ಚಾಲಕ ರಹಿತ ಮೆಟ್ರೋ ರೈಲು ಸಂಚಾರ ಪರಿಶೀಲಿಸಿದ ಸಂಸದ ತೇಜಸ್ವಿ ಸೂರ್ಯ
ಒಟ್ಟು 18.82 ಕಿ.ಮೀ ಇರುವ ಹಳದಿ ಮಾರ್ಗದಲ್ಲಿ ಬಿಎಂಆರ್ಸಿಎಲ್ನ ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ ಸಂಚರಿಸಲಿದ್ದು, ಇದರ ಪ್ರಯೋಗಾರ್ಥ ಸಂಚಾರ ಆರಂಭಗೊಂಡಿದೆ. ಈ ಹಿನ್ನಲೆ ಇಂದು(ಮಾ.08) ಚಾಲಕ ರಹಿತ ಮೆಟ್ರೋ ಟ್ರಯಲ್ನ್ನು ಪರಿಶೀಲಿಸಿದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು, ಮೆಟ್ರೋ ಟ್ರೈನ್ನಲ್ಲಿ ಕುಳಿತು ಸಂಚಾರ ಮಾಡಿದರು. ನಂತರ ತಾಂತ್ರಿಕ ಹಾಗೂ ಸುರಕ್ಷತೆಯ ಬಗ್ಗೆ ಮೆಟ್ರೋ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಬೆಂಗಳೂರು, ಮಾ.08: ಬಿಎಂಆರ್ಸಿಎಲ್ನ(BMRCL) ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ (Bengaluru Driverless Metro) ರೈಲಿನ ಪ್ರಾಯೋಗಾರ್ಥ ಸಂಚಾರ ಗುರುವಾರ(ಮಾ.07) ಸಂಜೆಯಿಂದ ಹಳದಿ ಮಾರ್ಗದಲ್ಲಿ ಆರಂಭಗೊಂಡಿದೆ. ಈ ಹಿನ್ನಲೆ ಇಂದು(ಮಾ.08) ಚಾಲಕ ರಹಿತ ಮೆಟ್ರೋ ಟ್ರಯಲ್ನ್ನು ಪರಿಶೀಲಿಸಿದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು, ಮೆಟ್ರೋ ಟ್ರೈನ್ನಲ್ಲಿ ಕುಳಿತು ಸಂಚಾರ ಮಾಡಿದರು. ನಂತರ ತಾಂತ್ರಿಕ ಹಾಗೂ ಸುರಕ್ಷತೆಯ ಬಗ್ಗೆ ಮೆಟ್ರೋ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಇನ್ನು ಪರಿಶೀಲನೆ ಬಳಿಕ ಮಾತನಾಡಿ, ‘ಬೆಂಗಳೂರಿನ ಅದರಲ್ಲೂ ಐಟಿ ಹಬ್ ಟ್ರಾಫಿಕ್ ಸಮಸ್ಯೆಗೆ ಹಳದಿ ಲೈನ್ ಮೆಟ್ರೋ ಪರಿಹಾರವಾಗಿದೆ. ಆರ್ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ ಸುಮಾರು ಹದಿನೆಂಟುವರೆ ಕಿ.ಮಿ ಅಂತರದ ಯೆಲ್ಲೋ ಲೈನ್ ಇದಾಗಿದೆ. ಈ ಮಾರ್ಗ ಆರಂಭವಾದರೆ 5 ಲಕ್ಷ ಮಂದಿ ನಿತ್ಯ ಸಂಚಾರ ಮಾಡಲಿದ್ದಾರೆ. ಇನ್ನು ಚೀನಾದ ಇಂಜಿನಿಯರ್ಸ್ಗಳಿಗೆ ವೀಸಾ ಸಿಗದ ಹಿನ್ನೆಲೆ ಟೆಸ್ಟಿಂಗ್ ತಡವಾಗಿತ್ತು. ಸಿವಿಲ್ ಕೆಲಸ ಮುಗಿದರೂ ಕೂಡ ಮೆಟ್ರೋ ಟ್ರಯಲ್ ರನ್ ಆಗಿರಲಿಲ್ಲ.
ಇದನ್ನೂ ಓದಿ:Driverless Metro: ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲು ಟ್ರಯಲ್ ರನ್ ಆರಂಭ
ಟೆಸ್ಟಿಂಗ್ ಮಾಡ್ತಿರುವ 15 ಮಂದಿ ಚೀನಾ ಇಂಜಿನಿಯರ್ಸ್
ಈ ಹಿನ್ನಲೆ ಕೇಂದ್ರ ಗೃಹ ಸಚಿವರ ನೆರವಿನಿಂದ ಚೀನಾ ಇಂಜಿನಿಯರ್ಸ್ಗಳಿಗೆ ವೀಸಾ ಮಂಜೂರು ಮಾಡಲಾಯಿತು. ಸದ್ಯ 15 ಮಂದಿ ಚೀನಾ ಇಂಜಿನಿಯರ್ಸ್ ಟೆಸ್ಟಿಂಗ್ ಮಾಡುತ್ತಿದ್ದಾರೆ. ರೈಲ್ ಸೇಫ್ಟಿ ಮತ್ತು ಡಿಸೈನ್ ಆರ್ಗನೈಸೇಶನ್ ಅನುಮತಿ ಬೇಕಿದೆ. ಇದರಿಂದ ಲೋಕೊ ಪೈಲಟ್ ಲೆಸ್ ಮೆಟ್ರೋ ಚಾಲನೆಗೆ ಇನ್ನೂ ನಾಲ್ಕು ತಿಂಗಳು ತಡವಾಗಲಿದೆ. ಪ್ರಯಾಣಿಕರ ಸುರಕ್ಷತಾ ಕ್ರಮಗಳು, ತಾಂತ್ರಿಕ ಕಾರ್ಯಕ್ಷಮತೆ ಪರೀಕ್ಷೆ ಮಾಡಿ, ಬಳಿಕ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅವಕಾಶ ಮಾಡಲಾಗುತ್ತದೆ ಎಂದು ಲೋಕೋ ಫೈಲಟ್ ಲೆಸ್ ಮೆಟ್ರೋ ಪರಿಶೀಲನೆ ಬಳಿಕ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ