ತಾನು ಪ್ರೀತಿಸಿದ ಯುವತಿಯ ಕುಟುಂಬಸ್ಥರಿಗೆ ದಾವೂದ್, ಛೋಟಾ ಶಕೀಲ್ ಹೆಸರೇಳಿ ಧಮ್ಕಿ, ಆರೋಪಿ ಅರೆಸ್ಟ್
ಆರೋಪಿ ಅಫಾನ್ ಅಹಮದ್ ಯುವತೊಯೊಬ್ಬಳ ಹಿಂದೆ ಬಿದ್ದಿದೆ. ಭೇಟಿಯಾಗು ಇಲ್ಲದಿದ್ದರೆ ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವೆ ಎಂದು ಬೆದರಿಸಿ ಹಣ ಪಡೆದಿದ್ದ. ಈ ವಿಚಾರ ತಿಳಿದು ಯುವತಿ ಕುಟುಂಬಸ್ಥರು ಯುವಕನನ್ನು ಹೇಳಲು ಹೋದಾಗ ದಾವೂದ್ ಇಬ್ರಾಹಿಂ, ಛೋಟ ಶಕೀಲ್ ಹೆಸರೇಳಿ ಬೆದರಿಕೆ ಹಾಕಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಬೆಂಗಳೂರು, ಮಾರ್ಚ್.21: ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಹೆಸರೇಳಿ ಧಮ್ಕಿ ಹಾಕಿದ್ದವನನ್ನು ಭಾರತೀ ನಗರ ಪೊಲೀಸರು (Bharathi Nagar Police Station) ಬಂಧಿಸಿದ್ದಾರೆ. ಅಫಾನ್ ಅಹಮದ್ ಬಂಧಿತ ಆರೋಪಿ. ಈತ ಬೆಂಗಳೂರಲ್ಲಿ ದಾವೂದ್ ಇಬ್ರಾಹಿಂ, ಛೋಟ ಶಕೀಲ್ ಹೆಸರೇಳಿ ಧಮ್ಕಿ ಹಾಕಿ ಹೆದರಿಸಿದ್ದ. ನಮಗೆ ದಾವೂದ್ ಗೊತ್ತು, ಛೋಟಾ ಶಕೀಲ್ ಗೊತ್ತು ಅವರಿಂದಲೇ ಪಾಠ ಕಲಿಸ್ತೀನೆಂದು ಧಮ್ಕಿ ಹಾಕಿದ್ದ. ಈ ಹಿನ್ನೆಲೆ ಪೊಲೀಸರು ಬಂಧಿಸಿದ್ದಾರೆ. ಅಂತರಾಷ್ಟ್ರೀಯ ಡಾನ್ಗಳ ಹೆಸರೇಳಿ ಅವಾಜ್ ಹಾಕಿದ್ದವ ಸದ್ಯ ಜೈಲುಪಾಲಾಗಿದ್ದಾನೆ.
ಭಾರತೀನಗರ ಪೊಲೀಸ್ ಠಾಣೆ ವ್ಯಾಪ್ತಿಯ ಯುವತಿಯ ಹಿಂದೆ ಬಿದ್ದಿದ್ದ ಆರೋಪಿ ಅಫಾನ್, ಯುವತಿಯ ಕುಟುಂಬಕ್ಕೆ ಬೆದರಿಕೆ ಹಾಕಿದ್ದ. ಸಂಬಂಧಿಕರ ಮದುವೆಯಲ್ಲಿ ಆರೋಪಿಗೆ ಯುವತಿಯ ಪರಿಚಯವಾಗಿತ್ತು. ನಂತರ ಇಬ್ಬರೂ ಎರಡು ಮೂರು ಬಾರಿ ಬೇರೆಡೆ ಭೇಟಿಯಾಗಿದ್ರು. ಇತ್ತೀಚೆಗೆ ಯುವಕ ಅಫಾನ್ ಅಹಮದ್ ನನ್ನ ಯುವತಿ ದೂರವಿಟ್ಟಿದ್ದಳು. ಪದೇ ಪದೇ ಭೇಟಿಯಾಗುವಂತೆ ಅಫಾನ್ ಒತ್ತಾಯಿಸ್ತಿದ್ದ. ಭೇಟಿ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಫೋಟೋ ಕಳಿಸ್ತಿದ್ದ. ಡ್ರಗ್ಸ್ ಜೊತೆ ಫೋಟೋ ವಾಟ್ಸಾಫ್ ಮಾಡ್ತಿದ್ದಾಗಿ ಯುವತಿ ದೂರು ನೀಡಿದ್ದಾಳೆ.
ಇದನ್ನೂ ಓದಿ: 35 ಆದರೂ ಮದುವೆಯಾಗಿಲ್ಲ; ವಿವಾಹ ಭಾಗ್ಯ ಕರುಣಿಸೋ ಭಗವಂತ ಎಂದು ದೇವರಿಗೆ ಪತ್ರ ಬರೆದ ಬ್ರಹ್ಮಚಾರಿ ಯುವಕರು
ಯುವತಿ ಕುಟುಂಬಕ್ಕೆ ಜೀವ ಬೆದರಿಕೆ
ಇನ್ನು ಆರೋಪಿ, ಯುವತಿಯ ಅಶ್ಲೀಲ ಫೋಟೋ, ವಿಡಿಯೋಸ್ ಸೋಷಿಯಲ್ ಮೀಡಿಯಾದಲ್ಲಿ ಹಾಕೋದಾಗಿ ಬೆದರಿಕೆವೊಡ್ಡಿ 28 ಸಾವಿರ ಹಣ ಪಡೆದಿದ್ದ. ಈ ವಿಚಾರವನ್ನು ಯುವತಿ ತನ್ನ ಕುಟುಂಬಸ್ಥರಿಗೆ ತಿಳಿಸಿದ್ದಳು. ಆಗ ಯುವತಿ ಕುಟುಂಬಸ್ಥರು ಅಫಾನ್ಗೆ ಬುದ್ದಿ ಹೇಳಲು ಹೋದಾಗ ಅಫಾನ್ ಅವಾಜ್ ಹಾಕಿದ್ದ. ನನ್ನ ತಂದೆಗೆ ದಾವೂದ್ ಇಬ್ರಾಹಿಂ, ಛೋಟಾಶಕೀಲ್ ತುಂಬಾ ಹತ್ತಿರದವರು. ಅವರಿಂದಲೇ ನಿಮ್ಮ ಕುಟುಂಬಕ್ಕೆ ಪಾಠ ಕಲಿಸ್ತೀನಿ ಎಂದು ಜೀವಬೆದರಿಕೆ ಹಾಕಿದ್ದ.
ಸದ್ಯ ಇದರಿಂದ ನೊಂದ ಯುವತಿ ಭಾರತೀನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು ದೂರಿನನ್ವಯ ಲೈಂಗಿಕ ಕಿರುಕುಳ, ಜೀವ ಬೆದರಿಕೆ, ಐಟಿ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೊಫಿ ಅಫಾನ್ನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ