಸಂಸ್ಥೆ ಮೂಲಕ ‘ವಿರುಮಾನ್​’ ಸಿನಿಮಾ ಸಿದ್ಧವಾಗಿದೆ. ಕಾರ್ತಿಗೆ ಜೋಡಿಯಾಗಿ ಅದಿತಿ ಶಂಕರ್​ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಮತ್ತೊಂದು ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಕಾರ್ತಿ.

Published On - 9:58 am, Fri, 5 August 22