ಬೆಂಗಳೂರು-ಕನ್ಯಾಕುಮಾರಿ ತೆರಳುವ ರೈಲುಗಳು ರದ್ದು, ಇಲ್ಲಿದೆ ಮಾಹಿತಿ
ನಾಗರಕೋಯಿಲ್ ಟೌನ್, ನಾಗರಕೋಯಿಲ್, ಅರಳವಾಯಿಮೊಳಿ ಮತ್ತು ಕನ್ಯಾಕುಮಾರಿಯಲ್ಲಿ ನಡೆಯುತ್ತಿರುವ ಡಬ್ಲಿಂಗ್ ಕಾಮಗಾರಿಯಿಂದಾಗಿ ಬೆಂಗಳೂರಿನಿಂದ ಕನ್ಯಾಕುಮಾರಿಗೆ ತೆರಳುತ್ತಿದ್ದ ರೈಲುಗಳನ್ನು ರದ್ದುಗೊಳಿಸಲಾಗಿದೆ. ಬೆಂಗಳೂರಿನಿಂದ ಕನ್ಯಾಕುಮಾರಿಗೆ ತೆರಳುತ್ತಿದ್ದ ರೈಲುಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ಬೆಂಗಳೂರು, ಮಾರ್ಚ್.21: ನಾಗರಕೋಯಿಲ್ ಟೌನ್, ನಾಗರಕೋಯಿಲ್, ಅರಳವಾಯಿಮೊಳಿ ಮತ್ತು ಕನ್ಯಾಕುಮಾರಿಯಲ್ಲಿ ನಡೆಯುತ್ತಿರುವ ಡಬ್ಲಿಂಗ್ ಕಾಮಗಾರಿಯಿಂದಾಗಿ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗಿದೆ (Trains Cancelled). ಬೆಂಗಳೂರಿನಿಂದ ಕನ್ಯಾಕುಮಾರಿಗೆ ತೆರಳುತ್ತಿದ್ದ ರೈಲುಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ರೈಲು ಸಂಖ್ಯೆ 16526 KSR ಬೆಂಗಳೂರು-ಕನ್ಯಾಕುಮಾರಿ ಡೈಲಿ ಎಕ್ಸ್‌ಪ್ರೆಸ್, ಮಾರ್ಚ್ 19 ರಂದು ತೆರಳಬೇಕಿದ್ದ ರೈಲು ಕನ್ಯಾಕುಮಾರಿ ಬದಲಿಗೆ ನಾಗರ್‌ಕೋಯಿಲ್‌ನಲ್ಲಿ ಕೊನೆಗೊಂಡಿದೆ.
ರೈಲು ಸಂಖ್ಯೆ 16526 KSR ಬೆಂಗಳೂರು-ಕನ್ಯಾಕುಮಾರಿ ಡೈಲಿ ಎಕ್ಸ್‌ಪ್ರೆಸ್, ಮಾರ್ಚ್ 20, 21, 22, 23, 24 ಮತ್ತು 25 ರಂದು ಪ್ರಯಾಣವನ್ನು ಪ್ರಾರಂಭಿಸುತ್ತಿದ್ದು, ಕನ್ಯಾಕುಮಾರಿ ಬದಲಿಗೆ ಕೊಚುವೇಲಿಯಲ್ಲಿ ಕೊನೆಗೊಳ್ಳುತ್ತದೆ.
ರೈಲು ಸಂಖ್ಯೆ 16525 ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, ಮಾರ್ಚ್ 22, 23, 24, 26 ಮತ್ತು 27 ರಂದು ಕನ್ಯಾಕುಮಾರಿ ಬದಲಿಗೆ ಕೊಚುವೇಲಿಯಿಂದ ಹೊರಡಲಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಹಳಿ ತಪ್ಪಿದ ರೈಲು, ಹಲವು ರೈಲುಗಳ ಸಂಚಾರ ರದ್ದು
ಈ ರೈಲು ಮಾರ್ಗ ಬದಲಾವಣೆ
ರೈಲು ಸಂಖ್ಯೆ 22883 ಪುರಿ-ಯಶವಂತಪುರ ಸಾಪ್ತಾಹಿಕ ಗರಿಬ್ರತ್ ಎಕ್ಸ್‌ಪ್ರೆಸ್, ಮಾರ್ಚ್ 29 ರಂದು ಪ್ರಯಾಣವನ್ನು ಪ್ರಾರಂಭಿಸಲಿದ್ದು, ಧೋನೆಯಲ್ಲಿ ನಿಲುಗಡೆಯ ಬಿಟ್ಟು ನಂದ್ಯಾಲ್, ಯರ್ರಗುಂಟ್ಲಾ ಮತ್ತು ಗೂಟಿ ಕೋಟೆ ಮೂಲಕ ಚಲಿಸುತ್ತದೆ.
ನಾಯಂಡಹಳ್ಳಿಯಲ್ಲಿ ರೈಲು ನಿಲುಗಡೆ
ರೈಲು ಸಂಖ್ಯೆ 06525/06526 KSR ಬೆಂಗಳೂರು-ಮೈಸೂರು-KSR ಬೆಂಗಳೂರು MEMU ವಿಶೇಷವು ಮಾರ್ಚ್ 21 ರಿಂದ ಸೆಪ್ಟೆಂಬರ್ 20 ರವರೆಗೆ ಸಾಮಾನ್ಯ ಸಮಯದೊಂದಿಗೆ ನಾಯಂಡಹಳ್ಳಿಯಲ್ಲಿ ಕೆಲ ನಿಮಿಷಗಳ ಕಾಲ ನಿಲ್ಲುತ್ತದೆ.
ರಾಜಸ್ಥಾನದ ಅಜ್ಮೀರ್‌ನ ಮದರ್ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ. ಸಬರಮತಿಯಿಂದ ಅಜ್ಮೀರ್ ಮೂಲಕ ಆಗ್ರಾ ಕ್ಯಾಂಟ್‌ಗೆ ಹೋಗುತ್ತಿದ್ದ ರೈಲು ಸಂಖ್ಯೆ 12548 ಸಬರಮತಿ-ಆಗ್ರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಸಹಿತ ನಾಲ್ಕು ಬೋಗಿಗಳು ಹಳಿತಪ್ಪಿ ರೈಲು ಅಪಘಾತ ಸಂಭವಿಸಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ 6 ರೈಲುಗಳನ್ನು ರೈಲ್ವೆ ರದ್ದುಗೊಳಿಸಿದ್ದು, ಎರಡು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.
ಈ ರೈಲುಗಳನ್ನು ರದ್ದುಗೊಳಿಸಲಾಗಿದೆ
ರೈಲು ಸಂಖ್ಯೆ 12065, ಅಜ್ಮೀರ್-ದೆಹಲಿ ಸರೈ ರೋಹಿಲ್ಲಾ ರೈಲು ಸಂಖ್ಯೆ 22987, ಅಜ್ಮೀರ್-ಆಗ್ರಾ ಫೋರ್ಟ್ ರೈಲು ಸಂಖ್ಯೆ 09605, ಅಜ್ಮೀರ್-ಗಂಗಾಪುರ ಸಿಟಿ ರೈಲು ಸಂಖ್ಯೆ 09639, ಅಜ್ಮೀರ್-ರೇವಾರಿ ರೈಲು ಸಂಖ್ಯೆ 19735, ಜೈಪುರ-ಮಾರ್ವಾರ್ ರೈಲು ಸಂಖ್ಯೆ 19736, ಮಾರ್ವಾರ್-ಜೈಪುರ್ ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:32 am, Thu, 21 March 24