ರಾಜಸ್ಥಾನದಲ್ಲಿ ಹಳಿ ತಪ್ಪಿದ ರೈಲು, ಹಲವು ರೈಲುಗಳ ಸಂಚಾರ ರದ್ದು

ರಾಜಸ್ಥಾನದ ಅಜ್ಮೀರ್‌ನ ಮದರ್ ರೈಲು ನಿಲ್ದಾಣದ ಬಳಿ ಸೂಪರ್‌ಫಾಸ್ಟ್ ರೈಲಿನ ನಾಲ್ಕು ಬೋಗಿಗಳು ಮತ್ತು ಎಂಜಿನ್ ಹಳಿತಪ್ಪಿದ ನಂತರ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ. ತಡರಾತ್ರಿ 1 ಗಂಟೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ರಾಜಸ್ಥಾನದಲ್ಲಿ ಹಳಿ ತಪ್ಪಿದ ರೈಲು, ಹಲವು ರೈಲುಗಳ ಸಂಚಾರ ರದ್ದು
ರೈಲುImage Credit source: India TV
Follow us
ನಯನಾ ರಾಜೀವ್
|

Updated on: Mar 18, 2024 | 7:46 AM

ರಾಜಸ್ಥಾನದ ಅಜ್ಮೀರ್ ಬಳಿ ತಡರಾತ್ರಿ ರೈಲು ಹಳಿತಪ್ಪಿದ ಪರಿಣಾಮ ಹಲವು ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಪಘಾತದ ನಂತರ, ಭಾರತೀಯ ರೈಲ್ವೇ ಹಲವು ರೈಲುಗಳನ್ನು ರದ್ದುಗೊಳಿಸಿದೆ ಮತ್ತು ಕೆಲವು ರೈಲುಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಈ ಭಾಗದಲ್ಲಿ ಹಾದುಹೋಗುವ ರೈಲುಗಳ ವೇಳಾಪಟ್ಟಿಯನ್ನು ನೋಡಿದ ನಂತರವೇ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರೆಸಬೇಕು.

ಭಾನುವಾರ ರಾತ್ರಿ 1.04 ಕ್ಕೆ, ರೈಲು ಸಂಖ್ಯೆ 12548, ಸಬರಮತಿ-ಆಗ್ರಾ ಕ್ಯಾಂಟ್ ಅಜ್ಮೀರ್ ಬಳಿಯ ಮದರ್‌ನಲ್ಲಿ ಹೋಮ್ ಸಿಗ್ನಲ್ ಬಳಿ ಹಳಿತಪ್ಪಿತು, ಇದರಿಂದಾಗಿ ಎಂಜಿನ್ ಮತ್ತು ನಾಲ್ಕು ಜನರಲ್ ಬೋಗಿಗಳು ಹಳಿತಪ್ಪಿದವು. ಇದರಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ರೈಲ್ವೇ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತಲುಪಿದ್ದು, ಅಪಘಾತ ಪರಿಹಾರ ರೈಲು ಮದರ್ ತಲುಪಿದ್ದು, ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ.

ಈ ರೈಲಿನ ಹಿಂಭಾಗವನ್ನು ಅಜ್ಮೀರ್‌ಗೆ ಕೊಂಡೊಯ್ಯಲಾಗುತ್ತಿದೆ. ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಅಜ್ಮೀರ್ ನಿಲ್ದಾಣದಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ ಮತ್ತು ಸಹಾಯವಾಣಿ ಸಂಖ್ಯೆ 0145-2429642 ಅನ್ನು ನೀಡಿದೆ. ಈ ಸಂಖ್ಯೆಗೆ ಸಂಪರ್ಕಿಸುವ ಮೂಲಕ ರೈಲು ಸಂಬಂಧಿತ ಮಾಹಿತಿಯನ್ನು ಪಡೆಯಬಹುದು.

ಮತ್ತಷ್ಟು ಓದಿ: ವಿಜಯನಗರ: ಹಳಿ ತಪ್ಪಿದ ಗೂಡ್ಸ್ ರೈಲು, ಈ ಮಾರ್ಗದ ಹಲವು ರೈಲುಗಳ ಸಂಚಾರ ರದ್ದು; ಇಲ್ಲಿದೆ ಮಾಹಿತಿ

ಈ ರೈಲುಗಳನ್ನು ರದ್ದುಗೊಳಿಸಲಾಗಿದೆ

-ರೈಲು ಸಂಖ್ಯೆ 12065, ಅಜ್ಮೀರ್-ದೆಹಲಿ ಸರೈ ರೋಹಿಲ್ಲಾ ಮಾರ್ಚ್ 18 ರಂದು ರದ್ದುಗೊಂಡಿದೆ. – ರೈಲು ಸಂಖ್ಯೆ 22987, ಅಜ್ಮೀರ್-ಆಗ್ರಾ ಫೋರ್ಟ್ ಮಾರ್ಚ್ 18 ರಂದು ರದ್ದುಗೊಂಡಿದೆ. -ರೈಲು ಸಂಖ್ಯೆ 09605, ಅಜ್ಮೀರ್-ಗಂಗಾಪುರ ಸಿಟಿ ಮಾರ್ಚ್ 18 ರಂದು ರದ್ದುಗೊಂಡಿದೆ. -ರೈಲು ಸಂಖ್ಯೆ 09639, ಅಜ್ಮೀರ್-ರೇವಾರಿ ಮಾರ್ಚ್ 18 ರಂದು ರದ್ದುಗೊಂಡಿದೆ. -ರೈಲು ಸಂಖ್ಯೆ 19735, ಜೈಪುರ-ಮಾರ್ವಾರ್ ಮಾರ್ಚ್ 18 ರಂದು ರದ್ದುಗೊಂಡಿದೆ. – ರೈಲು ಸಂಖ್ಯೆ 19736, ಮಾರ್ವಾರ್-ಜೈಪುರ್ ಮಾರ್ಚ್ 18 ರಂದು ರದ್ದುಗೊಂಡಿದೆ.

ಈ ರೈಲುಗಳ ಮಾರ್ಗವನ್ನು ಬದಲಿಸಲಾಗುವುದು -ರೈಲು ಸಂಖ್ಯೆ 12915, ಸಬರಮತಿ-ದೆಹಲಿ ರೈಲು ಸೇವೆಯನ್ನು ದೊರೈ-ಮದರ್ (ಅಜ್ಮೀರ್ ಹೊರತುಪಡಿಸಿ) ಮೂಲಕ ತಿರುಗಿಸಲಾಗಿದೆ – ರೈಲು ಸಂಖ್ಯೆ. 17020, ಹೈದರಾಬಾದ್-ಹಿಸಾರ್ ರೈಲು ಸೇವೆಯನ್ನು ಆದರ್ಶ್ ನಗರ-ಮಾದರ್ ಮೂಲಕ ತಿರುಗಿಸಲಾಗಿದೆ (ಅಜ್ಮೀರ್ ಹೊರತುಪಡಿಸಿ)

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್