AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನಿನ ಬಾಕ್ಸ್​ ಆಫೀಸ್​ನಲ್ಲಿ ಓಟವನ್ನು ಮುಂದುವರಿಸಿದ ‘ಆರ್​ಆರ್​ಆರ್’; ‘3 ಈಡಿಯಟ್ಸ್’ ದಾಖಲೆ ಉಡೀಸ್

ಈ ವರ್ಷ ಮಾರ್ಚ್​ನಲ್ಲಿ ರಿಲೀಸ್ ಆದ ‘ಆರ್​ಆರ್​ಆರ್​’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈಗ ಜಪಾನ್​ನಲ್ಲಿ ‘ಆರ್​ಆರ್​ಆರ್​'(RRR) ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆ ಸಿಗುತ್ತಿದೆ. ಜಪಾನ್ ಮಂದಿ ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಜಪಾನ್​ನಲ್ಲಿ ಅಮಿರ್​ ​ ಖಾನ್ಅಭಿನಯದ ‘3 ಈಡಿಯಟ್ಸ್​' ಮಾಡಿದ ದಾಖಲೆಯನ್ನ ಈ ಚಿತ್ರ ಹಿಂದಿಕ್ಕಿದೆ. ವಿಶ್ವದಾದ್ಯಂತ ಈ ಚಿತ್ರ 1200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.

ಜಪಾನಿನ ಬಾಕ್ಸ್​ ಆಫೀಸ್​ನಲ್ಲಿ ಓಟವನ್ನು ಮುಂದುವರಿಸಿದ ‘ಆರ್​ಆರ್​ಆರ್'; ‘3 ಈಡಿಯಟ್ಸ್’ ದಾಖಲೆ ಉಡೀಸ್
ಆರ್​ಆರ್​ಆರ್, ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​
TV9 Web
| Edited By: |

Updated on:Nov 08, 2022 | 5:39 PM

Share

‘ಆರ್​ಆರ್​ಆರ್’ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ಸಿಕ್ಕಿದೆ. ರಾಜ್​ಮೌಳಿ ನಿರ್ದೇಶನದ ಈ ಚಿತ್ರವನ್ನು ಹಾಲಿವುಡ್ (hollywood) ಮಂದಿಯೂ ಮೆಚ್ಚಿಕೊಂಡಿದ್ದಾರೆ. ಜಪಾನ್​ನಲ್ಲಿ ಕಳೆದ 17 ದಿನಗಳಲ್ಲಿ 1.2 ಲಕ್ಷಕ್ಕೂ ಹೆಚ್ಚು ಜನರು ಸಿನಿಮಾವನ್ನ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಇದರಿಂದ ಚಿತ್ರವು ಜಪಾನ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ‘ಆರ್​​ಆರ್​ಆರ್​’(RRR) ಚಿತ್ರ ಜಪಾನ್​ನಲ್ಲಿ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘3 ಈಡಿಯಟ್ಸ್’ ಸಿನಿಮಾ 9.4 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.

ಬಾಲಿವುಡ್​ ನಟ ಆಮಿರ್​ ಖಾನ್ ಅವರ ‘3 ಈಡಿಯಟ್ಸ್‘ ಹಾಗೂ ರಾಜಮೌಳಿ ನಿರ್ದೇಶನ ‘ಬಾಹುಬಲಿ 2’ ಸಿನಿಮಾದ ನಂತರ ‘ಆರ್​ಆರ್​ಆರ್’ಚಿತ್ರ ಜಪಾನ್​ನಲ್ಲಿ ಸಕ್ಸ್ಸ್​ಸ್ ಕಂಡಿದೆ. ಈ ಮೂಲಕ ನಿರ್ದೇಶಕ ರಾಜ್​ಮೌಳಿಯವರ ಎರಡನೇ ಚಿತ್ರವು ಜಪಾನ್​ನಲ್ಲಿ ಹಿಟ್​ ಆಗಿ ಹೊರಹೊಮ್ಮಿದೆ. ಆದರೆ 1995ರಲ್ಲಿ ರಿಲೀಸ್​ ಆದ ಕೆ.ಎಸ್​ ರವಿಕುಮಾರ್​ ನಿರ್ದೇಶನ ಮಾಡಿದ್ದ ರಜನಿಕಾಂತ್ ಅಭಿಯನದ ‘ಮುತ್ತು’ ಸಿನಿಮಾದ ಜಪಾನ್ ಕಲೆಕ್ಷನ್​ ಹಿಂದಿಕ್ಕಿಲು ಈ ಚಿತ್ರಗಳು ವಿಫಲವಾಗಿವೆ.

ಇದನ್ನೂ ಓದಿ

ಜೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ‘ಆರ್​ಆರ್​ಆರ್’​ ಸಿನಿಮಾವು ಭಾರತದ ಬ್ರಿಟಿಷ್​ ಆಳ್ವಿಕೆಯ ವಿರುದ್ಧದ ದಂಗೆಯ ಕಾಲ್ಪನಿಕ ಕಥೆಯನ್ನ ವಿವರಿಸುತ್ತದೆ. ಇನ್ನು ನಿರ್ಮಾಪಕರು ಈ ಸಿನಿಮಾವನ್ನ ಎಲ್ಲಾ ಜನಪ್ರಿಯ ವಿಭಾಗಗಳ ಪ್ರಶಸ್ತಿಗಳಿಗೆ ಸಲ್ಲಿಸಿದ್ದಾರೆ.

ನಿರ್ದೇಶಕ ರಾಜಮೌಳಿ ಅವರು ಆರ್​ಆರ್​ಆರ್​ ಯಶಸ್ಸಿನ ನಂತರ ಮುಂದಿನ ಸಿನಿಮಾವನ್ನ ತೆಲುಗು ನಟ ಸೂಪರ್​ ಸ್ಟಾರ್​ ಮಹೇಶ ಬಾಬು ಜೊತೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಸಿನಿಮಾದ ಕಥೆಯು ನಿಜ ಜೀವನದ ಘಟನೆಗಳಿಂದ ಸ್ಪೂರ್ತಿ ಪಡೆದಿದೆ ಎಂದು ಹೇಳಲಾಗುತ್ತಿದೆ ಹಾಗೂ ಮಹೇಶ ಬಾಬು ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:10 pm, Tue, 8 November 22

ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ