ಹೋಳಿ ಹಬ್ಬ: ಬಿಹಾರದಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ
ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ಬಿಹಾರದ ಜನತೆಗೆ ಅನುಖುಲ ಮಾಡಿಕೊಡುವ ನಿಟ್ಟಿನಲ್ಲಿ ಪಾಟ್ನಾ ಹಾಗೂ ಬೆಂಗಳೂರು ನಡುವೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ಹೋಳಿ ಮಾರ್ಚ್ 25 ರಂದು ಮತ್ತು ಹೋಳಿಕಾ ದಹನ್ ಮಾರ್ಚ್ 24 ರಂದು ನಡೆಯಲಿದೆ.
ಕರ್ನಾಟಕಕ್ಕೆ ಬಿಹಾರದಿಂದ ವಲಸೆ ಬಂದಿರುವ ಹಲವು ಕಾರ್ಮಿಕರಿದ್ದಾರೆ. ಅವರೂ ಕೂಡ ಹೋಳಿ ಹಬ್ಬವನ್ನು ತಮ್ಮ ಕುಟುಂಬದವರೊಂದಿಗೆ ಆಚರಿಸಬೇಕೆನ್ನುವ ಕನಸು ಹೊತ್ತಿರುತ್ತಾರೆ. ಹೀಗಾಗಿ ಈ ಬಾರಿ ಪಾಟ್ನಾದಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆಯನ್ನು ಕಲ್ಪಿಸಲಾಗಿದೆ. ಬೆಂಗಳೂರು ಅಥವಾ ಕರ್ನಾಟಕದಲ್ಲಿರುವ ಯಾವುದೇ ಬಿಹಾರಿಗಳು ಸುಲಭವಾಗಿ ತಮ್ಮ ಊರಿಗೆ ತಲುಪಬಹುದಾಗಿದೆ.
ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಪೂರ್ವ ಮಧ್ಯ ರೈಲ್ವೆ ಮುಜಾಫರ್‌ಪುರ ಮತ್ತು ಯಶವಂತಪುರ ನಡುವೆ ಹೋಳಿ ವಿಶೇಷ ರೈಲುಗಳನ್ನು ಓಡಿಸಲಿದೆ. ಈ ಬಾರಿ ಹೋಳಿ ಮಾರ್ಚ್ 25 ರಂದು ಮತ್ತು ಹೋಳಿಕಾ ದಹನ್ ಮಾರ್ಚ್ 24 ರಂದು ನಡೆಯಲಿದೆ.
ಇದಕ್ಕೂ ಮೊದಲು 23ರಂದು ಶನಿವಾರ ಅಥವಾ 21 ಅಥವಾ 22ರಂದು ಎಲ್ಲರೂ ತಮ್ಮ ಊರುಗಳಿಗೆ ತೆರಳಲು ಪಯಣ ಆರಂಭಿಸುತ್ತಾರೆ.
ಮಾರ್ಚ್ 22 ರಂದು ಬೆಂಗಳೂರಿನಿಂದ ಪಾಟ್ನಾಗೆ ರೈಲು
ಸಂಘಮಿತ್ರ ಎಕ್ಸ್‌ಪ್ರೆಸ್ (12295 ಸಂಘಮಿತ್ರ ಎಕ್ಸ್‌ಪ್ರೆಸ್)
ಬಾಗ್ಮತಿ ಎಕ್ಸ್‌ಪ್ರೆಸ್ (12578 ಬಾಗ್ಮತಿ ಎಕ್ಸ್‌ಪ್ರೆಸ್)
ಬೆಂಗಳೂರು ದಾನಪುರ ವಿಶೇಷ ರೈಲು (03246 Smvb Dnr Spl)
ಮಾರ್ಚ್ 29 ಮತ್ತು ಏಪ್ರಿಲ್ 5 ರಂದು (ಶುಕ್ರವಾರ) ರೈಲು ಸಂಖ್ಯೆ 05271 ಮುಜಫರ್‌ಪುರದಿಂದ ಮಧ್ಯಾಹ್ನ 3.30 ಕ್ಕೆ ಹೊರಟು ಮುಂದಿನ ಭಾನುವಾರ ಸಂಜೆ 7 ಗಂಟೆಗೆ ಯಶವಂತಪುರಕ್ಕೆ ಆಗಮಿಸುತ್ತದೆ. ಏಪ್ರಿಲ್ 1 ಮತ್ತು 8 ರಂದು (ಸೋಮವಾರ) ರೈಲು ಸಂಖ್ಯೆ 05272 ಯಶವಂತಪುರದಿಂದ ಬೆಳಿಗ್ಗೆ 7.30 ಕ್ಕೆ ಹೊರಟು ಮರುದಿನ ಬುಧವಾರ ಮಧ್ಯಾಹ್ನ ಮುಜಾಫರ್‌ಪುರ ತಲುಪಲಿದೆ.
ರೈಲುಗಳು ಹಾಜಿಪುರ, ಪಟ್ಲಿಪುತ್ರ, ಅರಾ, ಬಕ್ಸರ್, ಪಂ.ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಪ್ರಯಾಗ್ರಾಜ್ ಛೋಕಿ, ಮಾಣಿಕ್‌ಪುರ್, ಸತ್ನಾ, ಕಟ್ನಿ, ಜಬಲ್‌ಪುರ, ನರಸಿಂಗ್‌ಪುರ್, ಪಿಪಾರಿಯಾ, ಇಟಾರ್ಸಿ, ನಾಗಪುರ, ಬಲ್ಹರ್ಷಾ, ಸಿರ್ಪುರ್ ಕಾಘಜ್‌ನಗರ, ರಾಮಗುಂಡಂ, ರಾಮಗುಂಡಂ , ಶಾದ್‌ನಗರ, ಜಡ್‌ಚರ್ಲಾ, ಮಹಬೂಬ್‌ನಗರ, ಗದ್ವಾಲ್, ಕರ್ನೂಲ್ ಸಿಟಿ, ಧೋಣೆ, ಗೂಟಿ, ಅನಂತಪುರ ಮತ್ತು ಧರ್ಮಾವರಂ.
ರೈಲು ಸಂಖ್ಯೆ 16320 SMVT ಬೆಂಗಳೂರು-ಕೊಚುವೇಲಿ ಬೈ-ವೀಕ್ಲಿ ಎಕ್ಸ್‌ಪ್ರೆಸ್ ಅನ್ನು ತಿರುವನಂತಪುರಂ ರೈಲ್ವೆ ವಿಭಾಗದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳ ಕಾರಣ ಮಾರ್ಚ್ 15 ರಂದು ರಿ ಶೆಡ್ಯೂಲ್ ಮಾಡಲಾಗುತ್ತಿದೆ. ಸಮಯ ಬದಲಾವಣೆಯಾಗಬಹುದು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ