ಜಪಾನ್​ನಲ್ಲಿ ಭೂಕಂಪಕ್ಕೆ ಬೆಚ್ಚಿದ ರಾಜಮೌಳಿ, ಕಾರ್ತಿಕೇಯ: ನಂತರ ಏನಾಯ್ತು?

|

Updated on: Mar 21, 2024 | 3:51 PM

‘ನಮಗೆ ಜಪಾನ್​ನಲ್ಲಿ ಈಗತಾನೆ ಭಯಂಕರ ಭೂಕಂಪದ ಅನುಭವ ಆಯಿತು. ನಾವು 28ನೇ ಫ್ಲೋರ್​ನಲ್ಲಿ ಇದ್ದೆವು. ನಿಧಾನವಾಗಿ ನೆಲ ಅಲುಗಾಡಲು ಆರಂಭಿಸಿತು’ ಎಂಬ ಆ ಅನುಭವವನ್ನು ರಾಜಮೌಳಿ ಪುತ್ರ ಎಸ್.ಎಸ್​. ಕಾರ್ತಿಕೇಯ ವಿವರಿಸಿದ್ದಾರೆ. ಸದ್ಯ ಅವರು ಸೇಫ್​ ಆಗಿದ್ದಾರೆ ಎಂಬುದು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಜಪಾನ್​ನಲ್ಲಿ ಭೂಕಂಪಕ್ಕೆ ಬೆಚ್ಚಿದ ರಾಜಮೌಳಿ, ಕಾರ್ತಿಕೇಯ: ನಂತರ ಏನಾಯ್ತು?
ಕಾರ್ತಿಕೇಯ, ರಾಜಮೌಳಿ
Follow us on

2022ರ ಮಾರ್ಚ್​ ತಿಂಗಳಲ್ಲಿ ಬಿಡುಗಡೆಯಾದ ‘ಆರ್​ಆರ್​ಆರ್​’ (RRR) ಸಿನಿಮಾ ಜಾಗತಿಕ ಮಟ್ಟದಲ್ಲಿ ಅಬ್ಬರಿಸಿತು. ರಿಲೀಸ್​ ಆಗಿ ಎರಡು ವರ್ಷ ಕಳೆದರೂ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಜಪಾನ್​ನಲ್ಲಿ ಈಗಲೂ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಪ್ರೇಕ್ಷಕರಿಗೆ ‘ಆರ್​ಆರ್​ಆರ್​’ ಸಿನಿಮಾ ತುಂಬ ಇಷ್ಟ ಆಗಿದೆ. ಇತ್ತೀಚೆಗೆ ನಿರ್ದೇಶಕ ರಾಜಮೌಳಿ (Rajamouli), ಅವರ ಪುತ್ರ ಕಾರ್ತಿಕೇಯ ಮುಂತಾದವರು ಜಪಾನ್​ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರಿಗೆ ಭೂಕಂಪದ ಅನುಭವ ಆಗಿದೆ. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಚ್ಚರಿ ಏನೆಂದರೆ ಭೂಕಂಪ (Earthquake) ಆದಾಗ ಅವರು 28ನೇ ಮಹಡಿಯಲ್ಲಿ ಇದ್ದರು!

‘ಜಪಾನ್​ನಲ್ಲಿ ಈಗಷ್ಟೇ ಭಯಂಕರ ಭೂಕಂಪದ ಅನುಭವ ಆಯಿತು. ನಾವು 28ನೇ ಫ್ಲೋರ್​ನಲ್ಲಿ ಇದ್ದೆವು. ನಿಧಾನವಾಗಿ ನೆಲ ಅಲುಗಾಡಲು ಆರಂಭಿಸಿತು. ಅದು ಭೂಕಂಪ ಅಂತ ತಿಳಿಯಲು ನಮಗೆ ಕೆಲವು ನಿಮಿಷ ಬೇಕಾಯಿತು. ನಾನು ಭಯಗೊಳ್ಳುವವನಿದ್ದೆ. ಆದರೆ ಸುತ್ತಮುತ್ತ ಇದ್ದ ಜಪಾನ್​ ಮಂದಿ ಕಿಂಚಿತ್ತೂ ಅಲ್ಲಾಡಲಿಲ್ಲ. ಇನ್ನೇನು ಮಳೆ ಬರುತ್ತಿದೆ ಎಂಬಷ್ಟು ಸಹಜವಾಗಿ ಅವರಿದ್ದರು’ ಎಂದು ರಾಜಮೌಳಿ ಅವರ ಪುತ್ರ ಎಸ್​ಎಸ್​ ಕಾರ್ತಿಕೇಯ ಅವರು ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರ್ತಿಕೇಯ ಅವರ ಸ್ಮಾರ್ಟ್​ ವಾಚ್​ನಲ್ಲಿ ಭೂಕಂಪದ ಮುನ್ಸೂಚನೆ ಬಗ್ಗೆ ಮೆಸೇಜ್​ ಕಾಣಿಸಿಕೊಂಡಿದೆ. ಅದರ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ‘ಭೂಕಂಪದ ಮುನ್ಸೂಚನೆಯ ಎಚ್ಚರಿಕೆ: ಶೀಘ್ರದಲ್ಲೇ ದೊಡ್ಡ ಕಂಪನ ಆಗುವ ಸಾಧ್ಯತೆ ಇದೆ. ಶಾಂತವಾಗಿರಿ ಮತ್ತು ಹತ್ತಿರದಲ್ಲಿ ಆಶ್ರಯ ಪಡೆಯಿರಿ’ ಎಂದು ಜಪಾನ್​ನ ಹವಾಮಾನ ಇಲಾಖೆಯವರು ಕಾರ್ತಿಕೇಯ ಅವರಿಗೆ ಸಂದೇಶ ಕಳಿಸಿದ್ದು ಈ ಫೋಟೋದಲ್ಲಿದೆ.

ಇದನ್ನೂ ಓದಿ: RRR ಶೂಟಿಂಗ್​ ಲೊಕೇಷನ್​ ನೋಡಲು ಜಪಾನ್​ನಿಂದ ಬಂದ ಫ್ಯಾನ್ಸ್​

ರಾಜಮೌಳಿ ಮತ್ತು ಅವರ ತಂಡಕ್ಕೆ ಜಪಾನ್​ನಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿದೆ. ರಾಜಮೌಳಿಗೆ ಇನ್ನಷ್ಟು ಯಶಸ್ಸು ಮತ್ತು ಆರೋಗ್ಯ ಸಿಗಲಿ ಎಂದು ಹಾರೈಸಿ 83 ವರ್ಷ ವಯಸ್ಸಿನ ಮಹಿಳೆಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ. ಆ ಸಂದರ್ಭದ ಫೋಟೋವನ್ನು ರಾಜಮೌಳಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜಪಾನ್​ನಲ್ಲಿ ‘ಆರ್​ಆರ್​ಆರ್​’ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವ ಬಗ್ಗೆ ಇತ್ತೀಚೆಗೆ ಚಿತ್ರತಂಡದವರು ಮಾಹಿತಿ ನೀಡಿದ್ದರು. ಜಪಾನ್​ನಿಂದ ಕೆಲವು ಅಭಿಮಾನಿಗಳು ಭಾರತಕ್ಕೆ ಬಂದು ‘ಆರ್​ಆರ್​ಆರ್​’ ಶೂಟಿಂಗ್​ ಸ್ಥಳಕ್ಕೆ ಭೇಟಿ ನೀಡಿದ್ದು ಕೂಡ ಇತ್ತೀಚೆಗೆ ಸುದ್ದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.