ರಿಲೇಶನ್ಶಿಪ್ ವಿಚಾರದಲ್ಲಿ ಸೆಲೆಬ್ರಿಟಿಗಳು ಸುಮ್ಮನೆ ಕೂರುವವರೇ ಅಲ್ಲ. ಸಣ್ಣ ನೆಪ ಸಿಕ್ಕರೂ ಸಾಕು ಒಬ್ಬರ ಜೊತೆ ಅವರು ಕಮಿಟ್ ಆಗಿಬಿಡುತ್ತಾರೆ. ಕೈಕೈ ಹಿಡಿದು ಊರೂರು ಸುತ್ತುತ್ತ, ಡೇಟಿಂಗ್ ಶುರುಮಾಡುತ್ತಾರೆ. ಸದ್ಯ ಶ್ರೀದೇವಿಯ ಪುತ್ರಿ ಜಾನ್ವಿ ಕಪೂರ್ ಕೂಡ ರಿಲೇಶನ್ಶಿಪ್ನಲ್ಲಿ ಇದ್ದಾರಾ? ನೆಟ್ಟಿಗರ ಮನದಲ್ಲಿ ಇಂಥ ಅನುಮಾನ ಮೂಡಿದೆ. ಅದಕ್ಕೆ ಕಾರಣ ಆಗಿರುವುದು ಒಂದೇ ಒಂದು ಫೋಟೋ!
ಜಾನ್ವಿ ಕಪೂರ್ ಆಗಾಗ ವಿದೇಶಕ್ಕೆ ಪಯಣ ಬೆಳೆಸುತ್ತ ಇರುತ್ತಾರೆ. ಇತ್ತೀಚೆಗೆ ಅವರು ಲಾಸ್ ಏಂಜಲೀಸ್ ವಿಮಾನ ಹತ್ತಿದ್ದಾರೆ. ಅಲ್ಲಿಗೆ ಹೋಗಿ ಇಳಿಯುತ್ತಿದ್ದಂತೆಯೇ ಕೆಲವು ಫೋಟೋಗಳನ್ನು ಅವರು ಅಪ್ಲೋಡ್ ಮಾಡಿದ್ದಾರೆ. ಅದರಲ್ಲಿ ಅವರು ಒಬ್ಬರೇ ಇಲ್ಲ. ಜೊತೆಗಿರುವ ಗೆಳೆಯನ ಫೋಟೋವನ್ನೂ ಜಾನ್ವಿ ಹಂಚಿಕೊಂಡಿದ್ದಾರೆ. ಇದು ಈಗ ಚರ್ಚೆಯ ವಿಷಯ ಆಗಿದೆ.
‘ಲಾಸ್ ಏಂಜಲೀಸ್ಗೆ ಬಂದು ಒಂದು ನಿಮಿಷ ಆಯಿತು. ಇದು ಮನೆ ರೀತಿ ಫೀಲ್ ಆಗುತ್ತಿದೆ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಜಾನ್ವಿ ಜೊತೆ ಅವರ ತಂಗಿ ಖುಷಿ ಕಪೂರ್ ಕೂಡ ಇದ್ದಾರೆ. ಅಷ್ಟೇ ಅಲ್ಲದೆ, ರೋಹನ್ ಜೌರಾ ಎಂಬ ಗೆಳೆಯ ಜಾನ್ವಿಗೆ ಸಾಥ್ ನೀಡಿರುವುದು ವಿಶೇಷ. ಈ ರೋಹನ್ ಯಾರು ಎಂಬುದನ್ನು ತಿಳಿದುಕೊಳ್ಳಲು ನೆಟ್ಟಿಗರು ಹುಡುಕಾಟ ನಡೆಸುತ್ತಿದ್ದಾರೆ. ಇವರಿಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರಾ ಎಂಬ ಕೌತುಕ ಅಭಿಮಾನಿಗಳ ಮನದಲ್ಲಿ ಮೂಡಿದೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್ಗೆ ಯಾಕೋ ಪದೇಪದೇ ಅದೃಷ್ಟ ಕೈ ಕೊಡುತ್ತಿದೆ. ನಟಿಸಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಮೊದಲ ಸಿನಿಮಾ ‘ಧಡಕ್’ ಬಳಿಕ ಅವರಿಗೆ ಮತ್ತೆ ದೊಡ್ಡ ಗೆಲುವು ಸಿಗಲೇ ಇಲ್ಲ. ‘ಗುಂಜನ್ ಸಕ್ಸೇನಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ ಸಿನಿಪ್ರಿಯರು ಅದಕ್ಕೆ ಮೆಚ್ಚುಗೆ ಸೂಚಿಸಿಲ್ಲ. ಇತ್ತೀಚೆಗೆ ತೆರೆಕಂಡ ರೂಹಿ ಸಿನಿಮಾ ಮೊದಲ ದಿನವೇ ಪೈರಸಿ ಹಾವಳಿಗೆ ತುತ್ತಾಗಿ ನೆಲಕಚ್ಚಿತು. ಆ ಯಾವ ಸೋಲುಗಳನ್ನೂ ಮನಸ್ಸಿಗೆ ಹಚ್ಚಿಕೊಳ್ಳದ ಜಾನ್ವಿ, ಸದ್ಯಕ್ಕೆ ವಿದೇಶದಲ್ಲಿ ಮೋಜು ಮಾಡುತ್ತಿದ್ದಾರೆ.
ಇದನ್ನೂ ಓದಿ: 39 ಕೋಟಿಗೆ ಮುಂಬೈನ ಜುಹುವಿನಲ್ಲಿ 3 ಮಹಡಿಯ ಮನೆ ಖರೀದಿಸಿದ್ದಾರಂತೆ ಬಾಲಿವುಡ್ ನಟಿ ಜಾನ್ವಿ ಕಪೂರ್..!
Published On - 4:42 pm, Thu, 25 March 21