ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಆಂಧ್ರ ಅಭಿವೃದ್ಧಿ ಎಂದ ಪ್ರಧಾನಿ ಮೋದಿ

ಆಂಧ್ರದ ಚಿಲಕಲೂರಿಪೇಟೆಯಲ್ಲಿ ಚುನಾವಣಾ ರ್‍ಯಾಲಿ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಎನ್​ಡಿಎ ಮೈತ್ರಿಕೂಟಕ್ಕೆ ಈ ಬಾರಿ ನೀವೆಲ್ಲ ಮತ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜೂ.4ರ ಫಲಿತಾಂಶದಲ್ಲಿ 400ಕ್ಕೂ ಅಧಿಕ ಸೀಟ್ ಗೆಲ್ಲಬೇಕು. ಚಂದ್ರಬಾಬು, ಪವನ್ ಕಲ್ಯಾಣ್​​ನಿಂದ ಎನ್​ಡಿಎ ಮೈತ್ರಿಗೆ ಮತ್ತಷ್ಟು ಬಲ ಬಂದಿದೆ ಎಂದಿದ್ದಾರೆ.

ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಆಂಧ್ರ ಅಭಿವೃದ್ಧಿ ಎಂದ ಪ್ರಧಾನಿ ಮೋದಿ
ಚಂದ್ರಬಾಬು, ಪ್ರಧಾನಿ ಮೋದಿ, ಪವನ್ ಕಲ್ಯಾಣ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 17, 2024 | 8:05 PM

ಆಂಧ್ರಪ್ರದೇಶ, ಮಾರ್ಚ್​ 17: ಎನ್​ಡಿಎ ಮೈತ್ರಿಕೂಟಕ್ಕೆ ಈ ಬಾರಿ ನೀವೆಲ್ಲ ಮತ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಆಂಧ್ರದ ಚಿಲಕಲೂರಿಪೇಟೆಯಲ್ಲಿ ಚುನಾವಣಾ ರ್‍ಯಾಲಿ ಬಳಿಕ ಮಾತನಾಡಿದ ಅವರು, ಕೋಟಪ್ಪಕೊಂಡದ ತ್ರಿಮೂರ್ತಿಗಳ ಆಶೀರ್ವಾದ ಸಿಕ್ಕಿದೆ. ಬ್ರಹ್ಮ, ವಿಷ್ಣು, ಮಹೇಶ್ವರ ಆಶೀರ್ವಾದ ನನಗೆ ಸಿಕ್ಕಿದೆ. ಜೂ.4ರ ಫಲಿತಾಂಶದಲ್ಲಿ 400ಕ್ಕೂ ಅಧಿಕ ಸೀಟ್ ಗೆಲ್ಲಬೇಕು. ಚಂದ್ರಬಾಬು, ಪವನ್ ಕಲ್ಯಾಣ್​​ನಿಂದ ಎನ್​ಡಿಎ ಮೈತ್ರಿಗೆ ಮತ್ತಷ್ಟು ಬಲ ಬಂದಿದೆ. ಎನ್​ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಆಂಧ್ರ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದ್ದಾರೆ.

ನಮ್ಮ 10 ವರ್ಷದ ಅವಧಿಯಲ್ಲಿ ಬಡತನ ಪ್ರಮಾಣ ಕಡಿಮೆಯಾಗಿದೆ. ಆಂಧ್ರ ಅಭಿವೃದ್ಧಿ ಆಗಬೇಕಾದರೆ ಡಬಲ್ ಇಂಜಿನ್ ಸರ್ಕಾರ ಅಗತ್ಯವಿದೆ. ಎನ್​ಟಿಆರ್​​ ಜನ್ಮ ಶತಾಬ್ದಿ ಅಂಗವಾಗಿ ನಾಣ್ಯ ಬಿಡುಗಡೆ ಮಾಡಿದ್ದೇವೆ. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್​ಗೆ ಭಾರತ ರತ್ನ ನೀಡಿ ಗೌರವ ನೀಡಲಾಗಿದೆ. ಎನ್​​ಟಿಆರ್, ಪಿ.ವಿ.ನರಸಿಂಹರಾವ್​ರನ್ನು ಕಾಂಗ್ರೆಸ್ ಅವಮಾನಿಸಿದೆ. ಜಗನ್ ಸರ್ಕಾರ, ಕಾಂಗ್ರೆಸ್ ಪಕ್ಷ ಎರಡೂ ಒಂದೇ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ: ಆಂಧ್ರಪ್ರದೇಶದಿಂದ ಪ್ರಧಾನಿ ಮೋದಿ ಮೊದಲ ರ್‍ಯಾಲಿ ಆರಂಭ

ಭ್ರಷ್ಟಾಚಾರ, ಅಕ್ರಮಗಳಿಂದ ಆಂಧ್ರ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಬಾರಿ ಆಂಧ್ರ ಜನತೆ ಎರಡು ಸಂಕಲ್ಪಗಳನ್ನು ಕೈಗೊಳ್ಳಬೇಕು. ನೀವು ದೆಹಲಿ, ಆಂಧ್ರದಲ್ಲಿ ಎನ್​ಡಿಎಯನ್ನು ಅಧಿಕಾರಕ್ಕೆ ತರಬೇಕು ಎಂದಿದ್ದಾರೆ.

ದೇಶದಲ್ಲಿ ಎನ್‌ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಪಾಲನಾಡು ಇಲ್ಲಿ ಸುಮಾರು 5000 ಶಾಶ್ವತ ಮನೆಗಳನ್ನು ನಿರ್ಮಿಸಿ ಬಡವರಿಗೆ ಒದಗಿಸಲಾಗಿದೆ. ಸಾಕಷ್ಟು ಕುಟುಂಬಗಳಿಗೆ ನಲ್ಲಿ ಸಂಪರ್ಕ ಸಿಕ್ಕಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಆಂಧ್ರಪ್ರದೇಶದಲ್ಲಿ 1.25 ಕೋಟಿಗೂ ಹೆಚ್ಚು ಬಡವರು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಆಂಧ್ರಪ್ರದೇಶವನ್ನು ಅಭಿವೃದ್ಧಿ ಪಡೆಸುವುದೇ ಎನ್‌ಡಿಎ ಗುರಿಯಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಬ್ ಕೀ ಬಾರ್, 400 ಪಾರ್! ನಾವು ಸಾಧಿಸಿ ತೋರಿಸುತ್ತೇವೆ: ಚುನಾವಣೆ ದಿನಾಂಕ ಪ್ರಕಟ ಬೆನ್ನಲ್ಲೇ ಪ್ರಧಾನಿ ಮೋದಿ ಘೋಷಣೆ

ಈ ಬಾರಿ ಜೂನ್ 4 ರಂದು ಚುನಾವಣಾ ಫಲಿತಾಂಶ ಬರಲಿದೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಬೇಕು. ನೀವು ಅಭಿವೃದ್ಧಿ ಹೊಂದಿದ ಆಂಧ್ರಪ್ರದೇಶವನ್ನು ನೋಡಲು ಬಯಸಿದರೆ, ನೀವು ಎನ್ಡಿಎಗೆ 400+ ಸ್ಥಾನಗಳನ್ನು ಪಡೆಯಲು ಶ್ರಮಿಸಬೇಕು. ಪ್ರಾದೇಶಿಕ ಭಾವನೆಗಳು ಮತ್ತು ರಾಷ್ಟ್ರೀಯ ಭಾವನೆಗಳನ್ನು ಸೇರಿಸಿಕೊಂಡು ಎನ್​ಡಿಎ ಮೈತ್ರಿಕೂಟ ಮುನ್ನಡೆಯಲಿದೆ ಎಂದರು.

ಈ ಮೈತ್ರಿಗೆ ಸೇರುವ ಪಾಲುದಾರರ ಸಂಖ್ಯೆ ಹೆಚ್ಚಾದಂತೆ, ಬಲವು ಹೆಚ್ಚಾಗುತ್ತದೆ. ಚಂದ್ರಬಾಬು ಮತ್ತು ಪವನ್ ಕಲ್ಯಾಣ್ ಇಬ್ಬರೂ ದೀರ್ಘಕಾಲದವರೆಗೆ ಆಂಧ್ರ ರಾಜ್ಯದ ಅಭಿವೃದ್ಧಿಗಾಗಿ ಮಾಡಿದ ಪ್ರಯತ್ನಗಳನ್ನು ಗುರುತಿಸಲು ಬಯಸಿದ್ದರು. ಅಭಿವೃದ್ಧಿ ಹೊಂದಿದ ಭಾರತವೇ ಎನ್​ಡಿಎ ಮೈತ್ರಿಕೂಟದ ಗುರಿ. ಎಪಿಯಲ್ಲಿ ಡಬಲ್ ಇಂಜಿನ್ ಸರ್ಕಾರ ಇರಬೇಕು ಎಂದಿದ್ದಾರೆ.

ರಾಷ್ಟ್ರೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.