AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuva Movie Trailer: ‘ರಕ್ತ ಹರಿಯುತ್ತೆ’; ಭರವಸೆ ಮೂಡಿಸಿದ ‘ಯುವ’ ಸಿನಿಮಾ ಟ್ರೇಲರ್

ಪದವಿ ಮುಗಿದ ಬಳಿಕ ಯುವ ಸೇರೋದು ಒಂದು ಡಿಲಿವರಿ ಪಾರ್ಟ್ನರ್ ಆಗಿ. ಅಲ್ಲಿಂದ ಬದುಕು ಏನು ಎಂಬುದು ಗೊತ್ತಾಗುತ್ತದೆ. ದುಡಿಯೋಕೆ ಆರಂಭಿಸಿದ ಮೇಲೆ ತಂದೆಯ ನೋವು ಕಥಾ ನಾಯಕನಿಗೆ ತಿಳಿಯೋಕೆ ಆರಂಭ ಆಗುತ್ತದೆ. ಈ ಚಿತ್ರದಲ್ಲಿ ಯುವ, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಸುಧಾರಾಣಿ, ಕಿಶೋರ್ ಮೊದಲಾದವರು ನಟಿಸಿದ್ದಾರೆ.

Yuva Movie Trailer: ‘ರಕ್ತ ಹರಿಯುತ್ತೆ’; ಭರವಸೆ ಮೂಡಿಸಿದ ‘ಯುವ’ ಸಿನಿಮಾ ಟ್ರೇಲರ್
ಯುವ
ರಾಜೇಶ್ ದುಗ್ಗುಮನೆ
|

Updated on: Mar 21, 2024 | 2:15 PM

Share

ರಾಜ್​ಕುಮಾರ್ ಕುಟುಂಬದ ಕುಡಿ ಯುವ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂದಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿತ್ತು. ‘ಯುವ’ (Yuva Movie) ಹೆಸರಲ್ಲೇ ಸಿನಿಮಾ ಕೂಡ ಸೆಟ್ಟೇರಿತ್ತು. ಈ ಚಿತ್ರದ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಮಾರ್ಚ್ 29ರಂದು ಈ ಚಿತ್ರ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್ ನೋಡಿದ ಫ್ಯಾನ್ಸ್​ಗೆ ನಿರೀಕ್ಷೆ ಮೂಡಿದೆ. ಎರಡು ಶೇಡ್​ನ ಪಾತ್ರದಲ್ಲಿ ಯುವ ಕಾಣಿಸಿಕೊಂಡಿದ್ದಾರೆ. ಅವರು ಭರವಸೆ ಮೂಡಿಸಿದ್ದಾರೆ.

ಯುವ ಪಕ್ಕಾ ಮಾಸ್ ಅವತಾರದಲ್ಲಿ ಬಂದಿದ್ದಾರೆ. ಈ ಚಿತ್ರದಲ್ಲಿ ಎರಡು ಶೇಡ್​ನ ಪಾತ್ರ ಮಾಡಿದ್ದಾರೆ. ಸಿನಿಮಾ ಯಾವ ಥೀಮ್ ಹೊಂದಿದೆ ಎಂಬುದನ್ನು ಟ್ರೇಲರ್ ನೋಡಿದವರಿಗೆ ಗೊತ್ತಾಗಿದೆ. ಕಾಲೇಜು ವಿದ್ಯಾರ್ಥಿ ಆಗಿರೋ ಯುವಗೆ (ಯುವ ರಾಜ್​ಕುಮಾರ್​) ಸಖತ್ ಸಿಟ್ಟು. ಕಾಲೇಜ್​ನಲ್ಲಿ ನಡೆಯುವ ಫೈಟ್​ಗಳಲ್ಲಿ ಕಥಾ ನಾಯಕನ ಹೆಸರೂ ಇರುತ್ತದೆ. ಆತ ಮಾಡಿಕೊಳ್ಳೋ ಕಿತ್ತಾಟಗಳಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ತಂದೆಗೆ (ಅಚ್ಯುತ್ ಕುಮಾರ್) ಸಖತ್ ನೋವುಂಟಾಗುತ್ತದೆ. ಇದನ್ನೂ ಓದಿ: ದೊಡ್ಡ ಮೊತ್ತಕ್ಕೆ ಸೇಲ್​ ಆಯ್ತು ‘ಯುವ’ ಆಡಿಯೋ ಹಕ್ಕು; ಮಾ.29ಕ್ಕೆ ಸಿನಿಮಾ ರಿಲೀಸ್​

ಪದವಿ ಮುಗಿದ ಬಳಿಕ ಯುವ ಸೇರೋದು ಒಂದು ಡಿಲಿವರಿ ಪಾರ್ಟ್ನರ್ ಆಗಿ. ಅಲ್ಲಿಂದ ಬದುಕು ಏನು ಎಂಬುದು ಗೊತ್ತಾಗುತ್ತದೆ. ದುಡಿಯೋಕೆ ಆರಂಭಿಸಿದ ಮೇಲೆ ತಂದೆಯ ನೋವು ಕಥಾ ನಾಯಕನಿಗೆ ತಿಳಿಯೋಕೆ ಆರಂಭ ಆಗುತ್ತದೆ. ಈ ಚಿತ್ರದಲ್ಲಿ ಯುವ, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಸುಧಾರಾಣಿ, ಕಿಶೋರ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯದ ಬಗ್ಗೆಯೂ ಇದೆ.

ಯುವ ಟ್ರೇಲರ್

ಸಿನಿಮಾದ ಟ್ರೇಲರ್​ನಲ್ಲಿ ಕೆಲವು ಡೈಲಾಗ್​ಗಳು ಗಮನ ಸೆಳೆದಿವೆ. ‘ನೀನು ಲೋಕಲ್​, ನಾನು ಪಕ್ಕಾ ಲೋಕಲ್’, ‘ಜೀವನದಲ್ಲಿ ಸಮಸ್ಯೆ ಇರಬೇಕು, ಸಮಸ್ಯೆನೇ ಜೀವನ ಆಗಬಾರದು’ ಎಂಬಿತ್ಯಾದಿ ಡೈಲಾಗ್ ಗಮನ ಸೆಳೆದಿದೆ. ಟ್ರೇಲರ್ ಕೊನೆಯಲ್ಲಿ ‘ಹೆಸರು ನೆನಪಿದ್ಯಲ್ಲ’ ಎನ್ನುವ ಡೈಲಾಗ್ ಕೇಳುತ್ತದೆ. ಅವರು ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ, ಯುವ ಅವರನ್ನು ಚಿತ್ರರಂಗಕ್ಕೆ ಪರಿಚಯಿಸೋ ಜವಾಬ್ದಾರಿಯನ್ನು ನಿರ್ದೇಶಕ ಸಂತೋಷ್ ಆನಂದ್​ರಾಮ್ ಹೊತ್ತಿದ್ದಾರೆ. ಅವರು ಒಂದು ಪಕ್ಕಾ ಯೂಥ್​ಫುಲ್ ಸಿನಿಮಾ ಕಟ್ಟಿಕೊಡೋ ಸೂಚನೆ ಸಿಕ್ಕಿದೆ. ಈ ಸಿನಿಮಾ ರಿಲೀಸ್​ಗಾಗಿ ಫ್ಯಾನ್ಸ್ ಕಾದಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ