AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೂಂ ಕ್ಲೀನ್ ಮಾಡಬೇಕು ಎಂಬುದನ್ನು ನೆನಪಿಸುತ್ತದೆ’; ಇನ್​ಸ್ಟಾ ಬಯೋ ಅರ್ಥ ಹೇಳಿದ ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್, 'ಕಾಂತಾರ: ಚಾಪ್ಟರ್ 1' ಮೂಲಕ ದೇಶಾದ್ಯಂತ ಜನಪ್ರಿಯರಾದವರು. ಅವರ ಇನ್‌ಸ್ಟಾಗ್ರಾಮ್ ಬಯೋ "Rukmini, you weren't born for real life" ಕುರಿತು ನಾನಾ ಅರ್ಥ ಕಲ್ಪಿಸಲಾಗಿತ್ತು. ಆದರೆ ಇತ್ತೀಚೆಗೆ ರುಕ್ಮಿಣಿ ಅವರು, ಇದಕ್ಕೆ ಆಳವಾದ ಅರ್ಥವಿಲ್ಲ, ಕೇವಲ ತಮ್ಮ ರೂಮ್ ಕ್ಲೀನ್ ಮಾಡಿಕೊಳ್ಳುವ ನೆನಪಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಜನರು ಊಹಿಸಿದ ಗಂಭೀರ ವ್ಯಾಖ್ಯಾನಗಳಿಗೆ ತಮಾಷೆಯ ತಿರುವು ನೀಡಿದ್ದಾರೆ.

‘ರೂಂ ಕ್ಲೀನ್ ಮಾಡಬೇಕು ಎಂಬುದನ್ನು ನೆನಪಿಸುತ್ತದೆ’; ಇನ್​ಸ್ಟಾ ಬಯೋ ಅರ್ಥ ಹೇಳಿದ ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್
ರಾಜೇಶ್ ದುಗ್ಗುಮನೆ
|

Updated on: Apr 27, 2026 | 8:58 AM

Share

ಎಲ್ಲಾ ಭಾಷೆಗಳಲ್ಲೂ ನಟಿಸಿ ಫೇಮಸ್ ಆದವರು ರುಕ್ಮಿಣಿ ವಸಂತ್. ಅವರಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದೇಶಮಟ್ಟದಲ್ಲಿ ಜನಪ್ರಿಯರನ್ನಾಗಿ ಮಾಡಿತು. ಈಗ ರುಕ್ಮಿಣಿ ವಸಂತ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗೆ ಅವರು ಸಂದರ್ಶನ ಒಂದರಲ್ಲಿ ತಮ್ಮ ಇನ್​​ಸಟಾ ಬಯೋದ ಅರ್ಥವೇನು ಎಂಬುದನ್ನು ಹೇಳಿದ್ದಾರೆ. ಇದಕ್ಕೆ ಹೆಚ್ಚು ಆಳ ಅರ್ಥ ಇಲ್ಲ ಎಂಬುದನ್ನು ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ಅಲ್ಲದೆ ಒಂದು ಅಚ್ಚರಿಯ ಮಾಹಿತಿಯನ್ನು ಕೂಡ ರಿವೀಲ್ ಮಾಡಿದ್ದಾರೆ.

ರುಕ್ಮಿಣಿ ವಸಂತ್ ಅವರು ಇನ್​​ಸಟಾಗ್ರಾಮ್​​ನಲ್ಲಿ ‘ರುಕ್ಮಿಣಿ, ನೀನು ಈ ಲೌಕಿಕ ಅಥವಾ ಸಾಮಾನ್ಯ ಜೀವನಕ್ಕಾಗಿ ಹುಟ್ಟಿದವಳಲ್ಲ’ ಎಂದು ಬರೆದಿದೆ. ಇದಕ್ಕೆ ನಾನಾ ಅರ್ಥವನ್ನು ಜನರು ಕಲ್ಪಿಸಿದ್ದರು. ಈಗ ರುಕ್ಮಿಣಿ ವಸಂತ್ ಅವರು ಇದರ ಅರ್ಥವನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಸಾಯಿ ಪಲ್ಲವಿ ನಟಿಸಬೇಕಿದ್ದ ಬಯೋಪಿಕ್ ಸಿನಿಮಾ ರುಕ್ಮಿಣಿ ವಸಂತ್ ಪಾಲು?

‘ನನ್ನ ಬಯೋದಲ್ಲಿ ಬರೆದಿರುವ ವಿಷಯ ಹೆಚ್ಚು ನಾಟಿಕೀಯವಾಗಿಯೇನು ಇಲ್ಲ. ಅದೇ ರೀತಿ ಆಳ ಅರ್ಥ ಕೂಡ ಇಲ್ಲ. ಒಮ್ಮೆ ನಾನು ನಮ್ಮ ರೂಂ ಕ್ಲೀನ್ ಮಾಡಿಲ್ಲ ಎಂದು ನನ್ನ ತಂಗಿ ಕೂಗಾಡಿದಳು. ಅದಕ್ಕೆ ಹಾಗೆ ಬರೆದುಕೊಂಡಿದ್ದೇನೆ. ನನ್ನ ರೂಂ ಅನ್ನು ಕ್ಲೀನ್ ಮಾಡಿಕೊಳ್ಳಬೇಕು ಎಂಬುದನ್ನು ಆ ಸಾಲು ನೆನಪಿಸುತ್ತದೆ’ ಎಂದಿದ್ದಾರೆ ರುಕ್ಮಿಣಿ ವಸಂತ್.

r

‘Rukmini you weren’t born for real life’ ಎಂಬುದು ಅವರ ಬಯೋದಲ್ಲಿದೆ. ಇದರ ಅರ್ಥವನ್ನು ವಿವರವಾಗಿ ನೋಡೋದಾದರೆ ‘ನಿನ್ನ ವ್ಯಕ್ತಿತ್ವ, ನಿನ್ನ ಆಲೋಚನೆಗಳು ಅಥವಾ ನಿನ್ನ ಗುಣಗಳು ಈ ಸಾಮಾನ್ಯ ಪ್ರಪಂಚದ ಹದಕ್ಕೆ ಹೊಂದಿಕೆಯಾಗುತ್ತಿಲ್ಲ. ಬಹುಶಃ ನೀನು ಅದಕ್ಕಿಂತಲೂ ಮಿಗಿಲಾದ, ಅದ್ಭುತವಾದ ಅಥವಾ ಯಾವುದೋ ಒಂದು ಬೇರೆ ಲೋಕಕ್ಕೆ ಸೇರಿದವಳು. ಇಲ್ಲಿನ ಸಣ್ಣತನಗಳು ಅಥವಾ ಕಷ್ಟ-ಸುಖದ ಸಾಮಾನ್ಯ ಬದುಕು ನಿನಗಲ್ಲ’ ಎಂದು ಹೇಳುವ ವ್ಯಂಗ್ಯದ ಮಾತಾಗಿದೆ. ಸರಳವಾಗಿ ಹೇಳಬೇಕೆಂದರೆ, ‘ನೀನು ಈ ಸಾಧಾರಣ ಬದುಕಿಗಿಂತ ದೊಡ್ಡವಳು’ ಎಂಬ ಅರ್ಥ ನೀಡುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us