Updated on: Mar 20, 2024 | 8:42 AM
ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ಕಂಗುವ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಸೂರ್ಯ ಅವರು ವಿವಿಧ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.
ಇತ್ತೀಚೆಗೆ ‘ಕಂಗುವ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ಹೆಣಗಳ ರಾಶಿ, ಫೈಟ್ ಹೀಗೆ ಹಲವು ವಿಚಾರಗಳು ಗಮನ ಸೆಳೆದಿವೆ. ಸಖತ್ ಖಡಕ್ ಆಗಿ ಟೀಸರ್ ಮೂಡಿ ಬಂದಿದೆ.
‘ಕಂಗುವ’ ಸಿನಿಮಾ ಬಗ್ಗೆ ನೀರೀಕ್ಷೆ ಮೂಡಲು ಹಲವು ಕಾರಣಗಳು ಇದ್ದವು. ಈಗ ಟೀಸರ್ ರಿಲೀಸ್ ಆದ ಬಳಿಕ ಈ ನಿರೀಕ್ಷೆ ಹೆಚ್ಚಿದೆ. ‘ಕಂಗುವ’ ಚಿತ್ರಕ್ಕೆ ಶಿವ ಅವರು ನಿರ್ದೇಶನ ಮಾಡಿದ್ದಾರೆ.
ಬಾಬಿ ಡಿಯೋಲ್ ಕೂಡ ‘ಕಂಗುವ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಅವರು ನಟಿಸಿರುವ ಮೊದಲ ದಕ್ಷಿಣ ಭಾರತದ ಚಿತ್ರ ಅನ್ನೋದು ವಿಶೇಷ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಅವರು ಸಂಗೀತ ನೀಡುತ್ತಿದ್ದಾರೆ.
‘ಅನಿಮಲ್’ ಸಿನಿಮಾದಲ್ಲಿ ಬಾಬಿ ಡಿಯೋಲ್ ಅಬ್ಬರಿಸಿದ್ದರು. ಇದಾದ ಬಳಿಕ ಅವರಿಗೆ ಹಲವು ಆಫರ್ ಬಂದಿದ್ದವು. ಅವರು ‘ಕಂಗುವ’ ಚಿತ್ರದಲ್ಲಿಯೂ ಕ್ರೂರವಾದ ಅವತಾರ ತಾಳುತ್ತಿದ್ದಾರೆ.
ಟೀಸರ್ ಸಖತ್ ಅದ್ದೂರಿಯಾಗಿ ಮೂಡಿ ಬಂದಿದೆ. ಈ ಮೂಲಕ ಸಿನಿಮಾ ಹೇಗೆ ಇರಲಿದೆ ಎನ್ನುವ ಸೂಚನೆ ಸಿಕ್ಕಿದೆ. ಸೂರ್ಯ ಅವರ ಲುಕ್ ಗಮನ ಸೆಳೆಯುತ್ತಿದೆ.
‘ಕಂಗುವ’ ಚಿತ್ರದ ಸೆಟ್, ಎಲ್ಲರೂ ಹಾಕಿರುವ ಕಾಸ್ಟ್ಯೂಮ್ ಗಮನ ಸೆಳೆಯುತ್ತಿದೆ. ಈ ಚಿತ್ರದ ರಿಲೀಸ್ ಡೇಟ್ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.