AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​ಆರ್ ಚಿತ್ರಕ್ಕೆ ಸೀಕ್ವೆಲ್ ಬರುತ್ತದೆ’; ಜಪಾನ್​ನಲ್ಲಿ ರಹಸ್ಯ ಬಿಚ್ಚಿಟ್ಟ ರಾಜಮೌಳಿ

ಈ ಮೊದಲಿನಿಂದಲೂ ‘ಆರ್​ಆರ್​ಆರ್​’ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಲೇ ಇತ್ತು. ಜಪಾನ್​ನಲ್ಲಿ ರಾಜಮೌಳಿ ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮುಗಿದ ಬಳಿಕ ಅವರು ಫ್ಯಾನ್ಸ್ ಪ್ರಶ್ನೆಗೆ ಉತ್ತರಿಸಿದ್ದು, ‘ಆರ್‌ಆರ್‌ಆರ್ 2’ ಎಂದು ಹೇಳಿದ್ದಾರೆ.

‘ಆರ್​ಆರ್​ಆರ್ ಚಿತ್ರಕ್ಕೆ ಸೀಕ್ವೆಲ್ ಬರುತ್ತದೆ’; ಜಪಾನ್​ನಲ್ಲಿ ರಹಸ್ಯ ಬಿಚ್ಚಿಟ್ಟ ರಾಜಮೌಳಿ
ರಾಜಮೌಳಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Mar 20, 2024 | 7:49 AM

Share

ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಅವರ ಮುಂಬರುವ ಸಿನಿಮಾಗಳ ಬಗ್ಗೆ ಟಾಲಿವುಡ್ ಮಂದಿ ಮಾತ್ರವಲ್ಲ ವಿಶ್ವದ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಹೇಶ್ ಬಾಬು ಜೊತೆ ಅವರು ಸಿನಿಮಾ ಮಾಡುತ್ತಿದ್ದು, ಇದಕ್ಕೆ ‘SSMB29’ ಎಂದು ತಾತ್ಕಾಲಿಕವಾಗಿ ಶೀರ್ಷಿಕೆ ಇಡಲಾಗಿದೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ರಾಜಮೌಳಿ ಈ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಪಾತ್ರವರ್ಗವನ್ನು ಅಂತಿಮಗೊಳಿಸಲಾಗುತ್ತಿದೆ. ಈ ಮಧ್ಯೆ ಮಾರ್ಚ್ 18ರಂದು ಜಪಾನ್‌ನಲ್ಲಿ ಬ್ಲಾಕ್‌ಬಸ್ಟರ್ ‘ಆರ್​ಆರ್​ಆರ್​’ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಎಸ್ಎಸ್ ರಾಜಮೌಳಿ ಕೂಡ ಅಲ್ಲಿಗೆ ತೆರಳಿದ್ದರು. ಈ ವೇಳೆ ಅವರಿಗೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೇ ವೇಳೆ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ವೇಳೆ ‘ಆರ್‌ಆರ್‌ಆರ್‌’ ಸೀಕ್ವೆಲ್‌ ಬಗ್ಗೆಯೂ ಚರ್ಚೆ ನಡೆದಿದೆ.

‘ಆರ್​ಆರ್​ಆರ್​’ ವಿಶ್ವಾದ್ಯಂತ ಸದ್ದು ಮಾಡಿದ ಸಿನಿಮಾ. ಹಾಲಿವುಡ್ ನಿರ್ದೇಶಕರು ಕೂಡ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. 2022ರ ಮಾರ್ಚ್​ನಲ್ಲಿ ರಿಲೀಸ್ ಆದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 1200 ಕೋಟಿ ರೂಪಾಯಿ ಗಳಿಕೆ ಮಾಡಿದೆ. ‘ಆರ್​ಆರ್​ಆರ್​’ ಸಿನಿಮಾದ ‘ನಾಟು-ನಾಟು..’ ಹಾಡು ಆಸ್ಕರ್ ಅವಾರ್ಡ್ ಗೆದ್ದಿದೆ. ಈ ಮಧ್ಯೆ ರಾಜಮೌಳಿ ಅವರ ಒಂದು ಹೇಳಿಕೆ ವೈರಲ್ ಆಗಿದೆ.

ಈ ಮೊದಲಿನಿಂದಲೂ ‘ಆರ್​ಆರ್​ಆರ್​’ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಲೇ ಇತ್ತು. ಜಪಾನ್​ನಲ್ಲಿ ರಾಜಮೌಳಿ ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮುಗಿದ ಬಳಿಕ ಅವರು ಫ್ಯಾನ್ಸ್ ಪ್ರಶ್ನೆಗೆ ಉತ್ತರಿಸಿದ್ದು, ‘ಆರ್‌ಆರ್‌ಆರ್ 2’ ಎಂದು ಹೇಳಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲರೂ ಚಪ್ಪಾಳೆ ತಟ್ಟಲಾರಂಭಿಸಿದರು. ನಂತರ ಅವರು ಮಾತು ಮುಂದುವರಿಸಿದರು. ‘ನನಗೆ ಈಗ ಅದರ ಬಗ್ಗೆ ಒಂದು ಕಲ್ಪನೆ ಇದೆ. ಆದರೆ ಈ ಸಮಯದಲ್ಲಿ ನಾನು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ’ ಎಂದಿದ್ದಾರೆ. ಫ್ಯಾನ್ಸ್ ಖುಷಿಯಿಂದ ಸಂಭ್ರಮಿಸಲು ಇಷ್ಟು ಸಾಕು. ಆದರೆ, ಸದ್ಯಕ್ಕಂತೂ ಈ ಬಗ್ಗೆ ಘೋಷಣೆ ಆಗುವುದಿಲ್ಲ.

‘ಆರ್​ಆರ್​ಆರ್’ ಸಿನಿಮಾದ ಈ ವಿಶೇಷ ಪ್ರದರ್ಶನ 2022ರ ಅಕ್ಟೋಬರ್​ನಲ್ಲಿಯೇ ನಡೆಯಬೇಕಿತ್ತು. ಆದರೆ ಕೋವಿಡ್‌ನಿಂದಾಗಿ ಅದು ರದ್ದಾಗಿತ್ತು. ಹೀಗಾಗಿ 2024ರಲ್ಲಿ ಇದನ್ನು ಆಯೋಜಿಸಲಾಗಿತ್ತು. ಈ ವಿಶೇಷ ಶೋ ಮಾರ್ಚ್ 18ರಂದು ನಡೆದಿದೆ. ಈ ವೇಳೆ ‘RRR’ ಚಿತ್ರದ ನಿರ್ದೇಶಕರು ಅಭಿಮಾನಿಗಳನ್ನು ಭೇಟಿ ಮಾಡಿ ಜನರ ಬಹುತೇಕ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದ್ದಾರೆ. ಸದ್ಯದಲ್ಲೇ ಮಹೇಶ್ ಬಾಬು ಜೊತೆ ಅವರು ಸಿನಿಮಾ ಮಾಡಲಿದ್ದಾರೆ. ಇವರ ಪ್ರೀ-ಪ್ರೊಡಕ್ಷನ್ ಕೆಲಸ ಕೂಡ ಮುಗಿದಿದೆ. ಶೀಘ್ರದಲ್ಲೇ ಇದರ ಶೂಟಿಂಗ್ ಶುರುವಾಗಲಿದೆ.

ಇದನ್ನೂ ಓದಿ: ‘ಆರ್​ಆರ್​ಆರ್​’ ಸ್ಟಾರ್ ಜೊತೆ ಶಿವರಾಜ್ ಕುಮಾರ್ ನಟನೆ, ನಿರ್ದೇಶಕ ಯಾರು?

ರಾಮ್‌ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆ ಆಲಿಯಾ ಭಟ್, ಅಜಯ್ ದೇವಗನ್, ಶ್ರಿಯಾ ಶರಣ್ ಮುಂತಾದ ತಾರೆಯರು ‘ಆರ್‌ಆರ್‌ಆರ್’ ಚಿತ್ರದಲ್ಲಿ ನಟಿಸಿದ್ದರು. ಈಗ ರಾಜಮೌಳಿ ಮುಂದಿನ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಈ ಚಿತ್ರಕ್ಕಾಗಿ ಮಹೇಶ್ ಬಾಬು ಎರಡು ವರ್ಷದ ಕಾಲ್​ಶೀಟ್ ನೀಡಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ